ಕಾರವಾರ: ಅಪರೂಪದ ನಾಲ್ಕು ವರ್ಷದ ಕಪ್ಪು ಚಿರತೆಯೊಂದು ಕಾಡು ಪ್ರಾಣಿಗಳನ್ನು ಹಿಡಿಯಲು ಹಾಕಿದ್ದ ತಂತಿಯ ಉರುಳಿಗೆ ಸಿಲುಕಿ ಮೃತಪಟ್ಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬೆಂಗಳೆ ಗ್ರಾಮದ ಮಂಟಕಾಲ ರಸ್ತೆಯಲ್ಲಿ ಇಂದು ಸಂಭವಿಸಿದೆ.

RELATED ARTICLES  ಹೊನ್ನಾವರ, ಭಟ್ಕಳದಲ್ಲಿ ನಾಳಿನ ಕೊರೋನಾ ಲಸಿಕಾ ಮಾಹಿತಿ

ಉರುಳಿಗೆ ಸಿಲುಕಿದ್ದ ಚಿರತೆ ಒದ್ದಾಡುವುದನ್ನು ನೋಡಿದ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ತಕ್ಷಣದಲ್ಲಿ ಬನವಾಸಿ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಣೆ ಮಾಡಲು ಸ್ಥಳಕ್ಕೆ ಆಗಮಿಸಿದ್ದರಾದರೂ ಅಷ್ಟರಲ್ಲಿಯೇ ಚಿರತೆ ಸಾವನ್ನಪ್ಪಿತ್ತು.

ಒಂದೆಡೆ ಕಾಡು ಪ್ರಾಣಿ ಭೇಟೆಗೆ ಯಾರು ಉರುಳು ಹಾಕಿದ್ದಾರೆ ಎಂಬ ತನಿಖೆಯನ್ನು ಅರಣ್ಯಾಧಿಕಾರಿಗಳು ಕೈಗೊಂಡಿದ್ದಾರೆ. ಇನ್ನೊಂದೆಡೆ ಮಲೆನಾಡು ಭಾಗದಲ್ಲಿ ಇದೇ ಮೊದಲಬಾರಿ ಕಪ್ಪು ಚಿರತೆ ಇರುವುದು ಪತ್ತೆಯಾಗಿರುವುದೆ ಎಂದು ಸಾರ್ವಜನಿಕ ವಲಯದಲ್ಲಿ ಸುದ್ದಿಯಾಗಿದೆ. ಚಿರತೆ ಕಳೆಬರಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

RELATED ARTICLES  ಖ್ಯಾತ ಚಿತ್ರಕಾರ ಬಿ.ಕೆ.ಎಸ್ ವರ್ಮ ಇನ್ನಿಲ್ಲ : ಹೃದಯಾಘಾತದಿಂದ ಕೊನೆಯುಸಿರೆಳೆದ ಕಲಾಕಾರ