ಕುಮಟಾ: ಕೇಂದ್ರ ಸರ್ಕಾರ ಜಾರಿ ಮಾಡಿದ ಎಚ್‌ಯುಐಡಿ ಕಾಯ್ದೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ಕುಮಟಾದ ದೈವಜ್ಞ ಚಿನ್ನ-ಬೆಳ್ಳಿ ವ್ಯಾಪಾರಸ್ಥರ ಸಂಘವು ತಹಸೀಲ್ದಾರ್ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

ಇಲ್ಲಿನ ದೈವಜ್ಞ ಚಿನ್ನ-ಬೆಳ್ಳಿ ವ್ಯಾಪಾರಸ್ಥರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ, ಕುಮಟಾ ತಹಸೀಲ್ದಾರ್ ಕಚೇರಿಗೆ ಜಿಲ್ಲಾ ದೈವಜ್ಞ ಜ್ಯುವೆಲ್ಲರಿ ಮರ್ಚಂಟ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಸುರೇಶ ರಾಯ್ಕರ್ ಅಂಕೋಲಾ ಅವರ ನೇತೃತ್ವದಲ್ಲಿ ಆಗಮಿಸಿ ಶಾಂತಿಯುತವಾಗಿ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಪಾರಂಪರಿಕವಾಗಿ ಬಂಗಾರ ಮತ್ತು ಬೆಳ್ಳಿ ಆಭರಣಗಳನ್ನು ಸಿದ್ಧಪಡಿಸಿಕೊಂಡು ವ್ಯಾಪಾರ-ವಹಿವಾಟು ಮಾಡಿಕೊಂಡು ಬಂದಿದ್ದೇವೆ. ಗ್ರಾಹಕರ ವಿಶ್ವಾಸಕ್ಕೆ ಪಾತ್ರರಾದ ನಮಗೆ ಕೇಂದ್ರ ಸರ್ಕಾರ ಜಾರಿ ಮಾಡಿದ ಎಚ್‌ಯುಐಡಿ ಕಾಯ್ದೆಯಿಂದ ಅನ್ಯಾಯ ವೆಸಗಿದಂತಾಗಿದೆ. ಎಚ್‌ಯುಐಡಿ ಕಾಯ್ದೆಯಿಂದಾಗಿ ಆಭರಣಗಳ ಸುರಕ್ಷತೆ ಹಾಗೂ ಚಿನ್ನದ ಡೇಟಾ ಗೌಪ್ಯತೆ ಇರುವುದಿಲ್ಲ. ಗ್ರಾಹಕರು ಚಿನ್ನದ ಆಭರಣಗಳನ್ನು ಬದಲಾಯಿಸಲು ಬರುವುದಿಲ್ಲ. ಆಭರಣಗಳನ್ನು ಮಾರಾಟ ಮಾಡಿದ ಅಂಗಡಿಗಳ ಮಾಹಿತಿ ತಿಳಿಯಲು ಸಾಧ್ಯವಿಲ್ಲ. ಈ ಕಾಯ್ದೆ ಜಾರಿಯಾದಲ್ಲಿ ಚಿನ್ನದ ಉದ್ಯಮಿಗಳು ಮತ್ತು ಕೆಲಸಗಾರರು ಬಿಐಎಸ್ ಅಡಿಯಾಳಂತೆ ಕೆಲಸ ನಿರ್ವಹಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ.

RELATED ARTICLES  ಸ್ವಸಹಾಯ ಸಂಘ ಎಂದರೆ ಜೇನುಗೂಡು ಇದ್ದಂತೆ - ಉಮೇಶ ಮುಂಡಳ್ಳಿ

ಮನವಿಯನ್ನು ಸ್ವೀಕರಿಸಿದ ಗ್ರೇಡ್ ೨ ತಹಸೀಲ್ದಾರ್ ಸತೀಶ ಗೌಡ ಅವರು, ಮನವಿಯನ್ನು ಕೇಂದ್ರ ಸರ್ಕಾರಕ್ಕೆ ರವಾನಿಸುವುದಾಗಿ ತಿಳಿಸಿದರು. ಸುವರ್ಣಕಾರರ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಮಧುಸೂಧನ ಶೇಟ್, ವ್ಯಾಪಾರಸ್ಥರಾದ ರಾಜೇಶ ಶೇಟ್, ರವಿ ಶೇಟ್, ಶ್ರೀಧರ ಶೇಟ್, ಶ್ರೀಪಾದ ಶೇಟ್, ರತ್ನಾಕರ ಶೇಟ್, ಮಾರುತಿ ಶೇಟ್, ಅಜೀತ್ ಶೇಟ್, ಚಂದ್ರಕಾಂತ ಜಿ ಶೇಟ್, ಉಲ್ಲಾಸ ಶೇಟ್, ಧನಂಜಯ ಶೇಟ್, ರಾಘವೇಂದ್ರ ಶೇಟ್, ರಾಮದಾಸ ಶೇಟ್, ವಿನಾಯಕ ಶೇಟ್, ಪ್ರವೀಣ ಶೇಟ್, ಗೌತಮ್ ಶೇಟ್, ನಾಗೇಂದ್ರ ಭಟ್ ಹಾಗೂ ಚಿನ್ನಬೆಳ್ಳಿ ಕೆಲಸಗಾರರು ಉಪಸ್ಥಿತರಿದ್ದರು.

RELATED ARTICLES  ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಡಾ. ಬಿ ಆರ್ ಅಂಬೇಡ್ಕರವರ 127 ನೇ ಜನ್ಮ ದಿನಾಚರಣೆ ಕಾರ್ಯಕ್ರಮ.