ಕುಮಟಾ : ಕುಮಟಾ ತಾಲೂಕಿನ ದೀವಗಿ ಬಳಿ
ಬೈಕ್ ಹಾಗೂ ಮೀನು ಲಾರಿ ನಡುವೆ ಭೀಕರ ಅಪಘಾತವೊಂದು ಸಂಭವಿಸಿದ್ದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ. ಹಿಂಬದಿಯ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಭೀಕರ ಅಪಘಾತದಲ್ಲಿ ಬೈಕ್ ಸವಾರ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬೈಕ್ ನಲ್ಲಿದ್ದ ಇನ್ನೋರ್ವ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದು
ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ರವಾನಿಸಲಾಗಿದೆ.

RELATED ARTICLES  ಎಸ್.ಡಿ.ಎಂ. ಕಾಲೇಜಿನಲ್ಲಿ 'ಸೂಪರ್ ಮೆಗಾ ಕರಿಯರ್ ಕನ್ಸಲ್ಟಿಂಗ್' ಕಾರ್ಯಕ್ರಮ

ವಿದ್ಯಾರ್ಥಿಗಳು ಯಾಕೆ ಜಿಲ್ಲೆಗೆ ಬಂದಿದ್ದರು ಮತ್ತು ಎಲ್ಲಿಗೆ ಹೋಗುತ್ತಿದ್ದರು ಎನ್ನುವ ಮಾಹಿತಿ ಕಲೆಹಾಕುವ ಪ್ರಕ್ರಿಯೆ ನಡೆಯುತ್ತಿದೆ.

ಸ್ಥಳಕ್ಕೆ ಕುಮಟಾ ಪೊಲೀಸರು ದೌಡಾಯಿಸಿದ್ದಾರೆ. ಚತುಷ್ಪಥ ಕಾಮಗಾರಿ ಕೈಗೆತ್ತಿಕೊಂಡಿದ್ದ ಐ.ಆರ್.ಬಿ ಕಂಪನಿ ಟೋಲ್ ಕಲೆಕ್ಷನ್ ಪ್ರಾರಂಭಿಸಿದ ನಂತರ ಕೆಲಸದ ವೇಗ ತೀವೃ ಕುಂಠಿತವಾಗಿದ್ದು ಅಪೂರ್ಣ ಕಾಮಗಾರಿಗಳು ಕಳೆದೆರಡು ವರ್ಷಗಳಿಂದಲೂ ಯಥಾ ಸ್ಥಿತಿಯಲ್ಲಿಯೇ ಮುಂದುವರಿದಿರುವುದೂ ಜಿಲ್ಲೆಯಲ್ಲಿ ರಸ್ತೆ ಅಪಘಾತ ಹೆಚ್ಚಳಕ್ಕೆ ಕಾರಣ ಎನ್ನುವ ಆರೋಪ ಕೇಳಿಬರುತ್ತಿದೆ.

RELATED ARTICLES  ಮಿರ್ಜಾನ್ ಸಮೀಪ ಅಪಘಾತ : ಓರ್ವ ಸಾವು.

ಕುಮಟಾ ತಾಲೂಕಿನಲ್ಲಿ ಪ್ರತಿದಿನ ಒಂದಿಲ್ಲೊಂದು ಅಪಘಾತದ ಸುದ್ದಿ ಕೇಳಿಬರುತ್ತಿದೆ. ರಸ್ತೆ ಸುರಕ್ಷತೆ ಪಾಲನೆ ಜೊತೆಗೆ ವಾಹನ ಸವಾರರು ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎನ್ನುವ ಮಾತುಗಳು ಕೇಳಿ ಬರುತ್ತಿದೆ.