ಕಡಲ ತೀರದಲ್ಲಿ ಅಪರಿಚಿತ ಶವ ಪತ್ತೆ‌

ಗೋಕರ್ಣ ಗಂಗೆಕೊಳ್ಳದ ಕಡಲತೀರದಲ್ಲಿ ಭಾನುವಾರ ಮುಂಜಾನೆ ಅಪರಿಚಿತ ಶವವೊಂದು ಪತ್ತೆಯಾಗಿದೆ. 40 ರಿಂದ 45 ವರ್ಷ ವಯಸ್ಸಿನ ಪುರುಷನ ಶವ ಎಂದು ಅಂದಾಜಿಸಲಾಗಿದ್ದು, ಕಳೆದ ಎರಡು ದಿನದ ಹಿಂದೆ ಮೃತಪಟ್ಟಿರಬಹುದು ಎಂದು ತಿಳಿದುಬಂದಿದೆ. ಮುಂಜಾನೆ ಗಂಗೆಕೊಳ್ಳದ ಕಡಲತೀರದಲ್ಲಿ ಶವ ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದು, ಶವನ್ನು ಗೋಕರ್ಣದ ಶವಾಗಾರಕ್ಕೆ ಸಾಗಿದ್ದಾರೆ.

ಅಪಘಾತದಲ್ಲಿ ಗರ್ಭಾವಸ್ಥೆಯಲ್ಲಿದ್ದ ಹಸು ಸಾವು

ಕಾರವಾರ ತಾಲೂಕಿನ ಚೆಂಡಿಯಾದ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತದಿಂದ ಮೂರು ಜಾನುವಾರು ಸ್ಥಳದಲ್ಲೇ ಮೃತಪಟ್ಟ ಘಟನೆ ರವಿವಾರ ಬೆಳಗ್ಗಿನ ಜಾವ ನಡೆದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಸಾವಿರಾರು ಭಾರೀ ವಾಹನ ಸಂಚರಿಸುತ್ತವೆ. ಈ ಸಂದರ್ಭಗಳಲ್ಲಿ ಹೆದ್ದಾರಿಯಲ್ಲಿ ದಾಟುವ, ರಸ್ತೆಯಲ್ಲೇ ಮಲಗುವ ಜಾನುವಾರು ಅಪಘಾತಕ್ಕೀಡಾಗುತ್ತಿದೆ. ಅದರಂತೆ ಇಂದು ಸಹ ಚೆಂಡಿಯಾದ ಬಳಿ ಅಪಘಾತ ಸಂಭವಿಸಿದ್ದು ಈ ವೇಳೆ ಗರ್ಭಾವಸ್ಥೆಯಲ್ಲಿದ್ದ ಹಸು ಮೃತಪಟ್ಟಿದೆ.

RELATED ARTICLES  ಭಟ್ಕಳದಲ್ಲಿ ಗ್ಯಾಸ್ ಸಿಲೆಂಡರ ಲಾರಿ ಪಲ್ಟಿ : ಚಾಲಕನ ಸ್ಥಿತಿ ಗಂಭೀರ

ಕುಡಿದು ಗಲಾಟೆ ಮಾಡಿದಾತನ್ನು ಠಾಣೆಗೆ ಕರೆದೊಯ್ದ ಪೊಲೀಸರು

ನಗರದ ಹಬ್ಬುವಾಡಾದಲ್ಲಿ ವೃದ್ಧ ಮಹಿಳೆಗೆ ಆತನ ಮಗ ಕುಡಿದು ಜಗಳವಾಡುತ್ತಿರುವ ಬಗ್ಗೆ ಪೊಲೀಸರು ವಿಚಾರಣೆ ನಡೆಸಿ ವ್ಯಕ್ತಿಯನ್ನು ನಗರ ಪೊಲೀಸ್ ಠಾಣೆಗೆ ಕರೆದೊಯ್ದ ಘಟನೆ ನಡೆದಿದೆ. ನಗರದ ಹಬ್ಬುವಾಡಾದಿಂದ 112 ಪೊಲೀಸ್ ಸಹಾಯವಾಣಿಗೆ ಸ್ಥಳೀಯರು ಕರೆ ಮಾಡಿದ್ದು ವೃದ್ಧಿಗೆ ಆತನ ಮಗ ಕುಡಿದು ಜಗಳವಾಡುತ್ತಿರುವ ಬಗ್ಗೆ ಬಂದ ಕರೆ ಆಧರಿಸಿ ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಗಳು ಮದ್ಯದ ನಶೆಯಲ್ಲಿದ್ದ ವ್ಯಕ್ತಿಗೆ ಎಚ್ಚರಿಕೆ ನೀಡಿದರೂ ಸಹ ಕೇಳದಿದ್ದಾಗ ಆತನನ್ನು ನಗರ ಪೊಲೀಸ್ ಠಾಣೆಗೆ ಅಧಿಕಾರಿಗಳು ಒಯ್ದಿದ್ದಾರೆ.

RELATED ARTICLES  ಹೊನ್ನಾವರದ ಹಲವೆಡೆ ನಾಳೆ ವಿದ್ಯುತ್ ವ್ಯತ್ಯಯ