ಹೊನ್ನಾವರ : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಹೃದಯ ಭಾಗವಾದ ಬಸ್ ಸ್ಟಾಂಡನಲ್ಲಿ ಆಗುತ್ತಿರುವ ದುರವಸ್ಥೆಗೆ ಸಾರ್ವಜನಿಕರ ಓಡಾಟ ಹೆಣ್ಣುಮಕ್ಕಳ ಮತ್ತು ಹೆಂಗಸರ ಕಷ್ಟ ಕಂಡು ಕರುನಾಡ ವಿಜಯ ಸೇನೆ ಉತ್ತರಕನ್ನಡ ಜಿಲ್ಲೆಯ ಹಾಗೂ ತಾಲೂಕ ಕಾರ್ಯಕರ್ತರು ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ವರದಿಯಾಗಿದೆ.

ಸುಮಾರು ದಿನಗಳಿಂದ ಬಸ್ ಸ್ಟ್ಯಾಂಡ್ ಕಾಮಗಾರಿ ನಡೆಯುತ್ತಿದ್ದು ತಾತ್ಕಾಲಿಕವಾಗಿ ಬಸ್ಸುಗಳ ನಿಲ್ಲಿಸಲು ಒಂದು ಸ್ಥಳವನ್ನು ಸೂಚಿಸಿದರು. ಆ ಸ್ಥಳವನ್ನು ಬಸ್ಸ್ ಚಾಲಕರು ಹಾಗೂ ಕಂಟ್ರೋಲರ್ ಸರಿಯಾದ ಕ್ರಮದಲ್ಲಿ ಬಸ್ಸನ್ನು ಇಡದೆ ಅಡ್ಡಾದಿಡ್ಡಿ ವಾಹನವನ್ನು ನಿಲ್ಲಿಸುವುದರಿಂದ ಜನರಿಗೆ ಸಾಕಷ್ಟು ಸಮಸ್ಯೆಗಳು ಆಗುತ್ತಿವೆ ಎಂಬ ಆರೋಪ ಕೇಳಿಬಂದಿದೆ.

RELATED ARTICLES  ಇಂದಿನ(ದಿ-10/01/2019) ಉತ್ತರಕನ್ನಡ ಜಿಲ್ಲೆಯ ಪ್ರಮುಖ ತಾಲೂಕುಗಳ ಅಡಿಕೆ ಧಾರಣೆ.

ಈ ವಿಷಯ ತಿಳಿದ ಕರುನಾಡ ವಿಜಯ ಸೇನೆ ಸದಸ್ಯರು ಮಾನ್ಯ ತಶಿಲ್ದಾರ್ ಅವರನ್ನು ಭೇಟಿ ಮಾಡಿ ಬಸ್ಸನ್ನು ಒಂದು ಸರಿಯಾದ ಕ್ರಮದಲ್ಲಿ ಇಡುವಂತೆ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿಕೊಂಡರು. ಅದನ್ನು ಕೂಡಲೇ ಮಾನ್ಯ ತಹಶೀಲ್ದಾರರು ಬಸ್ ಡಿಪೋ ಮ್ಯಾನೇಜರಿಗೆ ಕರೆ ಮಾಡಿ ಇಂದಿನಿಂದ ಬಸ್ಸನ್ನು ಸರಿಯಾದ ಕ್ರಮದಲ್ಲಿ ನಿಲ್ಲಿಸುವಂತೆ ಸೂಚಿಸಿದರು ಎನ್ನಲಾಗಿದೆ.

RELATED ARTICLES  ಗೋಕರ್ಣದಲ್ಲಿ ಸುವರ್ಣ ನಾಗಾಭರಣ ವಿಶೇಷ ಪೂಜೆ ನೆರವೇರಿಸಿದ ನಾಗಾಲ್ಯಾ೦ಡ್ ರಾಜ್ಯಪಾಲರು.

ಅದರಂತೆ ಇವತ್ತು ಬಸ್ಸನ್ನು ಸರಿಯಾದ ಕ್ರಮದಲ್ಲಿ ಓಡಾಡಲು ವ್ಯವಸ್ಥೆಮಾಡಲಾಯಿತು.ಮಾನ್ಯ ತಹಸೀಲ್ದಾರರು ನಮ್ಮ ಅಹವಾಲಿಗೆ ಸ್ಪಂದಿಸಿದ್ದಕ್ಕೆ ಕರುನಾಡ ವಿಜಯಸೇನೆ ಧನ್ಯವಾದಗಳನ್ನು ಅರ್ಪಿಸಿದೆ.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ವಿನಾಯಕ ಆಚಾರಿ,ಜಿಲ್ಲಾ ವಕ್ತಾರರಾದ ಶ್ರೀರಾಮ್ ಹೊನ್ನಾವರ್,ತಾಲೂಕ ಯುವ ಘಟಕ ಅಧ್ಯಕ್ಷರಾದ ರಾಘವೇಂದ್ರ ನಾಯ್ಕ,ಉಪಾಧ್ಯಕ್ಷರಾದ ನಿತಿನ್ ಆಚಾರ್ಯ , ಪ್ರಧಾನ ಕಾರ್ಯದರ್ಶಿ ರಾಹುಲ್ ಮೆಸ್ತ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.