ಯಲ್ಲಾಪುರ- ಸಾಮಾಜಿಕ ಪರಿಶೋದನೆ ಸಂಬಂಧಿಸಿದಂತೆ ಅನುಷ್ಠಾನ ಇಲಾಖೆ ಹೊರತು ಪಡಿಸಿದ ತಾಲೂಕು ಮಟ್ಟದ ಅಧಿಕಾರಿಗಳಿಗೆ ವಿಶೇಷ ತರಬೇತಿ ಆಯೋಜನೆ ಮಾಡಲಾಗಿದ್ದು ಅವರಿಗೆ ಸಭೆಯ ಸಂಪೂರ್ಣ ಕಲ್ಪನೆ ಮತ್ತು ಮಹತ್ವ ನೀಡಲಾಗುವುದು ಎಂದು ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯ ಬೆಂಗಳೂರು ಜಂಟಿ ನಿರ್ದೇಶಕ ಕೆಂಪೆಗೌಡ ಅವರು ತಿಳಿಸಿದರು.
ಅವರು ಬುದುವಾರ ಯಲ್ಲಾಪುರ ತಾಲೂಕು ಪಂಚಾಯತ್ ಸಭಾ ಭವನದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಸಾಮಾಜಿಕ ಪರಿಶೋಧನಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಸಾಮಾಜಿಕ ಪರಿಶೋಧನೆಯಲ್ಲಿ ಕಂಡು ಬಂದಂತ ವಸೂಲಾತಿ ಪ್ರಕರಣಗಳ ಕುರಿತು ಮಾತನಾಡಿ ವಸೂಲಾತಿ ಸೂಚಿಸಲಾದ ಮೊತ್ತವನ್ನು ಕಾರಣರಾದ ವ್ಯಕ್ತಿಯ ಸ್ವಂತ ಹಣದಲ್ಲೇ ಭರಣ ಮಾಡಿಸುವಂತೆ ತಿಳಿಸಿದರು. ಹಾಗೂ ಮುಂದಿನ ದಿನದಲ್ಲಿ ಸಾಮಾಜಿಕ ಪರಿಶೋಧನೆಯಲ್ಲಿ ಇನ್ನಷ್ಟು ಹೊಸ ಬದಲಾವಣೆಗಳು ಬರಲಿದ್ದು ಪರಿಶೋಧನೆಯಲ್ಲಿ ಅನುಷ್ಟಾನ ಹಂತದ ಅಧಿಕಾರಿಗಳು ಸಕಾಲದಲ್ಲಿ ಸ್ಪಂದನೆ ಮಾಡುವಂತೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಹಾಜರಿದ್ದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಭಿವೃದ್ಧಿ ವಿಭಾಗದ ನಿರ್ದೇಶಕರಾದ ಯಾಲಕ್ಕಿ ಗೌಡ ಅವರು ಮಾತನಾಡಿ ಸಾಮಾಜಿಕ ಪರಿಶೋಧನೆ ಕೂಡ ಗ್ರಾಮೀಣ ಅಭಿವೃದ್ಧಿ ಯ ಒಂದು ಭಾಗವಾಗಿದ್ದು, ಇದನ್ನು ಸಂಬಂದಪಟ್ಟ ಅಧಿಕಾರಿಗಳು ತಿಳಿದುಕೊಂಡು, ಪರಿಶೋಧನೆಯಲ್ಲಿ ಬಂದ ಗಂಭೀರ ಅಂಶಗಳ ಅನುಪಾಲನ ಸಕಾಲದಲ್ಲಿ ಮಾಡಬೇಕು ಎಂದರು.
ಜಿಲ್ಲಾ ಪಂಚಾಯತ ಅಭಿವೃದ್ಧಿ ಡಿಎಸ್ ೨ ಎನ್ ಜಿ ನಾಯಕ ಜಿಲ್ಲೆಯ ಎಲ್ಲಾ ತಾಲೂಕು ಸಾಮಾಜಿಕ ಪರಿಶೋದಕರಿಂದ ನರೇಗಾ ಕುರಿತು ಅಭಿವೃದ್ದಿಗೆ ಪೂರಕ ವಿಷಯದ ಮಾಹಿತಿ ತೆಗೆದುಕೊಂಡರು.
ಜಿಲ್ಲಾ ಸಾಮಾಜಿಕ ಪರಿಶೋದಕ ಜಿ.ಆಯ್.ಹೆಗಡೆ ಎಲ್ಲರನ್ನೂ ಸ್ವಾಗತಿಸಿ ಪ್ರಗತಿ ವಿವರಗಳನ್ನು ಸಭೆಯಲ್ಲಿ ಮಂಡಿಸಿದರು.
ಈ ಸಂದರ್ಭದಲ್ಲಿ ಯಲ್ಲಾಪುರ ತಾಪಂ ಕಾರ್ಯನಿರ್ವಹಣಾಧಿಕಾರಿ ಜಗದೀಶ ಕಮ್ಮಾರ,ತಾಪಂ ನರೇಗಾ ಸಹಾಯಕ ನಿರ್ದೇಶಕ ಯೋಗೇಂದ್ರ ವೇದಿಕೆಯಲ್ಲಿದ್ದರು. ಜಿಲ್ಲೆಯ ವಿವಿದ ತಾಲೂಕು ಸಾಮಾಜಿಕ ಪರಿಶೋಧನಾ ಸಂಯೋಜಕರಾದ ಉಮೇಶ ಮುಂಡಳ್ಳಿ ಭಟ್ಕಳ, ಗಿರಿಧರ ನಾಯ್ಕ ಯಲ್ಲಾಪುರ, ಗೀತಾ ಗಾಂವಕರ್ ಅಂಕೋಲಾ, ಚಿದಾನಂದ ಗೌಡ ಹೊನ್ನಾವರ, ಲೋಹಿತ್ ಪೂಜಾರಿ ಶಿರಸಿ, ನಾಗರಾಜ ಹೆಗಡೆ ಸಿದ್ದಾಪುರ, ಮಾರುತಿ ಕರಿಬಸಣ್ಣವರ್ ಮುಂಡಗೋಡ,ರಾಜೇಶ ದೇಸಾಯಿ ಜೊಯಿಡಾ,ನಜೀರಾ ಬೇಗಂ ಹಳಿಯಾಳ ಉಪಸ್ಥಿತರಿದ್ದರು.ಕೊನೆಯಲ್ಲಿ ಗಿರಿಧರ ನಾಯ್ಕ ವಂದಿಸಿದರು.