ಕುಮಟಾ : ಕೆನರಾ ಕಾಲೇಜು ಸೊಸೈಟಿ(ರಿ), ಡಾ.ಎ.ವಿ.ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ, ಕುಮಟಾ ಇದರ -ರಸಾಯನಶಾಸ್ತ್ರ ವಿಭಾಗದ (ಸ್ನಾತಕ -ಸ್ನಾತಕೋತ್ತರ) “ಉನ್ನತಿಕರಿಸಿದ ಫಿಸಿಕಲ್ ಮತ್ತು ಎನಲೆಟಿಕಲ್ ಪ್ರಯೋಗಾಲಯದ ಉದ್ಘಾಟನಾ ಕಾರ್ಯಕ್ರಮ ಜರುಗಿತು.
ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಪ್ರೊ. ಆರ್ ಎಚ್ ಕಾಮತ, ಡಾ. ಎಸ್. ವಿ. ಕಾಮತ, ಡಾ. ಈ.ಟಿ. ಕುಚ್ಚಿನಾಡ, ಡಾ. ವಿ. ಎಮ್. ಪೈ ಹಾಗೂ ಡಾ, ಎಸ್. ಎನ್. ಶೆಟ್ಟಿ ಯವರು ಘನ ಆಡಳಿತ ಮಂಡಳಿಯ ಉಪಸ್ಥಿತಿಯಲ್ಲಿ ವಿಜ್ರಂಭಣೆಯಿಂದ ಜರುಗಿತು. ಸಭಾ ಕಾರ್ಯಕ್ರಮವು ಶೃವ್ಯ-ದೃಶ್ಯ ಕೊಠಡಿಯಲ್ಲಿ ನಡೆಯಿತು. ಸ್ವಾಗತಗೀತೆಯನ್ನು ಕು. ಹರ್ಷಾ ಭಟ್ಟ ಹಾಡಿದರು. ಕಾರ್ಯಾಕ್ರಮದ ಕೋ-ಆರ್ಡಿನೇಟರ್ ಹಾಗೂ ವಿಭಾಗದ ಮುಖ್ಯಸ್ಥರಾದ ಡಾ. ಎನ್. ಕೆ. ನಾಯಕರವರು ಅತಿಥಿ-ಅಭ್ಯಾಗತರನ್ನು ಸ್ವಾಗತಿಸಿದರು.
ಕನ್ವೇನರ್ ಡಾ. ರೇವತಿ ನಾಯ್ಕರವರು ಕಾಲೇಜಿನ ಹಾಗೂ ರಸಾಯನಶಾಸ್ತ್ರ ವಿಭಾಗ ನಡೆದು ಬಂದ ರೀತಿಯ ಕುರಿತು ವಿವರಿಸಿದರು. ಅತಿಥಿ ಅಭ್ಯಾಗತರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಧ್ಯಕ್ಷರಾ ಶ್ರೀ ರಘಿ ಪಿಕಳೆರವರು ತಮ್ಮ ಭಾಷಣವನ್ನು ಝೂಮ್ ನಿಸ್ತಂತು ಮೂಲಕ ನಡೆಸಿ ಕರ‍್ಯಕ್ರಮವನ್ನು ಶ್ಲಾಘಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ನಿವೃತ್ತ ಪ್ರಾಚಾರ್ಯರಾದ ಪ್ರೊ. ಆರ್ ಎಚ್ ಕಾಮತ, ಡಾ. ಎಸ್. ವಿ. ಕಾಮತ, ಡಾ. ಈ.