ಶಿರಸಿ : ಆರ್ ಟು ಆರ್ ಪೌಂಡೇಶನ್ ದೆಹಲಿ ಸಂಸ್ಥೆಯಿಂದ ಶಾಲೆಗೆ ನೀಡಲಾದ ಶೈಕ್ಷಣಿಕ ತಂತ್ರಜ್ಞಾನ ಸಾಮಗ್ರಿಗಳ ಉದ್ಘಾಟನಾ ಕಾರ್ಯಕ್ರಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಗಡೆಕಟ್ಟಾದಲ್ಲಿ ಆಗಸ್ಟ್ 25 ರಂದು ಜರುಗಿತು
ದೆಹಲಿಯ ಆರ್ ಟು ಆರ್ ಪೌಂಡೇಶನ್ ಮತ್ತು ಉಪನಿರ್ದೇಶಕರ ಕಚೇರಿ ಇವರ ಸಂಯುಕ್ತ ಆಶ್ರಯದಲ್ಲಿ ಶಿರಸಿ ಜಿಲ್ಲೆಯ 53 ಶಾಲೆಗೆ ಶೈಕ್ಷಣಿಕ ತಂತ್ರಜ್ಞಾನ ಸಾಮಗ್ರಿಗಳನ್ನು ಒದಗಿಸಲಾಯಿತು. ದಿವಾಕರ ಶೆಟ್ಟಿ ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ, ಶಿರಸಿ ಶೈಕ್ಷಣಿಕ ಜಿಲ್ಲೆ ಇವರು ಉದ್ಘಾಟಿಸಿದರು ಎಸ್.ಡಿ.ಎಮ್.ಸಿ ಅಧ್ಯಕ್ಷ ದೇವರು ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ರಾಕೇಶ ಗುಪ್ತಾ ಆರ್ ಟು ಆರ್ ಸಂಸ್ಥಾಪಕರು, ರವಿ ವಚಾನಿ ಸಂಸ್ಥಾಪಕರು, ಶ್ರೀಮತಿ ಗುರುಪ್ರೀತ್ ಕೌರ್ ಮ್ಯಾನೇಜರ್ ಆರ್ ಟು ಆರ್, ವೀಣಾ ಭಟ್ ಗ್ರಾಮ ಪಂಚಾಯತ ಅಧ್ಯಕ್ಷೆ, ವಿನಾಯಕ ಭಟ್ ತಾಲೂಕ ಪಂಚಾಯತ ಸದಸ್ಯರು, ಎಮ್ ಎಸ್ ಹೆಗಡೆ ಕ್ಷೇತ್ರ ಶಿಕ್ಷಣಾಧಿಕಾರಿಗಳು, ವಸಂತ ಭಂಡಾರಿ, ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕರು ಈ ಕಾರ್ಯಕ್ರಮದಲ್ಲಿ ಅಥಿತಿಗಳಾಗಿದ್ದು ಸತೀಶ ಮಡಿವಾಳ ಶಿಕ್ಷಣ ಸಂಯೋಜಕರು ಎಮ್ ಜಿ ನಾಯ್ಕ ತಾಲೂಕ ದೈಹಿಕ ಶಿಕ್ಷಣ ಪರಿವೀಕ್ಷಕರು, ಸಿದ್ದಪ್ಪ ಬರಾದರ್, ಸುರೇಶ ಪಟಗಾರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು, ಬಾಲಚಂದ್ರ ಪಟಗಾರ ಜಿಲ್ಲಾ ಶಿಕ್ಷಕರ ಸಂಘದ ಕಾರ್ಯದರ್ಶಿ, ಎಂ.ಪಿ ಹೆಗಡೆ ಸೇವಾ ಸಹಕಾರಿ ಸಂಘ ಅಧ್ಯಕ್ಷರು, ಎಂ.ಆರ್.ಹೆಗಡೆ ಗಜಾನನ ಪ್ರೌಢಶಾಲಾ ಅಧ್ಯಕ್ಷರು, ಶೈಲೇಂದ್ರ ಎಂ.ಎಚ್ ಗಜಾನನ ಪ್ರೌಢಶಾಲಾ ಮುಖ್ಯ ಶಿಕ್ಷಕರು ಮುಂತಾದ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.
ಮುಖ್ಯಾಧ್ಯಾಪಕರಾದ ಸತೀಶ ಹೆಗಡೆ, ಸ್ವಾಗತಿಸಿದರು. ಸಿ.ಆರ್.ಪಿ ಸತೀಶ ಹೆಗಡೆ ವಂದಿಸಿದರು, ಶ್ರೀಮತಿ ಅಮಿನಾಬಿ ಮೈದಿನ್ ಹಾಗೂ ಉಮಾಬಾಯಿ ಕಾರ್ಯಕ್ರಮ ನಿರ್ವಹಿಸಿದರು.