ಹೊನ್ನಾವರ : ಅಕ್ರಮವಾಗಿ ಸ್ವಿಫ್ಟ್ ಕಾರಿನಲ್ಲಿ ದನದ ಮಾಂಸ ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರು ಅಡ್ಡಗಟ್ಟಿದರೂ, ಕಾರು ನಿಲ್ಲಿಸಿದೆ ಆರೋಪಿತರು ಪರಾರಿಯಾಗಲು ಯತ್ನಿಸಿದ ಘಟನೆ ಹೊನ್ನಾವರ ತಾಲೂಕಿನಲ್ಲಿ ನಡೆದಿದೆ. ಪೊಲೀಸರು ಇದೀಗ ಆರೋಪಿತರನ್ನು ಹೆಡೆಮುರಿ ಕಟ್ಟಿದ್ದು ಮುಂದಿನ ಪ್ರಕ್ರಿಯೆ ಕೈಗೊಂಡಿದ್ದಾರೆ.

ಪರವಾನಿಗೆ ಇಲ್ಲದೆ ಅಕ್ರಮವಾಗಿ ಸ್ವಿಫ್ಟ್ ಕಾರಲ್ಲಿ ದನದ ಮಾಂಸವನ್ನು ಸಾಗಿಸುತ್ತಿದ್ದ ಹಾವೇರಿ ಹಾಗೂ ಹಾನಗಲ್ ಮೂಲದ ಇಬ್ಬರನ್ನು ಹೊನ್ನಾವರ ಪೊಲೀಸರು ಬಂಧಿಸಿದ್ದು ಸ್ವಿಫ್ಟ್ ಕಾರು ಮತ್ತು ಸುಮಾರು 170 ಕೆಜಿ ದನದ ಮಾಂಸವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

RELATED ARTICLES  ಶಿರಸಿಯಲ್ಲಿ ಭೀಕರ ಅಪಘಾತ : ಛಿದ್ರ ಛಿದ್ರವಾಯ್ತು ಬಾಲಕಿಯ ದೇಹ!

ಬಂಧಿತ ಆರೋಪಿಗಳನ್ನು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕರಗುದ್ರಗಿ ಮೂಲದ ಮೌಲಾಲಿ ಭಾಷಾಸಾಬ್ ತೊಟದ, ಮತ್ತು ಮಂಜುನಾಥ ಲಕ್ಷ್ಮಣ ಓಲೇಕಾರ್ ಎಂದು ಗುರುತಿಸಲಾಗಿದೆ. ಮೌಲಾಲಿ ವೃತ್ತಿಯಲ್ಲಿ ಚಾಲಕನಾಗಿದ್ದರೆ, ಮಂಜುನಾಥ ಟೈಲ್ಸ್ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಆರೋಪಿಗಳಿಬ್ಬರು ಮಾರಾಟದ ಉದ್ದೇಶದಿಂದ ದನದ ಮಾಂಸ ಸಾಗಿಸುತ್ತಿರುವ ಆರೋಪ ಕೇಳಿಬಂದಿದೆ. ಗೇರಸೊಪ್ಪಾ ಚೆಕ್ ಪೋಸ್ಟ್ ಅಲ್ಲಿ ಪೊಲೀಸರು ತಡೆಯಲು ಮುಂದಾದರೂ ಕಾರನ್ನು ನಿಲ್ಲಿಸದೇ ವೇಗವಾಗಿ ಚಲಾಯಿಸಿಕೊಂಡು ಬಂದಿದ್ದರು ಎನ್ನಲಾಗಿದೆ. ಮಾಹಿತಿ ತಿಳಿದ ಹೊನ್ನಾವರ ಠಾಣಾ ಪೊಲೀಸರು ಪಟ್ಟಣದ ಗೇರಸೊಪ್ಪಾ ಸರ್ಕಲ್ ಬಳಿ ಹೊಂಚುಹಾಕಿ
ಕಾರ್ ಮತ್ತು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

RELATED ARTICLES  ಕನ್ನಡಪರ ಕಾರ್ಯಕ್ಕಾಗಿ "ಕುಮಟಾ ಕನ್ನಡ ಸಂಘ" ಅಸ್ತಿತ್ವಕ್ಕೆ

ಪಿ.ಎಸ್.ಐ ಮಹಾಂತೇಶ ಉದಯ ನಾಯಕ ಅವರು ಪ್ರಕರಣ ದಾಖಲಿಸಿಕೊಂಡಿದ್ದು ಅಪರಾಧ ವಿಭಾಗದ ಪಿ.ಎಸ್.ಐ ಸಾವಿತ್ರಿ ನಾಯಕ ಅವರು ತನಿಖೆ ನಡೆಸುತ್ತಿದ್ದಾರೆ. ಉತ್ತರಕನ್ನಡದ ವಿವಿಧೆಡೆ ಅಕ್ರಮ ಗೋಸಾಗಾಟ ಹಾಗೂ ಗೋಮಾಂಸ ಸಾಗಾಟ ನಡೆಯುತ್ತಿದ್ದು ನಡೆಯುತ್ತಿರುವುದು ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದೆ.