ಹೊನ್ನಾವರ : ರೈಲ್ವೇ ಸೇತುವೆಯ ಬಳಿ ಆತ್ಮಹತ್ಯೆಗೆ ಸಿದ್ಧನಾಗಿದ್ದ ಯುವಕನನ್ನು ತಡೆದ ಪೊಲೀಸರು ಬುದ್ಧಿವಾದ ಹೇಳಿದ ಘಟನೆ ಹೊನ್ನಾವರ ತಾಲೂಕಿನ ಮಂಕಿ ಪೊಲೀಸ್ ಠಾಣೆ ವ್ಯಾಪ್ತಿಯ ಶೇಡಿಮೂಲೆಯಲ್ಲಿಂದು ನಡೆದಿದೆ.
ಯುವಕನೋರ್ವನು ಹೊನ್ನಾವರ ತಾಲೂಕಿನ ಮಂಕಿ ಶೇಡಿಮೂಲೆಯ ಬಳಿ ಇರುವ ರೈಲ್ವೆ ಸೇತುವೆ ಬಳಿ ನಿಂತು ಆತ್ಮಹತ್ಯೆ ಮಾಡಿಕೊಳ್ಳಲು ಯೋಜನೆ ರೂಪಿಸಿದ್ದ. ಆದರೆ ಈತನನ್ನು ಕಂಡು ಅನುಮಾನಗೊಂಡ ಸ್ಥಳೀಯರು ತಕ್ಷಣ 112 ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ತಕ್ಷಣ ತಮ್ಮವಾಹನದೊಂದಿಗೆ ಸ್ಥಳಕ್ಕಾಗಮಿಸಿ 112 ಸಹಾಯವಾಣಿ ಎಎಸ್‌ಐ ಹಾಗೂ ಸಿಬ್ಬಂದಿಗಳು ಆತನನ್ನು ತಡೆದು ರಕ್ಷಿಸಿದ್ದಾರೆ. ಬಳಿಕ ಬುದ್ಧಿವಾದ ಹೇಳಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಮಂಕಿ ಠಾಣಾ ವ್ಯಾಪ್ತಿಯ ಹೈವೇ ಪಟ್ರೋಲ್ ವಾಹನದ ಅಧಿಕಾರಿಗಳಿಗೆ ಯುವಕನ್ನು ಒಪ್ಪಿಸಿದ್ದಾರೆ. ಬಳಿಕ ಮಂಕಿ ಠಾಣೆಯ ಪೊಲೀಸರು ಯುವಕನಿಗೆ ಬುದ್ಧಿವಾದ ಹೇಳಿ ಆತನ ಕುಟುಂಬಸ್ಥರನ್ನು ಕಳಿಸಿ ಸಮಸ್ಯೆ ಪರಿಹರಿಸುವಲ್ಲಿ ಯಶಸ್ವಿಯಾಗಿದ್ದಾರೆ.