ಕಾರವಾರ: ಕೊವಿಡ್ ಲಸಿಕೆಯ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್ ಇದ್ದು ಜಿಲ್ಲೆಯಲ್ಲಿ ನಾಳೆ ಭಾನುವಾರ ಒಟ್ಟು 64,400 ಕೋವಿಶೀಲ್ಸ್, 3,810 ಕೋವ್ಯಾಕ್ಸಿನ್ ಲಸಿಕೆ ಲಭ್ಯವಿದೆ. ಲಭ್ಯವಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಕೋವಿಶೀಲ್ಡ : ಅಂಕೋಲಾದಲ್ಲಿ 3,100, ಭಟ್ಕಳ 3,010, ಹಳಿಯಾಳದಲ್ಲಿ 6,000, ಹೊನ್ನಾವರದಲ್ಲಿ 9,440, ಜೊಯಿಡಾದಲ್ಲಿ 1,720, ಕಾರವಾರದಲ್ಲಿ 2,570, ಮುಂಡಗೋಡದಲ್ಲಿ 4,400, ಕುಮಟಾದಲ್ಲಿ 9,320, ಶಿರಸಿಯಲ್ಲಿ 14,440, ಸಿದ್ದಾಪುರದಲ್ಲಿ 5530, ಯಲ್ಲಾಪುರದಲ್ಲಿ 1,980, ಜಿಲ್ಲಾ ಆಸ್ಪತ್ರೆಯಲ್ಲಿ 1,100, ದಾಂಡೇಲಿಯಲ್ಲಿ 500, ಐಎನ್‌ಎಚ್‌ಎಸ್ ಪತಂಜಲಿಯಲ್ಲಿ 1,290 ಲಭ್ಯವಿದೆ.
ಲಭ್ಯವಿರುವ ಕೋವ್ಯಾಕ್ಸಿನ್: ಹೊನ್ನಾವರದಲ್ಲಿ 510, ಕುಮಟಾದಲ್ಲಿ 1000, ಶಿರಸಿಯಲ್ಲಿ 1520, ಜಿಲ್ಲಾ ಆಸ್ಪತ್ರೆಯಲ್ಲಿ 300, ದಾಂಡೇಲಿಯಲ್ಲಿ 400, ಐಎನ್‌ಎಚ್‌ಎಸ್ ಪತಂಜಲಿಯಲ್ಲಿ 80 ಕೋವ್ಯಾಕ್ಸಿನ್ ಲಭ್ಯವಿದೆ.
ಹೊನ್ನಾವರದಲ್ಲಿ ಎಲ್ಲೆಲ್ಲಿ?
ಹೊನ್ನಾವರದಲ್ಲಿ ಒಟ್ಟೂ 5 ಸಾವಿರ ಕೊವೀಶೀಲ್ಡ ಲಸಿಕೆ ಲಭ್ಯವಿದ್ದು, ತಾಲೂಕಾ ಆಸ್ಪತ್ರೆಯ ಕೊರೋನಾ ಲಸಿಕಾಕರಣದ ಕೇಂದ್ರದಲ್ಲಿ ಹಾಗೂ ಹೊನ್ನಾವರ ತಾಲೂಕಾ ವ್ಯಾಪ್ತಿಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕಾಕರಣ ನಡೆಯಲಿದೆ. ಎಂದು ತಾಲೂಕಾ ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಂಕೋಲಾದಲ್ಲಿ ಎಲ್ಲಿ?
ಅಂಕೋಲಾ ತಾಲೂಕಿನಲ್ಲಿ ರವಿವಾರ ಒಟ್ಟೂ 1100 ಡೋಸ್ (1000+100) ಕೋವಿಡ್ ಲಸಿಕೆಗಳ ವಿತರಣೆಗೆ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ. ಗಾಬಿತಕೇಣಿ (240) ಹಿ.ಪ್ರಾ ಶಾಲೆ ಹಡವ (240), ಪ್ರಾ. ಆ ಕೇಂದ್ರ ಹಿಲ್ಲೂರ (270), ಉಪಕೇಂದ್ರ ಸುಂಕಸಾಳ (180). ಹಿ.ಪ್ರಾ.ಶಾಲೆ ಸಕಲಬೇಣ (170) ಗಳಲ್ಲಿ ಲಸಿಕಾಕರಣ ನಡೆಯಲಿದೆ. ಅವುಗಳಲ್ಲಿ ಪ್ರಥಮ ಡೋಸ್ ಹಾಗೂ ,ದ್ವಿತೀಯ ಡೋಸ್ ಗಳು ಒಳಗೊಂಡಿದೆ. ವಿಕಲಚೇತನರರು , ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ವಿಶೇಷ ಪ್ರಾಧಾನ್ಯತೆಯಡಿ ಕೆಲ ಪ್ರಮಾಣದ ಲಸಿಕೆಗಳನ್ನು ಕಾಯ್ದಿರಿಸಲಾಗುತ್ತಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ .
ಶಿರಸಿ ತಾಲೂಕಿನಲ್ಲಿ ಎಲ್ಲೆಲ್ಲಿ?
ಕಸ್ತೂರಬಾ ನಗರದಲ್ಲಿ 1000, ಇಕ್ರಾ ಎಜ್ಯುಕೇಶನ್ ಟ್ರಸ್ಟ್ ನಲ್ಲಿ 1200, ಸುಗಾವಿಯಲ್ಲಿ 1000, ಮರಾಠಿಕೊಪ್ಪದಲ್ಲಿ 1500, ಟಿಎಸ್‍ಎಸ್ ಹೆಲ್ತ್ ಸೆಂಟರಿನಲ್ಲಿ 1000, ದಾಸನಕೊಪ್ಪದಲ್ಲಿ 600, ಸಾಲ್ಕಣಿ 600, ಹುಲೇಕಲ್ 600, ಹೆಗಡೆಕಟ್ಟಾ 600, ಬನವಾಸಿಯಲ್ಲಿ 600, ದಾಸನಕೊಪ್ಪದಲ್ಲಿ 600, ಕಕ್ಕಳ್ಳಿಯಲ್ಲಿ 200 ಡೋಸ್ ಲಸಿಕೆ ಲಭ್ಯವಿದೆ.
ಸಾರ್ವಜನಿಕರು ಯಾವುದೇ ಗೊಂದಲ ಮಾಡಿಕೊಳ್ಳದೆ, ಆಶಾ ಕಾರ್ಯಕರ್ತೆಯರು, ತಾಲೂಕಾ ಆರೋಗ್ಯ ಸಿಬ್ಬಂದಿಗಳಿoದ ಮಾಹಿತಿ ಪಡೆದು , ಸಾಮಾಜಿಕ ಅಂತರ ಕಾಯ್ದುಕೊಂಡು ಲಸಿಕೆ ಪಡೆದುಕೊಳ್ಳಬೇಕಿದೆ. ಲಸಿಕೆ ಪಡೆಯುವಲ್ಲಿ ಸುಖಾಸುಮ್ಮನೆ ಬಂದಲ ಸೃಷ್ಟಿಸುವುದು ಹಾಗೂ ಸಾಮಾಜಿಕ ಅಂತರ ಪಾಲನೆ ಮಾಡಿದೆ ಕೊರೋನಾ ನಿಯಮಗಳನ್ನು ಮೀರುವಂತಹ ಕಾರ್ಯ ಮಾಡಬಾರದೆಂದು ಇದೇ ಸಂದರ್ಭದಲ್ಲಿ ಅಧಿಕಾರಿಗಳು ಜನರಲ್ಲಿ ವಿನಂತಿ ಮಾಡಿದ್ದಾರೆ.