ಟಿ. ಕುಚ್ಚಿನಾಡ, ಡಾ. ವಿ. ಎಮ್. ಪೈ ತಮ್ಮ ಅನಿಸಿಕೆಗಳನ್ನು ಸವಿವರವಾಗಿ ತಿಳಿಸಿದರು. ಕಾರ್ಯದರ್ಶಿ ಶ್ರೀ ಸುಧಾಕರ ನಾಯಕ ಹಾಗೂ ಶ್ರೀ ದಿನಕರ ಎಮ್ ಕಾಮತರು ಕಾಲೇಜಿನ ಸರ್ವತೋಮುಖ ಬೆಳವಣಿಗಾಗಿ ಶ್ರ‍್ರಮಿಸುತ್ತೇವೆ ಎಂದು ಒತ್ತಿ ಹೇಳಿದರು. ಎಂ. ಎಸ್ಸಿ. ಹಿಚ್ಚಿನ ಅಂಕ ಗಳಿಸಿದ ಕು. ವೀನಾ ಸಿ. ಎಮ್. ಹಾಗೂ ಬಿ. ಎಸ್ಸಿ. ರ‍್ಯಾಂಕ್ ವಿಜೇತೆ ಕು. ದಿವ್ಯಾ ಭಟ್‌ರನ್ನು ಸನ್ಮಾನಿಸಿದರು. ಕೆನರಾ ಕಾಲೇಜು ಸೊಸೈಟಿಯ ಘನ ಆಡಳಿತ ಮಂಡಳಿಯ ಹಾಗೂ ಕೌನ್ಸಿಲ್ ಸದಸ್ಯರು ಹಾಜರಿದ್ದು ಕರ‍್ಯಕ್ರಮದ ಘನತೆಯನ್ನು ಹೆಚ್ಚಿಸಿದರು. ಕು. ಶಶಿಧರ ಭಟ್ ವಂದಿಸಿದರು. ಅನುರಾಗ ನಾಯ್ಕರವರು ವದಿಸಿದರು.
ಪ್ರೊ. ಸ್ನೇಹಾ ಹೆಗಡೆ ಕಾರ‍್ಯಕ್ರಮ ನಿರೂಪಿಸಿದರು.
ಕೆನರಾ ಕಾಲೇಜು ಆಡಳಿತ ಮಂಡಳಿಯು ಫಿಸಿಕಲ್ ಮತ್ತು ಎನಲೆಟಿಕಲ್ ಪ್ರಯೋಗಾಲಯಕ್ಕೆ ರೂ. ೫.೪ ಲಕ್ಷವನ್ನು ವೆಚ್ಚ ಮಾಡಿ ಗ್ರಾನೈಟ್ ಹಾಗೂ ವೆಟ್ರಿಪೈಡ್ ಟೈಲ್ಸ ಹಾಕಿ ಮೇಲ್ದರ್ಜೆಗೆ ಎರಿಸಿದ್ದಾರೆ. ಅದಲ್ಲದೆ ಡಬಲ್ ಬೇಮ್ ಸ್ಪಕ್ಟ್ರೊಫೋಟೋಮೀಟರ್‌ಗೆ ರೂ ೨.೭೨ ಲಕ್ಷ, ವಿವಿಧ ಪ್ರಯೋಗಾಲಯದ ಪರಿಕರಗಳಿಗೆ ರೂ. ಆರವತ್ತು ಸಾವಿರ ಹಾಗೂ ಸಕ್ಸನ್ ಪಂಪ್‌ಗೆ ರೂ. ೩೭೫೦೦.೦೦ ವೆಚ್ಚ ಮಾಡಿ ಪ್ರಯೋಗಾಲಯದ ವರ್ಚಸ್ಸು ಹಿಚ್ಚಿಸಿದ್ದಾರೆ. ಡಾ. ಎಂ. ವಿ. ಮುಡ್ಲಗಿರಿ, ಮಕ್ಕಳ ತಜ್ನ, ಕುಮಟಾ ಇವರು ವಿ-ಗಾರ್ಡ ಸೀಲಿಂಗ್ ಫ್ಯಾನ್ ಮತ್ತು ಡಾ. ವಿ. ಎಮ್. ಪೈರವರು ಪೊಟೆಂಶಿಯೋಮೀಟರ್‌ವನ್ನು ರಸಾಯನಶಾಸ್ತ್ರ ವಿಭಾಗಕ್ಕೆ ಕೊಡುಗೆಯಾಗಿ ನೀಡಿದ್ದಾರೆ.