ಅಂಕೋಲಾ : ತಾಲೂಕಿನ ಬೆಳಂಬಾರದಲ್ಲಿ ಮಟ್ಕಾ ಜುಗರಾಟ ಆಡಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಅಂಕೋಲಾ ತಾಲೂಕಿನ ಬೆಳಂಬಾರ ಉತ್ತರ ಖಾರ್ವಿವಾಡಾದ ನಿವಾಸಿ ಮಂಜುನಾಥ ನಾಯ್ಕ ಆರೋಪಿಯಾಗಿದ್ದಾನೆ.
ಈತನು ಅಂಕೋಲಾ ತಾಲೂಕಿನ ಬೆಳಂಬಾರದ ಮುದ್ರಾಣಿಯ ಕನ್ನಡ ಶಾಲೆಯ ಹತ್ತಿರದ ರಸ್ತೆಯ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ ರಸ್ತೆಯಲ್ಲಿ ಬಂದು ಹೋಗುವ ಸಾರ್ವಜನಿಕರಿಗೆ ಅದೃಷ್ಟ ಸಂಖ್ಯೆ ತಾಗಿದರೆ 01 ರೂ. 80 ರೂ. ಕೊಡುವುದಾಗಿ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದು ತನ್ನ ಹತ್ತಿರ ಇರುವ ಹಾಳೆಯಲ್ಲಿ ಅಂಕೆ-ಸಂಖ್ಯೆ ಬರೆದುಕೊಂಡು ಓ.ಸಿ ಮಟಕಾ ಜೂಗಾರಾಟ ಆಡುತ್ತಿದ್ದ ಎನ್ನಲಾಗಿದೆ.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ. ಅಂಕೋಲಾ ಠಾಣೆ ಪಿಎಸ್‌ಐ ಪ್ರವೀಣಕುಮಾರ ಅವರ ನೇತೃತ್ವದಲ್ಲಿ ನಡೆದ ಈ ದಾಳಿಯ ವೇಳೆ ಆರೋಪಿಯನ್ನು ವಶಕ್ಕೆ ಪಡೆದು ಆತನಿಂದ ಮಟ್ಕಾ ಜುಗರಾಟದ ಸಾಮಗ್ರಿಗಳು ಹಾಗೂ ನಗದು ಹಣ 1,380 ರೂ. ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ.
ಶಿರಸಿ ತಾಲೂಕಿನ ಬನವಾಸಿಯಲ್ಲಿಯೂ ಪ್ರಕರಣ
ಮಟ್ಕಾಜುಗರಾಟದ ಮೂಲಕ ಸಾರ್ವಜನಿಕರಿಗೆ ಹಣದ ಆಮಿಷವೊಡ್ಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ ಘಟನೆ ಶಿರಸಿ ತಾಲೂಕಿನ
ಬನವಾಸಿಯಲ್ಲಿ ನಡೆದಿದೆ. ಶಿರಸಿ ತಾಲೂಕಿನ ಹೊಸಪೇಟೆ ಓಣಿ ದಾಸನಕೊಪ್ಪದ ಖಾದರಸಾಬ್ ಇಂಗಳಗಿ, ಹಾಗೂ ದಯಾನಂದ ಪ್ರಭು, ಆರೋಪಿಗಳಾಗಿದ್ದಾರೆ. ಇವರಲ್ಲಿ ಖಾದರ್‌ಸಾಬ್ ಈತನು ದಯಾನಂದನ ಸಹಾಯದಿಂದ ಶಿರಸಿ ತಾಲೂಕಿನ ಬದನಗೋಡ ಗ್ರಾಮದ ದಾಸನಕೊಪ್ಪದ ಹೊಸಪೇಟೆ ಓಣಿಯ ಸಾರ್ವಜನಿಕ ರಸ್ತೆಯಲ್ಲಿಂ1ರೂ.80 ರೂ. ಕೊಡುವುದಾಗಿ ಹೇಳಿ ಓ.ಸಿ ಮಟಕಾ ಜೂಗಾರಾಟ ನಡೆಸಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದಾಗ ಖಚಿತ ಮಾಹಿತಿ ಪಡೆದ ಬನವಾಸಿ ಠಾಣೆ ಪಿಎಸ್‌ಐ ಹಣಮಂತ ಬಿರಾದಾರ ಅವರ ನೇತೃತ್ವದ ತಂಡವು ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ, ಈ ವೇಳೆ ಅವರಿಂದ ಮಟ್ಕಾಜುಗರಾಟದ ಸಾಮಗ್ರಿಗಳು ಹಾಗೂ ನಗದು ಹಣ 920 ರೂ. ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೂಗೊಂಡಿದ್ದಾರೆ.