ಕುಮಟಾ : ನಾಳೆ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ವ್ಯಾಪ್ತಿಯಲ್ಲಿ ಜರುಗುವ ಕೋವಿಡ್ ಲಸಿಕಾಕರಣದ ಮಾಹಿತಿ ಇಲ್ಲಿದೆ.
ದಿನಾಂಕ 03/09/2021 ರಂದು ಕುಮಟಾ ತಾಲೂಕಿನ ಒಟ್ಟೂ 350 ಡೋಸ್ ಕೋವೀಶೀಲ್ಡ್ ಲಸಿಕೆ, ಹಾಗೂ 680 ಡೋಸ್ ಕೊವಾಕ್ಸೀನ್ ಲಸಿಕೆ ಲಭ್ಯವಿದ್ದು, ಮೊದಲನೇ ಡೋಸ್ ಹಾಗೂ ಎರಡನೇ ಡೋಸ್ ಲಸಿಕಾಕರಣ ನಡೆಯಲಿದೆ ಎಂದು ಮಾಹಿತಿ ಲಭ್ಯವಾಗಿದೆ. ಎಲ್ಲೆಲ್ಲಿ ಲಸಿಕಾಕರಣ ಯೋಜಿಸಲಾಗಿದೆ ಎಂಬ ವಿವರವೂ ಈ ಕೆಳಗಿನಂತಿದೆ.
ಕುಮಟಾ ಸಾರ್ವಜನಿಕ ಆಸ್ಪತ್ರೆಯಲ್ಲಿ 110 ಡೋಸ್, ಪ್ರಾಥಮಿಕ ಆರೋಗ್ಯ ಕೇಂದ್ರ ಹಿರೇಗುತ್ತಿ 10 ಡೋಸ್, ಪ್ರಾಥಮಿಕ ಆರೋಗ್ಯ ಕೇಂದ್ರ ಕಾಗಾಲ 50 ಡೋಸ್, ಪಿಸರಿಸ್ ಶಾಲೆ ವನ್ನಳ್ಳಿ 180 ಡೋಸ್ ಕೋವೀಶೀಲ್ಡ್ ಲಸಿಕೆ ಲಭ್ಯವಿದೆ. ಕುಮಟಾ ಸಾರ್ವಜನಿಕ ಆಸ್ಪತ್ರೆಯಲ್ಲಿ 560 ಡೋಸ್, ಪಿಸರಿಸ್ ಶಾಲೆ ವನ್ನಳ್ಳಿ 120 ಡೋಸ್ ಕೊವಾಕ್ಸೀನ್ ಲಸಿಕೆ ಲಭ್ಯವಿದೆ.
ಸಾರ್ವಜನಿಕರು ಯಾವುದೇ ಗೊಂದಲ ಮಾಡಿಕೊಳ್ಳದೆ, ಆಶಾ ಕಾರ್ಯಕರ್ತೆಯರು, ತಾಲೂಕಾ ಆರೋಗ್ಯ ಸಿಬ್ಬಂದಿಗಳಿoದ ಮಾಹಿತಿ ಪಡೆದು , ಸಾಮಾಜಿಕ ಅಂತರ ಕಾಯ್ದುಕೊಂಡು ಲಸಿಕೆ ಪಡೆದುಕೊಳ್ಳಬೇಕಿದೆ. ಲಸಿಕೆ ಪಡೆಯುವಲ್ಲಿ ಸುಖಾಸುಮ್ಮನೆ ಬಂದಲ ಸೃಷ್ಟಿಸುವುದು ಹಾಗೂ ಸಾಮಾಜಿಕ ಅಂತರ ಪಾಲನೆ ಮಾಡಿದೆ ಕೊರೋನಾ ನಿಯಮಗಳನ್ನು ಮೀರುವಂತಹ ಕಾರ್ಯ ಮಾಡಬಾರದೆಂದು ಇದೇ ಸಂದರ್ಭದಲ್ಲಿ ಅಧಿಕಾರಿಗಳು ಜನರಲ್ಲಿ ವಿನಂತಿ ಮಾಡಿದ್ದಾರೆ.