ಹೊನ್ನಾವರ : ತಾಲೂಕಿನ ಮುಗ್ವಾ ಪಂಚಾಯತ ವ್ಯಾಪ್ತಿಯ ಸಾಲಕೋಡ ಮತ್ತು ಹೊಸಾಕುಳಿ ಭಾಗಗಳಲ್ಲಿ ಕೇಂದ್ರದ ಉಜ್ವಲ ಯೋಜನೆಯಡಿಯಲ್ಲಿ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಸಹಕಾರದಿಂದ ಟ್ರಸ್ಟ್ ನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆಯವರು ಫಲಾನುಭವಿಗಳಿಗೆ ಉಚಿತ ಗ್ಯಾಸ್ ಕಿಟ್ ವಿತರಿಸಿದರು. ತೀರಾ ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳಲ್ಲಿ ಫಲಾನುಭವಿಗಳು ಹಣ, ಸಮಯ ವ್ಯಯಿಸದೇ, ಅಲೆದಾಟವಿಲ್ಲದೇ ಅವರ ಮನೆಯಂಗಳದಲ್ಲಿ ಗ್ಯಾಸ್ ಸಂಪರ್ಕ ಪಡೆದುಕೊಳ್ಳÀಬೇಕು, ಆ ಮೂಲಕ ತಾಯಂದಿರ ಸ್ವಾಸ್ಥ್ಯ ಮತ್ತು ಪರಿಸರ ಸಂರಕ್ಷಣೆಯ ಕೇಂದ್ರಸರಕಾರದ ಉದ್ದೇಶ ಈಡೇರಬೇಕು. ಫಲಾನುಭವಿಗಳು ಗ್ಯಾಸ್ ಬಳಸುವಾಗ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಮತ್ತು ಬಡವರಿಗಾಗಿ ರೂಪಿಸಲಾದ ಈ ಯೊಜನೆಯ ಅನುಕೂಲತೆಯನ್ನು ಪಡೆದುಕೊಳ್ಳಬೇಕು ಎಂದು ನಾಗರಾಜ ನಾಯಕ ತೊರ್ಕೆಯವರು ಸಲಹೆ ನೀಡಿದರು.
ಸಾಲಕೋಡಿನ ನಾಗವೇಣಿ ಗೌಡ, ಸೀಮು ಗೌಡ, ಅಮ್ಮಕ್ಕ ಗೌಡ, ದೇವು ಗೌಡ, ಗೌರಿ ಗೌಡ, ಗಂಗೆ ಗೌಡ, ನಾಗು ನಾಯ್ಕ, ಶ್ರೀನಿಧಿ ಹೆಗಡೆ, ದಾಕ್ಷಾಯಣಿ ಹೆಗಡೆ, ಮಾದೇವಿ ಜೋಗಿ, ಲಕ್ಷ್ಮೀ ನಾಯ್ಕ, ಮುಕ್ತಾ ಶೆಟ್ಟಿ, ಗೌರಿ ನಾಯ್ಕ, ಹೊಸಾಕುಳಿಯ ಕಮಲಾ ನಾಯ್ಕ, ಪ್ರೇಮಾ ಎಲ್. ಲೋಪಿಸ್, ಸಾವಿತ್ರಿ ಅಂಬಿಗ, ಲಕ್ಷ್ಮಿ ಎಸ್, ನಾಯ್ಕ, ಲಕ್ಷ್ಮಿ ಎಸ್. ಹೆಗಡೆ, ವiಹಾಲಕ್ಷ್ಮಿ ನಾಯ್ಕ, ಗೋಪಿ ಗೌಡ, ಶಂಕ್ರಿ ಮುಕ್ರಿ, ಸರಸ್ವತಿ ಹೆಗಡೆ ಸೇರಿದಂತೆ ಹಲವಾರು ಫಲಾನುಭವಿಗಳು ಸುಲಭವಾಗಿ ಗ್ಯಾಸ್ ಸಂಪರ್ಕ ಪಡೆದುಕೊಂಡು ಸಂತಸಗೊಂಡು ನಾಗರಾಜ ನಾಯಕ ತೊರ್ಕೆಯವರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷರಾದ ಸುಬ್ರಹ್ಮಣ್ಯ ನಾಯ್ಕ, ವೆಂಕಟ್ರಮಣ ಹೆಗಡೆ, ಟಿ. ಎಸ್. ಹೆಗಡೆ, ನಾರಾಯಣ ಹೆಗಡೆ ಹಾಗೂ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.