ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ನಾಳೆ 40,260 ಡೋಸ್ ಕೋವಿಶೀಲ್ಡ್ ಮತ್ತು 3,740 ಕೋವಾಕ್ಸಿನ್ ಡೋಸ್ ಲಭ್ಯವಿದೆ. ಅಂಕೋಲಾ 1600, ಭಟ್ಕಳ 1910, ಹಳಿಯಾಳ – 2680, ಹೊನ್ನಾವರ 4900, ಜೋಯ್ಡಾ – 1720 , ಕಾರವಾರ – 2540 , ಮುಂಡಗೋಡ 4330, ಕುಮಟಾ 4610, ಶಿರಸಿ 8270, ಸಿದ್ಧಾಪುರ 3940 ಯಲ್ಲಾಪುರ1860, ದಾಂಡೇಲಿ 500, ಜಿಲ್ಲಾ ಕೇಂದ್ರದಲ್ಲಿ 110, ನೇವಿಯಲ್ಲಿ 1290 ಕೋವಿಶೀಲ್ಡ್ ಒಟ್ಟೂ 40260 ಲಭ್ಯವಿದೆ.

ಕೋವ್ಯಾಕ್ಸೀನ್ ಎಲ್ಲಿ?
ಹೊನ್ನಾವರ -510, ಕುಮಟಾ 1000, ಶಿರಸಿ 1520, ಜಿಲ್ಲಾ ಕೇಂದ್ರ 230, ದಾಂಡೇಲಿ‌ 400, ನೇವಿಯಲ್ಲಿ 80 ಒಟ್ಟೂ 3740 ಲಸಿಕೆ ಲಭ್ಯವಿದೆ.

ಹೊನ್ನಾವರದಲ್ಲಿ ಎಲ್ಲಿ ?

ನಾಳೆ ಹೊನ್ನಾವರ ತಾಲ್ಲೂಕಿನಲ್ಲಿ ಒಟ್ಟು 4750 ವ್ಯಾಕ್ಸಿನ್ ಲಭ್ಯವಿದ್ದು,ಕೋವಿಶೀಲ್ಡ್ 4250, ಮತ್ತು ಕೋವ್ಯಾಕ್ಸಿನ್ 500 ಲಭ್ಯವಿದ್ದು, ಇವುಗಳನ್ನು ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹಂಚಿಕೆ ಮಾಡಲಾಗಿದೆ. ಹೊನ್ನಾವರ ಪಟ್ಟಣದ ಹಳೆ ಡಿ ಎಫ್ ಓ ಕಟ್ಟಡದಲ್ಲಿ ಮತ್ತು ಪಟ್ಟಣ ಪಂಚಾಯತ ಸಭಾಭವನದಲ್ಲಿ ಹಾಗೂ ತಾಲ್ಲೂಕಿನ ಕಡತೋಕಾ, ಹಳದಿಪುರ, ಸಾಲಕೋಡ, ಖರ್ವಾ, ಹೊಸಾಡ, ಗೇರುಸೋಪ್ಪ, ಸಂಶಿ, ಬಳ್ಕೂರ, ಮಂಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಾಳೆ ಒಟ್ಟು 4750 ವಿತರಿಸಲಾಗುವುದು.

RELATED ARTICLES  ನಿರಾಶ್ರಿತ ಕನ್ನಡಿಗರ ಶಾಶ್ವತ ಪುನರ್ವಸತಿ: ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು’

ಅಂಕೋಲಾದಲ್ಲಿ ಎಲ್ಲೆಲ್ಲಿ.?

