ಕುಮಟಾದಲ್ಲಿ ಎಲ್ಲಿ?

ಕುಮಟಾ ತಾಲೂಕಿನಲ್ಲಿ ನಾಳೆ ಒಟ್ಟು 4750 ಕೋವೀಶಿಲ್ಡ್ ಲಸಿಕೆ ಹಾಗೂ 920 ಕೋವ್ಯಾಕ್ಸೀನ್ ಲಸಿಕೆ ಲಭ್ಯವಿದ್ದು, ಕುಮಟಾ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ನಿಗದಿಪಡಿಸಿದ ಸ್ಥಳಗಳಲ್ಲಿ ವ್ಯಾಕ್ಸಿನೇಷನ್ ಪ್ರಕ್ರಿಯೆ ನಡೆಯಲಿದೆ ಎಂದು ಮಾಹಿತಿ ಲಭ್ಯವಾಗಿದೆ. ಯಾವೆಲ್ಲ ಸ್ಥಳಗಳಲ್ಲಿ ಲಸಿಕಾಕರಣ ನಡೆಯಲಿದೆ ಎಂಬ ಬಗ್ಗೆ ವಿವರ ಇಲ್ಲಿದೆ.

IMG 20210831 210846

ಹೊನ್ನಾವರದಲ್ಲಿ ಎಲ್ಲಿ?

ಹೊನ್ನಾವರ ತಾಲೂಕಿನ ಪಟ್ಟಣದಲ್ಲಿ ಹಾಗೂ ಹೊನ್ನಾವರ ತಾಲೂಕಿನಲ್ಲಿರುವ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಿಗದಿಪಡಿಸಿದ ಪ್ರಮಾಣದಲ್ಲಿ ಕೋವಿಶೀಲ್ಡ್ ಲಭ್ಯವಿದ್ದು ಒಟ್ಟೂ 4000 ಲಸಿಕೆ ಲಭ್ಯವಿದೆ ಎಂದು ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಲಸಿಕಾ ಅಭಿಯಾನ

ಜಿಲ್ಲೆಗೆ ಪ್ರತಿ ದಿನ 3000 ಡೋಸ್‍ನಂತೆ ಸರಬರಾಜಾಗುತ್ತಿದೆ. ರಾಜ್ಯ ಸರ್ಕಾರದ ನಿರ್ದೇಶನದಂತೆ ಪ್ರತಿ ಬುಧವಾರ ಜಿಲ್ಲೆಯಲ್ಲಿ ಕೋವಿಡ್ ಮೆಘಾ ಲಸಿಕಾ ಉತ್ಸವವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಅದರಂತೆ ಸೆ.1 ರಂದು ಜಿಲ್ಲೆಯಾದ್ಯಂತ ಎಲ್ಲಾ ಆರೋಗ್ಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕೋವಿಡ್ ಲಸಿಕಾಕರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ವರೆಗೆ ಎಲ್ಲೆಲ್ಲಿ ಎಷ್ಟು?

ಉತ್ತರಕನ್ನಡ ಜಿಲ್ಲೆಯಲ್ಲಿ 2021ನೇ ಜನವರಿ 16 ರಿಂದ ಈವರೆಗೆ 7,73,052 18 ವರ್ಷ ಮೇಲ್ಪಟ್ಟ ಫಲಾನುಭವಿಗಳಿಗೆ ಮೊದಲನೇ ಡೋಸ್ ಹಾಗೂ 2,36,916 ಫಲಾನುಭವಿಗಳಿಗೆ ಎರಡನೇ ಡೋಸ್ ಕೋವಿಡ್ ಲಸಿಕೆಯನ್ನು, ಹೀಗೆ ಒಟ್ಟೂ 10,09,968 ಡೋಸ್ ಕೋವಿಡ್ ಲಸಿಕೆಯನ್ನು ನೀಡಲಾಗಿದೆ. ಮಂದಿಗೆ ವ್ಯಾಕ್ಸಿನ್ ನೀಡಲಾಗಿದ್ದು, ಯಾವ ತಾಲೂಕಿನಲ್ಲಿ ಎಷ್ಟು ಡೋಸ್ ಲಸಿಕೆ ನೀಡಲಾಗಿದೆ ಎಂಬ ಮಾಹಿತಿ ಇಲ್ಲಿದೆ.

