ಹೊನ್ನಾವರ: ತಾಲೂಕಿನ ಮಂಕಿ,ಕೆಳಗಿನೂರು, ಮುಗಳಿ, ಕಳಸನಮೋಟೆ, ಕಾಸರಕೋಡ, ಆಡುಕಳ, ದಬ್ಬೋಡ, ಚಿತ್ತಾರ ಮುಂತಾದ ಗ್ರಾಮಗಳಲ್ಲಿ ಮನೆ ಮನೆಗೆ ಬಂದು ಚಿಕಿತ್ಸೆ ನೀಡುತ್ತಿದ್ದ ಡಾ.ವಿಶ್ವನಾಥ ಶೆಟ್ಟಿ ಆಸ್ಪತ್ರೆಗೆ ದಾಖಲಾಗಿದ್ದಾರೆಂದು ವರದಿಯಾಗಿದೆ. ಮನೆ ಮನೆ ವೈದ್ಯರು ಎಂದೇ ಪ್ರಸಿದ್ಧರಾದವರು ಹಳ್ಳಿಯ ಜನರ ಮನೆಮಾತಾದ ವೈದ್ಯರಾಗಿದ್ದರು.

ನಾಲ್ಕು ದಶಕಗಳ ಹಿಂದೆ ದೂರದ ಉಡುಪಿಯಿಂದ ಬಂದು ಮಂಕಿಯಲ್ಲಿ ನೆಲೆಸಿ ಹಗಲಿರುಳು ಪರಿವಿಲ್ಲದೇ ಜನರ ಖಾಯಿಲೆಗಳಿಗೆ ಔಷಧಿ ನೀಡುತ್ತಾ ಬಂದಿದ್ದರು. ಇತ್ತೀಚಿಗೆ ಅನಾರೋಗ್ಯದಿಂದ ಮಣಿ ಪಾಲ್ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾಗಿದ್ದರು. ದುರದೃಷ್ಟವಶಾತ್‌ ಚಿಕಿತ್ಸೆಗೆ ಸ್ಪಂದಿಸದ ಅವರ ಮೆದುಳು ನಿಷ್ಕ್ರಿಯವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

RELATED ARTICLES  ಚಂದ್ರಯಾನ-3 ರಲ್ಲಿ ಉತ್ತರಕನ್ನಡದ ಹುಡುಗ.

ಜೀವಿತದ ಬಹುಕಾಲವನ್ನು ಮಂಕಿಯಲ್ಲಿಯೇ ಕಳೆದಿದ್ದರೂ ಡಾ.ವಿಶ್ವನಾಥ ಶೆಟ್ಟಿ ಅವರ ಕುಟುಂಬ ಉಡುಪಿಯಲ್ಲಿಯೇ ವಾಸ್ತವ್ಯವಿದೆ. ಅವರ ಮಗ ಮಣಿಪಾಲ್ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಉನ್ನತ ವೈದ್ಯರಾಗಿದ್ದರೆ
ಮಗಳು ಅಮೇರಿಕಾದಲ್ಲಿರುವರು.

RELATED ARTICLES  ಪ್ರತಿಭಾಕಾರಂಜಿ ಯಲಕೊಟ್ಟಿಗೆ ಶಾಲಾ ವಿದ್ಯಾರ್ಥಿಗಳ ಸಾಧನೆ

ಅವರ ಮಗಳು ಅಮೆರಿಕಾದಿಂದ ಮರಳುವವರೆಗೂ ಡಾ.ವಿಶ್ವನಾಥ ಶೆಟ್ಟಿ ಅವರನ್ನು ಕೃತಕ ಉಸಿರಾಟ ವ್ಯವಸ್ಥೆಯಲ್ಲಿ ಮುಂದುವರಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ವೈದ್ಯರ ಆರೋಗ್ಯ ಚೇತರಿಸಿಕೊಳ್ಳಲಿ ಎಂದು ತಾಲೂಕಿನ ವಿವಿಧ ಗ್ರಾಮಸ್ಥರು ಆಶಿಸುತ್ತಿದ್ದಾರೆ. ಚಿಕಿತ್ಸೆ ನೀಡುವ ವೈದ್ಯರಾದರೂ ಮನೆಯ ಜನರಂತೆ ಸ್ಪಂದಿಸುತ್ತಿದ್ದ ಅವರ ಪ್ರೀತಿಗೆ ಜನತೆ ಸೋತಿದ್ದರು. ಅವರ ಆರೋಗ್ಯ ಚೇತರಿಸಿಕೊಳ್ಳಲಿ ಎಂಬುದು ಸಮಸ್ತ ಜನತೆಯ ಹಾರೈಕೆಯಾಗಿದೆ.