ಯಲ್ಲಾಪುರ: ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸಿಮೆಂಟ್ ಸಾಗಿಸುತ್ತಿದ್ದ ಲಾರಿ ೨೦೦ ಅಡಿ ಆಳದ ಕಂದಕಕ್ಕೆ ಬಿದ್ದ ಘಟನೆ ತಾಲೂಕಿನ ಅರೇಬೈಲ್ ಘಟ್ಟದಲ್ಲಿ ಸಂಭವಿಸಿದೆ.
ಅಪಘಾತಲ್ಲಿ ಸಿಮೆಂಟ ಲಾರಿ ಚಾಲಕ ವಿಜಯಾಪುರ ನಿವಾಸಿ ಜಬ್ಬಾರ ಮುಲ್ಲಾ(24), ಹಾಗೂ ಕ್ಲೀನರ್ ಮುದಕಪ್ಪ ಬಾಗೇವಾಡಿ (24) ಗಾಯಗೊಂಡವರಾಗಿದ್ದಾರೆ.
ಸೆಡಂ ನಿಂದ ಮಂಗಳೂರಿಗೆ ಸಿಮೆಂಟ್ ತಂಬಿಕೊಂಡು ಹೊರಟಿದ್ದ ಲಾರಿ ಚಾಲಕ ಅತೀ ವೇಗದಲ್ಲಿ ಚಲಾಯಿಸುತ್ತಿರುವಾಗ ಅಪಘಾತ ಸಂಭವಿಸಿದೆ.
ಅರಬೈಲ್ ಘಟ್ಟದ ತೀವ್ರ ತಿರುವಿನಲ್ಲಿ ಸಿಮೆಂಟ್ ಸಾಗಿಸುತ್ತಿದ್ದ ಲಾರಿ ಚಾಲಕ ತನ್ನ ವಾಹನ ನಿಯಂತ್ರಿಸಲು ಸಾಧ್ಯವಾಗದೇ ಅಪಘಾತ ಪಡಿಸಿದ್ದಾನೆ ಎನ್ನಲಾಗಿದೆ. ಎದುರಿನಿಂದ ಮೀನು ತುಂಬಿಕೊಂಡು ಕಾರವಾರ ಕಡೆಯಿಂದ ಹುಬ್ಬಳ್ಳಿ ಕಡೆ ಬರುತ್ತಿರುವ ಲಾರಿಗೆ ಅಪಘಾತ ಪಡಿಸಿದ್ದು ಮೀನು ಸಾಗಾಣಿಕೆ ಲಾರಿಗೆ ಯಾವುದೇ ಹಾನಿಯಾಗಿಲ್ಲ.
ಸಿಮೆಂಟ್ ಸಾಗುಸುತ್ತಿದ್ದ ಲಾರಿ 200 ಅಡಿ ಆಳದ ಅರಬೈಲ ಕಂದಕಕ್ಕೆ ಬಿದ್ದಿದ್ದು. ಲಾರಿ ಚಾಲಕ ಲಾರಿಯೊಳಗೆ ಸಿಕ್ಕಿಕೊಂಡು ಗಾಯಗೊಂಡಾತನನ್ನು ಹೊರಗೆ ತೆಗೆದು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 63 ರ ಅರೇಬೈಲ್ ಘಟ್ಟದಲ್ಲಿ ಅರ್ಧ ಘಂಟೆ ಅಧಿಕ ಸಮಯ ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು.
ಪಿ. ಐ ಡಾ.ಮಂಜುನಾಥ ನಾಯಕ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಶ್ರೀಧರ ಎಸ್ ಆರ್ ಸ್ಥಳಕ್ಕೆ ಭೇಟಿ ನೀಡಿ ಅಪಘಾತಗೊಂಡ ವಾಹನವನ್ನು ತೆರವುಗೊಳಿಸಿ ಇನ್ನಿತರ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.