ಹೊನ್ನಾವರ : ತಾಲೂಕಿನ ರೋಟರಿ ಕ್ಲಬ್ ರೋಟರಿ ಪಾರ್ಕ ಹೌಸ್ ನಲ್ಲಿ ಹಮ್ಮಿಕೊಂಡಿದ್ದ ಎಸ್.ಎಸ್.ಎಲ್.ಸಿಯಲ್ಲಿ ತಾಲೂಕಿನ ಟಾಪ್ ಟೆನ್ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನವಾಯಿತು. ಈ ಸಂದರ್ಭದಲ್ಲಿ ರೋಟರಿ ಸಂಸ್ಥೆ ೫೧ ವರ್ಷದಿಂದ ಎಸ್.ಎಸ್.ಎಲ್.ಸಿ ಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ಕಾರ್ಯ ಮಾಡುತ್ತಿದ್ದೆ ಎಂದುರೋಟರಿ ಅಧ್ಯಕ್ಷ ಸ್ಟೀಪನ್ ರೋಡಗ್ರೀಸ್ ಹೇಳಿದರು.
ಶೈಕ್ಷಣಿಕ ಕೊಡುಗೆಯ ಮೂಲಕ ಮುಂಚೂಣಿಯ ರೋಟರಿ ಸಂಸ್ಥೆ ಈ ಬಾರಿ ಕರೋನಾ ಭಯದ ನಡುವೆಯೂ ವಿಚಲಿತರಾಗದೆ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುತ್ತಿದೆ. ನಿಮ್ಮ ಸಾಧನೆ ಇತರೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿದೆ ಎಂದರು.
ವಿದ್ಯಾರ್ಥಿ ಜೀವನ ಅಮುಲ್ಯವಾದದ್ದು. ಪ್ರತಿಯೊರ್ವರಲ್ಲಿ ವಿವಿಧ ರೀತಿಯ ಪ್ರತಿಭೆಗಳಿವೆ ಪ್ರತಿಭೆಗೆ ತಕ್ಕ ಪೋತ್ಸಾಹ ಅಗತ್ಯ. ನಿಮ್ಮ ಸಾಧನೆಯ ಹಿಂದೆ ಶಿಕ್ಷಕರು ಹಾಗೂ ಪಾಲಕರ ಪಾತ್ರವಿದೆ. ನಿಮ್ಮ ಶ್ರಮದಿಂದಲೆ ನೀವು ಅತ್ಯುತ್ತಮ ಅಂಕ ಗಳಿಸಿದ್ದರೂ ಕೂಡ ನಿಮ್ಮ ಪಾಲಕರು ಹಾಗೂ ಶಿಕ್ಷಕರ ಮಾರ್ಗದರ್ಶನವೂ ಮೂಲ ಕಾರಣವಾಗಿರುತ್ತದೆ. ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು. ಪಟ್ಟಣ ಪಂಚಾಯತ್ ಅಧ್ಯಕ್ಷ ಶಿವರಾಜ ಮೇಸ್ತ ಮಾತನಾಡಿ ಸಾಧನೆಯನ್ನು ಗುರುತಿಸಿ ಗೌರವಿಸುವ ಕಾರ್ಯ ರೋಟರಿ ಈ ಹಿಂದಿನಿಂದಲೂ ಮಾಡುತ್ತಿದೆ ಎಂದು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಮುಖ್ಯೊಪಧ್ಯಾಯರಾದ ಎಚ್.ಎನ್. ಪೈ ಅಭಿಪ್ರಾಯಪಟ್ಟರು.
ಶಿಕ್ಷಣ ಪಡೆಯುವಾಗ ಅನೇಕ ರೀತಿಯ ನಿಯಮಗಳ ಬಂಧನಕ್ಕೆ ಒಳಗಾದರೂ ನಿಮ್ಮ ಗುರಿ ಅಚಲವಾಗಿರಲಿ. ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಸಾಧನೆ ಮಾಡಿ ನೀವು ಕೂಡ ಇತರರನ್ನು ಸನ್ಮಾನಿಸುವ ಅವಕಾಶ ಬರಲಿ ಎಂದರುಎಸ್.ಎಸ್.ಎಲ್.ಸಿ ಸಾಧನೆ ಮಾಡಿದ ತಾಲೂಕಿನ ಹತ್ತು ಹಾಗೂ ಸಿ.ಬಿ.ಎಸ್.ಸಿ ಸಾಧನೆ ಮೂವರು ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ರೋಟರಿ ಕಾರ್ಯದರ್ಶಿ ಮಹೇಶ ಕಲ್ಯಾಣಪುರ, ಖಜಾಂಚಿ ಡಿ.ಜೆ. ನಾಯ್ಕ, ಪ್ರಕಾಶ ರೊಡ್ರಿಗಿಸ್,ದಿನೇಶ ಕಾಮತ್, ಸೂರ್ಯಕಾಂತ ಸಾರಂಗ, ಮಂಜುಳಾ ಗುರುರಾಜ್, ಜಿ.ಟಿ.ಹೆಬ್ಬಾರ, ಡಿ.ಜೆ.ನಾಯ್ಕ,ಎಸ್.ಎಮ್.ಭಟ್, ನಸರುಲ್ಲಾ ಸಿದ್ದಿ ಮತ್ತಿತರರು ಉಪಸ್ಥಿತರಿದ್ದರು.