ಕುಮಟಾ : ಇಂದು ಕುಮಟಾ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅಳಕೋಡ ವ್ಯಾಪ್ತಿಯ ಬೇರೆಬೇರೆ ಪಕ್ಷದ ಸುಮಾರು 15 ಕ್ಕೂ ಹೆಚ್ಚಿನ ಮುಖಂಡರು ಮಾಜಿ ಶಾಸಕಿಯರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಎಲ್.ನಾಯ್ಕ ಹಾಗೂ ಇತರ ಮುಖಂಡರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು..
ಮುಖಂಡರಾದ ಗಜಾನನ ಗಂಗು ಗೌಡ, ರಾಜೀವ ಮಂಜುನಾಥ್ ಗೌಡ, ಕೆ.ಎನ್.ಮಂಜು, ದುರ್ಗೆ ಹಮ್ಮು ಗೌಡ, ಹುಲಿಯಮ್ಮ ಗಂಗು ಗೌಡ, ಸುರೇಶ್ ಎನ್. ಗೌಡ, ಶಿವಾನಂದ ಹೆಚ್. ಗೌಡ,
ಕುಸುಮಾಕರ ಎನ್. ಗೌಡ, ಈಶ್ವರ ಎಸ್ ಗೌಡ, ವಿಟ್ಟಪ್ಪ ಮಡಿವಾಳ, ಸುರೇಶ್ ಕೆ. ಗೌಡ, ತಿಮ್ಮಪ್ಪ ನಾಗು ಗೌಡ, ಪ್ರೇಮ ಸುರೇಶ್ ಗೌಡ, ಸಂಜೀವ ಗಣಪು ಗೌಡ ಮುಂತಾದವರುಗಳನ್ನು ಮಾಜಿ ಶಾಸಕಿಯರು, ಬ್ಲಾಕ್ ಅಧ್ಯಕ್ಷರು ಹಾಗೂ ಹಾಜರಿದ್ದ ಪಕ್ಷದ ಮುಖಂಡರುಗಳು ಪಕ್ಷದ ಶಾಲು ಹೊದೆಸಿ ಆತ್ಮೀಯವಾಗಿ ಬರಮಾಡಿಕೊಂಡರು..
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಎಲ್.ನಾಯ್ಕ ಅವರು ಪ್ರಸ್ತಾವಿಕ ಮಾತುಗಳನ್ನಾಡಿದರು, ಹಾಗೂ ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿ ಪಕ್ಷಕ್ಕೆ ಸೇರ್ಪಡೆಗೊಂಡ ಪ್ರತಿಯೊಬ್ಬರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು…
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಹೊನ್ನಪ್ಪ ನಾಯಕ ಹಾಗೂ ಅಳಕೋಡ ಘಟಕಾಧ್ಯಕ್ಷರಾದ ಶ್ರೀ ಎಸ್.ಎಂ.ಭಟ್ ಅವರು ಹಾಗೂ ಅಳಕೋಡ ಪಂಚಾಯತಿಯ ಮಾಜಿ ಅಧ್ಯಕ್ಷರಾದ ಶ್ರೀ ಕೃಷ್ಣಾನಂದ ವೆರ್ಣೇಕರ್ ಅವರು ಶಾರದಾ ಮೋಹನ್ ಶೆಟ್ಟಿಯವರ ಶಾಸಕತ್ವದ ಅವಧಿಯಲ್ಲಿ ಅಳಕೋಡ ವ್ಯಾಪ್ತಿಯಲ್ಲಿ ಆದ ಅಭಿವೃದ್ಧಿ ಕಾರ್ಯಗಳ ಕುರಿತು ತಿಳಿಸಿದರು.
ಮಾಜಿ ಶಾಸಕಿಯರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಮಾತನಾಡಿ, ” ಪಕ್ಷಕ್ಕೆ ಸೇರ್ಪಡೆಗೊಂಡ ಪ್ರತಿಯೊಬ್ಬರಿಗೂ ಆದರದ ಸ್ವಾಗತ. ನಾನು ಶಾಸಕ ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷಳಾಗಿದ್ದಾಗ ಹೆಚ್ಚಿನ ಅನುದಾನ ತಂದು ಅಳಕೋಡ ವ್ಯಾಪ್ತಿಯಲ್ಲಿ ರಸ್ತೆ ಸೇತುವೆ ಹಾಗೂ ಇತರ ಅಭಿವೃದ್ಧಿ ಕಾರ್ಯಗಳಿಗೆ ಶ್ರಮಿಸಿದ್ದೆ. ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರ ನೇತೃತ್ವದ ಅಂದಿನ ನಮ್ಮ ಸರ್ಕಾರ ಬಡವರ, ದೀನದಲಿತರ, ಹಿಂದುಳಿದ ವರ್ಗಗಳ ಶ್ರೇಯೋಬವೃದ್ಧಿಗೆ ಶೃಮಿಸಿದ್ದರು. ಆದರೆ ಇಂದು ಕೇವಲ ನಮ್ಮ ಅವಧಿಯಲ್ಲಿ ಕಾಮಗಾರಿಗಳನ್ನೇ ಮುಂದುವರೆಸುತ್ತಿದ್ದಾರೆಯೇ ಹೊರತು ಅಭಿವೃದ್ಧಿ ಶೂನ್ಯವಾಗಿದೆ” ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕಿಯರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ವಿ.ಎಲ್.ನಾಯ್ಕ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಹೊನ್ನಪ್ಪ ನಾಯಕ ಹಾಗೂ ಶ್ರೀ ನಾಗೇಶ್ ನಾಯಕ, ಮುಖಂಡರಾದ ಶ್ರೀ ರವಿಕುಮಾರ್ ಎಂ.ಶೆಟ್ಟಿ, ಭುವನ್ ಭಾಗ್ವತ್, ಶ್ರೀ ಎಸ್. ಎಂ.ಭಟ್, ಶ್ರೀಮತಿ ಸುರೇಖಾ ವಾರೇಕರ್, ಮುಜಾಫರ್ ಸಾಬ್, ಶ್ರೀ ಕೃಷ್ಣಾನಂದ ವೆರ್ಣೇಕರ್, ಶ್ರೀ ವಿನಾಯಕ ಅಂಬಿಗ, ಶ್ರೀ ಜಗದೀಶ್ ನಾಯ್ಕ ಮುಂತಾದವರು ಹಾಜರಿದ್ದರು….