Satwadhara News

ಯುವತಿ ನಾಪತ್ತೆ : ಪ್ರಕರಣ ದಾಖಲು

ಮುರ್ಡೇಶ್ವರ : ಯುವತಿಯರು ಹಾಗೂ ವಿವಾಹಿತ ಮಹಿಳೆಯರು ಮನೆಯವರಿಗೆ ಹೇಳದೆ ಹೊರ ಹೋಗುವುದು ಹಾಗೂ ಇನ್ನೂ ಕೆಲವೆಡೆಗಳಲ್ಲಿ ನಾಪತ್ತೆಯಾಗುವ ಪ್ರಕರಣಗಳು ಉತ್ತರಕನ್ನಡದಲ್ಲಿ ಅಲ್ಲಲ್ಲಿ ವರದಿಯಾಗುತ್ತಿದೆ. ಇಂತಹುದೇ ಒಂದು ಪ್ರಕರಣ ಇಂದು ವರದಿಯಾಗಿದೆ.

ಝೆರಾಕ್ಸ್ ಅಂಗಡಿಗೆ ಹೋಗಿಬರುತ್ತೇನೆ ಎಂದು ಹೇಳಿ ಹೋದ ಯುವತಿ ನಾಪತ್ತೆಯಾದ ಬಗ್ಗೆ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುರ್ಡೇಶ್ವರದ ನ್ಯಾಷನಲ್ ಕಾಲೋನಿಯ ಯುವತಿ ಬಿ.ಬಿ.ಸೀಮಾಬಎಂಬಾಕೆಯೇ ನಾಪತ್ತೆಯಾದ ಯುವತಿಯಾಗಿದ್ದು ದಿನಾಂಕ 23-08-2021 ರಂದು ಝರಾಕ್ಸ್ ಅಂಗಡಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವಳು
ಮನೆಗೆ ಮರಳಿ ಬಂದಿಲ್ಲ ಎಂದು ಕಾಣೆಯಾದ ಯುವತಿಯ ತಾಯಿ ಫಾತಿಮಾ ಮುರ್ಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Comments

Leave a Reply

Your email address will not be published. Required fields are marked *