ಹೊನ್ನಾವರ: ಕಳೆದ ಕೆಲ ವರ್ಷಗಳಿಂದ ಅಪಘಾತ ವಲಯ ಎನಿಸಿಕೊಂಡಿರುವ ಬಾಳೆಗದ್ದೆ ತಿರುವಿನಲ್ಲಿ ತಿಂಗಳಿಗೊಂದಾದರೂ ವಾಹನ ಅಪಘಾತಕ್ಕೀಡಾಗುತ್ತಿದ್ದು ಪಲ್ಟಿಯಾಗುವ ವಾಹನಗಳ ಸಂಖ್ಯೆಯಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ. ಅಪಘಾತಕ್ಕೆ ಚಾಲಕರ ನಿರ್ಲಕ್ಷ್ಯದ ಚಾಲನೆ ಒಂದೇ ಕಾರಣವೋ ಅಥವಾ ನಿರ್ಮಾಣವಾಗಿರುವ ರಸ್ತೆಯಲ್ಲಿಯೇ ದೋಷವಿದೆಯೋ ಎನ್ನವ ಬಗ್ಗೆ ಜನತೆ ಗೊಂದಲಗೊಂಡಿದ್ದಾರೆ.

ಮುಗ್ವಾ ಗ್ರಾಮಪಂಚಾಯತ ವ್ಯಾಪ್ತಿಯ ಬಾಳೆಗದ್ದೆ ತಿರುವಿನಲ್ಲಿ ಗುರುವಾರ ರಾತ್ರಿ ಮತ್ತೊಂದು ಲಾರಿ ಮಗುಚಿಬಿದ್ದಿದೆ. ಮೆಕ್ಕೆಜೋಳ ತುಂಬಿಕೊಂಡು ಹೋಗುತ್ತಿದ್ದ ಲಾರಿ ರಾತ್ರಿ 10 ಗಂಟೆ ಸುಮಾರಿಗೆ ಲಾರಿ ಪಲ್ಟಿಯಾಗಿದೆ. ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮೆಕ್ಕೆಜೋಳ ತುಂಬಿದ ಚೀಲಗಳ್ಳೆ ಚೆಲ್ಲಾಪಿಲ್ಲಿಯಾಗಿದೆ.

RELATED ARTICLES  "ಗೋಕರ್ಣ ಗೌರವ" ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ ಪೂ ಶ್ರೀ ಶ್ರೀ ಸದಾನಂದ ಸ್ವಾಮಿಗಳು

ಅಪಘಾತದಲ್ಲಿ ಲಾರಿ ಚಾಲಕ ಗಾಯಗೊಂಡಿದ್ದು, ಆತನಿಗೆ ಚಿಕಿತ್ಸೆ ನೀಡಲು ಅಗತ್ಯ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ಘಟನೆ ಸ್ಥಳಕ್ಕೆ ಪೊಲೀಸರು ಹಾಗೂ ಇತರ ಪ್ರಮುಖರು ಭೇಟಿ ನೀಡಿ ಅಗತ್ಯ ಕ್ರಮ ಕೈಗೊಂಡಿದ್ದಾರೆ. ಮಳೆಯಿಂದ ಮೆಕ್ಕೆ ಜೋಳ ಒದ್ದೆಯಾಗುವ ಸಾದ್ಯತೆಗಳಿದೆ ಎನ್ನಲಾಗಿದ್ದು, ಅದನ್ನು ರಕ್ಷಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.

RELATED ARTICLES  ಮಾಜಿ ಮುಖ್ಯಮಂತ್ರಿ ಡಾ|| ವೀರಪ್ಪ ಮೊಯ್ಲಿ ಅವರಿಗೆ ಭಟ್ಕಳ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಅವರಿಂದ ಸನ್ಮಾನ

ಈ ತಿರುವು ದಿನ ಕಳೆದಂತೆ ಅಪಘಾತ ವಲಯವಾಗಿ ಪರಿಣಮಿಸುತ್ತಿದ್ದು, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವ ಅಗತ್ಯತೆ ಇದೆ ಎಂದು ಸಾರ್ವಜನಿಕವಾಗಿ ಮಾತುಗಳು ಕೇಳಿ ಬರುತ್ತಿದೆ.