ಅಂಕೋಲಾ : ಪಿಂಡಲ್ ಎಂಬ ಸೋಶಿಯಲ್ ಫೋಟೊಗ್ರಫಿ ಆ್ಯಪ್ ಆಯೋಜಿಸಿದ್ದ ಅಂತರರಾಷ್ಟ್ರೀಯ ಫೋಟೊಗ್ರಫಿ ಬಹುಮಾನಕ್ಕೆ ಭಾರತದ ಏಳು ಮಂದಿ ಅಂತರರಾಷ್ಟ್ರೀಯ ಫೋಟೊಗ್ರಾಪರ್ಸ್ ಆಯ್ಕೆಯಾಗಿದ್ದು ಅದರಲ್ಲೋರ್ವರು ಉತ್ತರಕನ್ನಡದ ಅಂಕೋಲಾ ಮೂಲದ ಯುವಕ ಎಂಬುದು ಉತ್ತರಕನ್ನಡಿಗರ ಹೆಮ್ಮೆಗೆ ಲಾರಣವಾಗಿದೆ.
ಪಿಂಡಲ್ ಎಂಬ ಸೋಶಿಯಲ್ ಫೋಟೊಗ್ರಫಿ ಆ್ಯಪ್ #ಫಿಂಡಲ್ವೆಮ್ ಹ್ಯಾಶ್ ಟ್ಯಾಗ್‌ನಡಿ ಜೂನ್ ನಿಂದ ಆಗಸ್ಟ್ 15ರವರೆಗೆ ಸ್ಪರ್ಧೆ ಆಯೋಜಿಸಿತ್ತು. ನಿಸರ್ಗ, ಸಂಸ್ಕೃತಿ, ಫುಡ್ & ಡ್ರಿಂಕ್, ಫ್ರೀ ಟೈಮ್ ಫೋಟೊಗ್ರಫಿ, ಸಾಕುಪ್ರಾಣಿಗಳು ಹೀಗೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಇದಕ್ಕೆ ಒಟ್ಟಾರೆ 5000 ಡಾಲರ್ ಪ್ರೈಸ್ ಘೋಷಿಸಲಾಗಿತ್ತು. #ಫಿಂಡಲ್ವೆಮ್ ಹ್ಯಾಶ್ ಟ್ಯಾಗ್‌ನಡಿ ಮೂರು ತಿಂಗಳುಗಳ ಕಾಲ ಫೋಟೊಗಳನ್ನು ಕಳುಹಿಸಲು ಅವಕಾಶ ನೀಡಲಾಗಿತ್ತು.
ವಿಶ್ವದ ವಿವಿಧೆಡೆಯಿಂದ ನಾಲ್ಕು ಸಾವಿರ ಸ್ಪರ್ಧಾಳುಗಳು ಭಾಗವಹಿಸಿದ್ದರು. ಅಂತಿಮವಾಗಿ ಬುಧವಾರ ಸ್ಪರ್ಧೆಯ ಫಲಿತಾಂಶ ಘೋಷಿಸಲಾಗಿದ್ದು, 50 ವಿಜೇತರನ್ನು ಆಯ್ಕೆ ಮಾಡಲಾಗಿದೆ. ಜಗತ್ತಿನ 20 ತೀರ್ಪುಗಾರರು ಫೋಟೊಗಳಲ್ಲಿ ಅತ್ಯುತ್ತಮವಾದದನ್ನು ಆಯ್ಕೆ ಮಾಡಿದ್ದಾರೆ. ಇದರಲ್ಲಿ ಏಳು ಮಂದಿ ಭಾರತೀಯರಾದ ಪ್ರಮೋದ್ ಗೌಡ, ಶಿಬಾಸಿಶ್ ಶಾಹ್, ಅವ್ರಾ ಘೋಷ್, ಅನಿರ್ಬನ್ ಪಾನ್, ಅರುಣ್ ಶಾಹ್, ಬರ್ಶಾ ಹಮಾಲ್, ಪ್ರಿಯಾಂಕಾ ಸಹಾನಿ ಸೇರಿದ್ದಾರೆ.
ಇದು ಪ್ರಮೋದ್ ಗೌಡ ಪೊಟೋಗ್ರಫಿಗೆ ಸಿಕ್ಕ ಮನ್ನಣೆಯಾಗಿದೆ. ಇನ್ನು ಭಾರತೀಯರಲ್ಲಿ ವಿಜೇತರಾದವರ ಪೈಕಿ ಪ್ರಮೋದ್ ಗೌಡ ಮೂಲತಃ ಉತ್ತರಕನ್ನಡ ಜಿಲ್ಲೆಯ ಅಂಕೋಲಾದ
ಬೆಳಸೆಯವರು. ಇವರು ಐಟಿ ಎಂಜಿನಿಯರ್ ಆಗಿದ್ದು, ಫೋಟೊಗ್ರಫಿ ಇವರ ಹಸ್ಯಾಸವಾಗಿದೆ.
ಕರಾವಳಿ ಭಾಗದ ದೈನಂದಿನ ಬದುಕು, ಕಡಲು ಹಾಗೂ ಪ್ರಕೃತಿ ಸೊಬಗಿನಲ್ಲಿ ತೆಗೆದ ಪೋಟೊಗಳನ್ನು ಸ್ಪರ್ಧೆಗೆ ಕಳುಹಿಸಿದ್ದರು. ಪೋಟೊಗಳು ಇದೀಗ ಆಯ್ಕೆಯಾಗಿದ್ದು, ಅವರಿಗೆ ಚಿನ್ನದ ಪದಕ ಹಾಗೂ 100 ಡಾಲರ್ ಬಹುಮಾನವನ್ನು ಪಿಂಡಲ್ ಘೋಷಿಸಿದೆ.