RELATED ARTICLES  ಬಿಸಿಯೂಟದಲ್ಲಿ ಹಾವು ಬಿದ್ದು 30 ಕ್ಕೂ ಹೆಚ್ಚು ಮಕ್ಕಳನ್ನು ಆಸ್ಪತ್ರೆಗೆ

ಅಂಕೋಲಾ ತಾಲೂಕಿನಲ್ಲಿ 1,11,563 ಜನರಿದ್ದು, 18 ವರ್ಷ ಮೇಲ್ಪಟ್ಟ 78731 ಮಂದಿಯಲ್ಲಿ ಪ್ರಥಮ ಡೋಸ್ ಪಡೆದವರು 48,864, 2 ನೇ ಡೋಸ್ ಪಡೆದುಕೊಂಡವರು 12,170 ಮಂದಿ ಪಡೆದುಕೊಂಡಿದ್ದಾರೆ. ಭಟ್ಕಳದಲ್ಲಿ 1,80,756 ಜನರಿದ್ದು, 18 ವರ್ಷ ಮೇಲ್ಪಟ್ಟ 1,27,561 ಮಂದಿಯಲ್ಲಿ ಪ್ರಥಮ ಡೋಸ್ ಪಡೆದವರು 73,426, 2 ನೇ ಡೋಸ್ ಪಡೆದುಕೊಂಡವರು 54,135 ಮಂದಿ ಪಡೆದುಕೊಂಡಿದ್ದಾರೆ. ಹಳಿಯಾಳದಲ್ಲಿ 1,89,549 ಜನರಿದ್ದು, 18 ವರ್ಷ ಮೇಲ್ಪಟ್ಟ 1,33,766 ಮಂದಿಯಲ್ಲಿ ಪ್ರಥಮ ಡೋಸ್ ಪಡೆದವರು 83,275, 2 ನೇ ಡೋಸ್ ಪಡೆದುಕೊಂಡವರು 50,491 ಮಂದಿ ಪಡೆದುಕೊಂಡಿದ್ದಾರೆ. ಹೊನ್ನಾವರದಲ್ಲಿ 1,81,128 ಜನರಿದ್ದು, 18 ವರ್ಷ ಮೇಲ್ಪಟ್ಟ 1,27,824 ಮಂದಿಯಲ್ಲಿ ಪ್ರಥಮ ಡೋಸ್ ಪಡೆದವರು 88,210, 2 ನೇ ಡೋಸ್ ಪಡೆದುಕೊಂಡವರು 26,429 ಮಂದಿ ಪಡೆದುಕೊಂಡಿದ್ದಾರೆ. ಜೋಯಿಡಾ 54,722 ಜನರಿದ್ದು, 18 ವರ್ಷ ಮೇಲ್ಪಟ್ಟ 38,616 ಮಂದಿಯಲ್ಲಿ ಪ್ರಥಮ ಡೋಸ್ ಪಡೆದವರು 29,098, 2 ನೇ ಡೋಸ್ ಪಡೆದುಕೊಂಡವರು 7,534 ಮಂದಿ ಪಡೆದುಕೊಂಡಿದ್ದಾರೆ.

RELATED ARTICLES  ಕನ್ನಡದ ಹೆಸರಾಂತ ನಟ ಲಕ್ಷ್ಮಣ್ ಹೃದಯಾಘಾತದಿಂದ ನಿಧನ.

ಕಾರವಾರದಲ್ಲಿ 1,58,412 ಜನರಿದ್ದು, 18 ವರ್ಷ ಮೇಲ್ಪಟ್ಟ 1,11,793 ಮಂದಿಯಲ್ಲಿ ಪ್ರಥಮ ಡೋಸ್ ಪಡೆದವರು 1,10,989, 2 ನೇ ಡೋಸ್ ಪಡೆದುಕೊಂಡವರು 43,218 ಮಂದಿ ಪಡೆದುಕೊಂಡಿದ್ದಾರೆ. ಕುಮಟಾದಲ್ಲಿ 1,67,878 ಜನರಿದ್ದು, 18 ವರ್ಷ ಮೇಲ್ಪಟ್ಟ 1,18,473 ಮಂದಿಯಲ್ಲಿ ಪ್ರಥಮ ಡೋಸ್ ಪಡೆದವರು 96,104, 2 ನೇ ಡೋಸ್ ಪಡೆದುಕೊಂಡವರು 30,612 ಮಂದಿ ಪಡೆದುಕೊಂಡಿದ್ದಾರೆ. ಮುಂಡಗೋಡಿನಲ್ಲಿ 1,10,607 ಜನರಿದ್ದು, 18 ವರ್ಷ ಮೇಲ್ಪಟ್ಟ 78,056 ಮಂದಿಯಲ್ಲಿ ಪ್ರಥಮ ಡೋಸ್ ಪಡೆದವರು 41,808, 2 ನೇ ಡೋಸ್ ಪಡೆದುಕೊಂಡವರು 11,980 ಮಂದಿ ಪಡೆದುಕೊಂಡಿದ್ದಾರೆ. ಸಿದ್ದಾಪುರ 1,05,807 ಜನರಿದ್ದು, 18 ವರ್ಷ ಮೇಲ್ಪಟ್ಟ 74,669 ಮಂದಿಯಲ್ಲಿ ಪ್ರಥಮ ಡೋಸ್ ಪಡೆದವರು 53,053, 2 ನೇ ಡೋಸ್ ಪಡೆದುಕೊಂಡವರು 14,710 ಮಂದಿ ಪಡೆದುಕೊಂಡಿದ್ದಾರೆ. ಶಿರಸಿ 2,02,791 ಜನರಿದ್ದು, 18 ವರ್ಷ ಮೇಲ್ಪಟ್ಟ 1,43,111 ಮಂದಿಯಲ್ಲಿ ಪ್ರಥಮ ಡೋಸ್ ಪಡೆದವರು 1,11,427, 2 ನೇ ಡೋಸ್ ಪಡೆದುಕೊಂಡವರು 39,123 ಮಂದಿ ಪಡೆದುಕೊಂಡಿದ್ದಾರೆ. ಯಲ್ಲಾಪುರ 82,507 ಜನರಿದ್ದು, 18 ವರ್ಷ ಮೇಲ್ಪಟ್ಟ 58,226 ಮಂದಿಯಲ್ಲಿ ಪ್ರಥಮ ಡೋಸ್ ಪಡೆದವರು 36,793, 2 ನೇ ಡೋಸ್ ಪಡೆದುಕೊಂಡವರು 11,175 ಮಂದಿ ಪಡೆದುಕೊಂಡಿದ್ದಾರೆ.