ಕುಮಟಾ : ತಿಂಗಳಿನ ನಾಲ್ಕನೇಯ ಗುರುವಾರದಂದು ಹೊನ್ನಾವರ ಮತ್ತು ಭಟ್ಕಳ ತಾಲೂಕಾ ಸಾರ್ವಜನಿಕ ಸರಕಾರೀ ಆಸ್ಪತ್ರೆಯಲ್ಲಿ ಜರುಗಿದ “ಉಚಿತ ನೇತ್ರ ತಪಾಸಣಾ ಶಿಬಿರ”ದಲ್ಲಿನ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಯಾದ 15 ಜನರಿಗೆ ಮರುದಿನ ಶುಕ್ರವಾರದಂದು ಕುಮಟಾದ ‘ಲಾಯನ್ಸ್ ರೇವಣಕರ ಚೆರಿಟೆಬಲ್ ಕಣ್ಣಿನ ಆಸ್ಪತ್ರೆ’ಯಲ್ಲಿ ವೈದ್ಯಾಧಿಕಾರಿ ನೇತ್ರತಜ್ಙ ಡಾ.ಮಲ್ಲಿಕಾರ್ಜುನ ರವರು ಯಶಸ್ವಿಯಾಗಿ “ಮೋತಿಬಿಂದು ಶಸ್ತ್ರಚಿಕಿತ್ಸೆ” ನಡೆಸಿದರು.

RELATED ARTICLES  ಚಿನ್ನದ ಅತಿಚಿಕ್ಕ ಚರಕ ಹಾಗೂ ಗಾಂಧೀಜಿ ಪ್ರತಿಮೆ ತಯಾರಿಸಿದ ಹೊನ್ನಾವರದ ಪ್ರತಿಭೆ.

ಶನಿವಾರ ಬೆಳಿಗ್ಗೆ ಈ ಫಲಾನುಭವಿಗಳನ್ನು ಆಸ್ಪತ್ರೆಯಿಂದ ಬೀಳ್ಕೊಡುವ ಸಂದರ್ಭದಲ್ಲಿ ‘ಲಾಯನ್ಸ್ ಹ್ಯುಮನಿಟೇರಿಯನ್ ಸರ್ವೀಸ್ ಟ್ರಸ್ಟ್’ ನ ಹಿರಿಯ ಟ್ರಸ್ಟಿ ಡಾ.ಸಿ.ಎಸ್.ವೇರ್ಣೇಕರ,
ರಘುನಾಥ ದಿವಾಕರ ಹಾಗೂ ಡಾ.ಮಲ್ಲಿಕಾರ್ಜುನ, ಆಡಳಿತಾಧಿಕಾರಿ ಜಯದೇವ ಬಳಗಂಡಿ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

RELATED ARTICLES  ಭಟ್ಕಳ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಬ್ಲಾಕ್ ಪ್ರಚಾರ ಸಮಿತಿಗೆ ಅಧ್ಯಕ್ಷರಾಗಿ ಮುಂಡಳ್ಳಿಯ ನಾರಾಯಣ ಬಡಿಯಾ ನಾಯ್ಕ.

ಕುಮಟಾದಲ್ಲಿನ ಆಸ್ಪತ್ರೆಯಲ್ಲಿ ನಡೆದ ಈ ಶಸ್ತ್ರಚಿಕಿತ್ಸೆ, ಔಷಧೋಪಚಾರ, ಊಟ,ಉಪಹಾರ,ವಸತಿ,ಓಡಾಟ ವ್ಯವಸ್ಥೆಗಳು ಎಂದಿನಂತೆ ಸಂಪೂರ್ಣ ಉಚಿತವಾಗಿತ್ತು.