ಕೃಷಿ ಕೆಲಸದಲ್ಲಿ ತೊಡಗಿದ್ದಾಗ ಕಾಲುಜಾರಿ ಬಾವಿಗೆ ಬಿದ್ದು ರೈತ ಸಾವು.
ಹೊನ್ನಾವರ: ತಾಲೂಕಿನ ಮಂಕಿ ಜನತಾಕಾಲೋನಿ ಸಮೀಪ ತೆರೆದ ಬಾವಿಯಲ್ಲಿ ಬಿದ್ದು ಓರ್ವ ವ್ಯಕ್ತಿಯೊಬ್ಬ ಮೃತ ಪಟ್ಟಿರುವ ಘಟನೆ ವರದಿಯಾಗಿದೆ.
ನಾರಾಯಣ ಹನುಮಂತ ನಾಯ್ಕ ಎನ್ನುವವರು ಮಂಗಳವಾರ ಆಕಳಿಗೆ ಸೊಪ್ಪು ತರಲು ಹೋದಾಗ ಆಕಸ್ಮಿಕವಾಗಿ ತೆರೆದ ಬಾವಿಯಲ್ಲಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಸಂಭದ ಮಂಕಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಸ್ಕಿಡ್ ಆಗಿ ವ್ಯಕ್ತಿ ಸಾವು : ಕಾರವಾರದಲ್ಲಿ ದುರ್ಘಟನೆ
ಕಾರವಾರ: ಬೈಕ್ ಸ್ಕಿಡ್ ಆಗಿ ವ್ಯಕ್ತಿಯೋರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಚೆಂಡಿಯಾ ಐಸ್ ಫ್ಯಾಕ್ಟರಿ ಬಳಿ ನಡೆದಿದೆ. ಅಂಕೋಲಾ ತಾಲೂಕಿನ ಹಾರವಾಡದ ನಿವಾಸಿ ಆನಂದು ಗಣಪತಿ ಹರಿಕಂತ್ರ ಎಂಬಾತನೇ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯಾಗಿದ್ದಾನೆ.
ಈತ ಹಾರವಾಡದಿಂದ ಬೈತಕೋಲಕ್ಕೆ ತೆರಳುತ್ತಿದ್ದ ವೇಳೆ ಚೆಂಡಿಯಾ ಪೆಟ್ರೋಲ್ ಪಂಪ್ ಬಳಿ ಬರುತ್ತಿದ್ದಂತೆ ಇದ್ದಕ್ಕಿದ್ದಂತೆ ಬೈಕ್ ಸ್ಕಿಡ್ ಆಗಿದ್ದ ಪರಿಣಾಮ ತಲೆಗೆ ಗಂಭೀರ ಗಾಯವಾಗಿದ್ದು ಜಿಲ್ಲಾಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವನ್ನಪ್ಪಿದ್ದಾನೆ. ಪ್ರಕರಣ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿದ್ದು ಇನ್ಸ್ಪೆಕ್ಟರ್ ತನಿಖೆ ನಡೆಸುತ್ತಿದ್ದಾರೆ.