ಕಾರವಾರ: ಸಾಮಾನ್ಯ ಜನರ ರಕ್ಷಣೆ ಹಾಗೂ ಜನತೆಯ ಹಕ್ಕುಗಳ ರಕ್ಷಣೆಗಾಗಿ ಪೊಲೀಸ್ ಇಲಾಖೆ ಹುಟ್ಟಿಕೊಂಡಿದೆ. ಅದರಂತೆ ಇನ್ನಿತರ ಇಲಾಖೆಗಳು ಸಹ ಸಾಮಾಜಿಕ ಜವಾಬ್ದಾರಿಯನ್ನು ಮೆರೆಯಬೇಕು. ಏತನ್ಮಧ್ಯೆ ಹಿರಿಯ ಅಧಿಕಾರಿಗಳ ಹೆಸರು ಹೇಳಿ ಹಣ ಕೇಳುವ ಅಧಿಕಾರಿಗಳ ಬಗ್ಗೆ ಉತ್ತರಕನ್ನಡದಲ್ಲಿ ಸುದ್ದಿ ಸದ್ದು ಮಾಡುತ್ತಿದೆ.

ಹೌದು ಹಿರಿಯ ಅಧಿಕಾರಿಗಳ ಹೆಸರು ಹೇಳಿ ಕೆಲವು ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಕೆಲವರು ಹಣ ಕೇಳುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿತ್ತು. ಈ ಬಗ್ಗೆ ಉತ್ತರಕನ್ನಡ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕೆಲವು ಪೊಲೀಸರು ಸೇರಿದಂತೆ ಕೆಲವರು ಮೇಲಾಧಿಕಾರಿಗಳ ಹೆಸರಲ್ಲಿ ಹಣ ವಸೂಲಿ ಮಾಡತ್ತಿದ್ದಾರೆ ಎನ್ನುವ ಬಗ್ಗೆ ನಮಗೂ ಸಾಕಷ್ಟು ಆರೋಪಗಳು ಕೇಳಿ ಬರತ್ತಾ ಇದೆ. ಅಂತಹ ಘಟನೆಗಳು ನಡೆಯುತ್ತಿರುವ ಬಗ್ಗೆ ಯಾರ ಗಮನಕ್ಕೆ ಬಂದರೂ ಸಹ ಅದನ್ನ ನಮ್ಮ ಗಮನಕ್ಕೆ ತರಬೇಕು. ಅವರು ಯಾರೆ ಆಗಿದ್ರೂ ಕೂಡ ಅಂತಹವರ ವಿರುದ್ಧ ಕಠಿಣ ಕ್ರಮ ತೆಗದೊಳ್ಳಲಾಗುವುದು ಎಂದು ಎಸ್ಪಿ ಶಿವಪ್ರಕಾಶ್ ದೇವರಾಜು ತಿಳಿಸಿದ್ದಾರೆ.

RELATED ARTICLES  ಬಿಜೆಪಿಗರ ಬಣ್ಣ ಬಯಲು ಮಾಡಲು ಜನಜಾಗೃತಿ ಸಮಾವೇಶ

ಈ ರೀತಿಯಾಗಿ ಯಾರಾದರೂ ಬಂದು ಮೇಲಾಧಿಕಾರಿಗಳ ಹೆಸರನ್ನ ಹೇಳಿಕೊಂಡು ಹಣ ವಸೂಲಿ ಮಾಡುವುದು ಗಮನಕ್ಕೆ ಬಂದರೆ ನೇರವಾಗಿ ನಮಗೆ ಪೋನ್ ಮಾಡಿ ಮಾಹಿತಿಯನ್ನು ನೀಡಬಹುದು. ಯಾರೂ ಕೂಡ ಅದನ್ನು ಮುಚ್ಚು ಮರೆ ಮಾಡೋದು ಬೇಡ. ಪೊಲೀಸ್ ಇಲಾಖೆ ಇರುವುದು ಜನರ ರಕ್ಷಣೆಗಾಗಿ. ಸರಕಾರ ಎಲ್ಲಾ ರೀತಿಯಾಗಿರುವ ಸವಲತ್ತುಗಳನ್ನು ನಮ್ಮ ಪೊಲೀಸ್ ಇಲಾಖೆಗೆ ನೀಡಿದೆ. ಯಾರ ಬಳಿಯೂ ಹಣ ತೆಗದುಕೊಂಡು ಬನ್ನಿ ಅಂತಾ ನಾವಂತೂ ಯಾರಿಗೂ ಹೇಳಲ್ಲ. ಅದರ ಅವಶ್ಯಕತೆ ಇಲ್ಲ.

RELATED ARTICLES  ರಸದೌತಣ ನೀಡುತ್ತಿರುವ ಸಂಚಾರಿ ಯಕ್ಷಗಾನ ಮಂಡಳಿ

ಆದ್ರೆ ಮೇಲಾಧಿಕಾರಿಗಳ ಹೆಸರಲ್ಲಿ ಲೂಟಿ ನಡೆಸಲಾಗುತ್ತಿದೆ ಎನ್ನುವುದು ಈಗಾಗಲೇ ಸಾಕಷ್ಟು ಜನರು ನಮಗೆ ಮಾಹಿತಿ ನೀಡಿದ್ದಾರೆ. ಸರಿಯಾದ ಸಾಕ್ಷಸಿಕ್ಕಿ ಯಾರೆ ಆಗಿದ್ರು ಕ್ರಮ ತೆಗದಕೊಳ್ಳತ್ತೀನಿ ಅಂತಾ ಉತ್ತರಕನ್ನಡ ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಅವರು ಹೇಳಿದ್ದಾರೆ.