ಅಂಕೋಲಾದಲ್ಲಿ ನಾಳೆ ಒಟ್ಟೂ 1600 ಡೋಸ್ ಕೋವಿಡ್ ಲಸಿಕೆಗಳ ವಿತರಣೆಗೆ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ. ಹಿ.ಪ್ರಾ ಶಾಲೆ ಅಜ್ಜಿಕಟ್ಟಾ(300), ಹಿ.ಪ್ರಾ.ಶಾಲೆ ಬಡಗೇರಿ (300) , ಗ್ರಾಪಂ ಅಚವೆ (250), ಹಿ.ಪ್ರಾ ಶಾಲೆ ಗುಂಡಬಾಳ (100), ಹಿ.ಪ್ರಾ.ಶಾಲೆ ಮಾಡಿಬೊಗ್ರಿ (300), ಉಪಕೇಂದ್ರ ಅಗಸೂರು (350) ಗಳಲ್ಲಿ ಲಸಿಕಾಕರಣ ನಡೆಯಲಿದೆ. ಅವುಗಳಲ್ಲಿ ಪ್ರಥಮ ಡೋಸ್ ಹಾಗೂ ,ದ್ವಿತೀಯ ಡೋಸ್ ಗಳು ಒಳಗೊಂಡಿದೆ. ವಿಕಲಚೇತನರರು , ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ವಿಶೇಷ ಪ್ರಾಧಾನ್ಯತೆಯಡಿ ಕೆಲ ಪ್ರಮಾಣದ ಲಸಿಕೆಗಳನ್ನು ಕಾಯ್ದಿರಿಸಲಾಗುತ್ತಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

RELATED ARTICLES  ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿದ ಮಲ್ಲಿಕಾರ್ಜುನ ಖರ್ಗೆ

ಯಲ್ಲಾಪುರ ತಾಲೂಕಿನಲ್ಲಿ ಎಲ್ಲೆಲ್ಲಿ?

ತಾಲೂಕಿನಲ್ಲಿ ಸೋಮವಾರ 1500 ಡೋಸ್ ಲಸಿಕೆ ಲಭ್ಯವಿದೆ. ತಾಲೂಕಾಸ್ಪತ್ರೆಯಲ್ಲಿ 200, ಕಿರವತ್ತಿ ಪ್ರಾ.ಆರೋಗ್ಯ ಕೇಂದ್ರ 200, ದೇಹಳ್ಳಿ ಪ್ರಾ.ಆರೋಗ್ಯ ಕೇಂದ್ರ 50, ಮಲವಳ್ಳಿ ಪ್ರಾ.ಆರೋಗ್ಯ ಕೇಂದ್ರ 50, ಚವತ್ತಿ ಪ್ರಾ.ಆರೋಗ್ಯ ಕೇಂದ್ರ 50, ಮಂಚಿಕೇರಿ ಪ್ರಾ.ಆರೋಗ್ಯ ಕೇಂದ್ರ 300, ಕುಂದರಗಿ ಪ್ರಾ.ಆರೋಗ್ಯ ಕೇಂದ್ರ 200, ಕಳಚೆ ಪ್ರಾ.ಆರೋಗ್ಯ ಕೇಂದ್ರ 50, ವಜ್ರಳ್ಳಿ ಪ್ರಾ.ಆರೋಗ್ಯ ಕೇಂದ್ರ 200, ನಂದೊಳ್ಳಿ ಪ್ರಾ.ಆರೋಗ್ಯ ಕೇಂದ್ರದಲ್ಲಿ 200 ಡೋಸ್ ವ್ಯಾಕ್ಸಿನ್ ಲಭ್ಯವಿದೆ.

ಸಾರ್ವಜನಿಕರು ಯಾವುದೇ ಗೊಂದಲ ಮಾಡಿಕೊಳ್ಳದೆ, ಆಶಾ ಕಾರ್ಯಕರ್ತೆಯರು, ತಾಲೂಕಾ ಆರೋಗ್ಯ ಸಿಬ್ಬಂದಿಗಳಿoದ ಮಾಹಿತಿ ಪಡೆದು , ಸಾಮಾಜಿಕ ಅಂತರ ಕಾಯ್ದುಕೊಂಡು ಲಸಿಕೆ ಪಡೆದುಕೊಳ್ಳಬೇಕಿದೆ. ಲಸಿಕೆ ಪಡೆಯುವಲ್ಲಿ ಸುಖಾಸುಮ್ಮನೆ ಬಂದಲ ಸೃಷ್ಟಿಸುವುದು ಹಾಗೂ ಸಾಮಾಜಿಕ ಅಂತರ ಪಾಲನೆ ಮಾಡಿದೆ ಕೊರೋನಾ ನಿಯಮಗಳನ್ನು ಮೀರುವಂತಹ ಕಾರ್ಯ ಮಾಡಬಾರದೆಂದು ಇದೇ ಸಂದರ್ಭದಲ್ಲಿ ಅಧಿಕಾರಿಗಳು ಜನರಲ್ಲಿ ವಿನಂತಿ ಮಾಡಿದ್ದಾರೆ.