ಹೊನ್ನಾವರ: ಸರಕು ತುಂಬಿದ ಕಂಟೆನರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಅಂಗಡಿಗೆ ಗುದ್ದಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಹೊನ್ನಾವರ ತಾಲೂಕಿನ ಕರ್ಕಿಯಲ್ಲಿ ನಡೆದಿದೆ.

ನಿಯಂತ್ರಣ ತಪ್ಪಿ ಅಂಗಡಿಗೆ ಕಂಟೇನರ್ ಬಡಿದ ಪರಿಣಾಮ ಅಂಗಡಿಯ ಗೋಡೆ ಕುಸಿದು ಅಂಗಡಿಗೆ ಹಾನಿ ಸಂಭವಿಸಿದೆ. ಅಪಘಾತದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.

RELATED ARTICLES  ಪ್ರಕ್ರತಿಯ ಉಳಿವಿಗಾಗಿ 6 ಸಾವಿರ ಕಿ.ಮೀ ಹೊರಟ ಸಾಕ್ಷಿ ಹೆಗಡೆ.

IMG 20210829 211330

ಘಟನೆಯಿಂದಾಗಿ ಅಂಗಡಿಯಲ್ಲಿದ್ದ ಅನೇಕ ವಸ್ತುಗಳಿಗೆ ಹಾನಿ ಯಾಗಿದ್ದು ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ ಎಂಬುದು ಸಮಾಧಾನದ ಸಂಗತಿಯಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಇತರ ಅಗತ್ಯ ಧಿಕಾರಿಗಳು ಹಾಜರಾಗಿ ಬಗ್ಗೆ ಕೂಲಂಕುಶ ಮಾಹಿತಿ ಕಲೆಹಾಕಿದ್ದಾರೆ.

RELATED ARTICLES  ಯೋಗ ಜೀವ-ದೇವ ಬೆಸೆಯುವ ಬಂಧ: ರಾಘವೇಶ್ವರ ಶ್ರೀ