ಅಂಕೋಲಾ : ಎರಡನೇ ಅಲೆಯ ಕೊರೋನಾ ಆರ್ಭಟದ ನಂತರ ಮೂರನೇ ಅಲೆಯ ಮುನ್ನೆಚ್ಚರಿಕೆ ಎಲ್ಲೆಡೆ ನಡೆದಿದೆ. ಮೂರನೇ ಅಲೆ ಬರದಂತೆ ತಡೆಯಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದು ಕೆಲವು ಕಠಿಣ ಕ್ರಮಕ್ಕೂ ಮುಂದಾಗುತ್ತಿದ್ದಾರೆ. ಇದೀಗ ವಾರದ ಸಂತೆಯನ್ನು ಬಂದ್ ಮಾಡಿ ಪುರಸಭಾ ಮುಖ್ಯಾಧಿಕಾರಿಗಳು ಅಂಕೋಲಾದಲ್ಲಿ ಆದೇಶ ಹೊರಡಿಸಿದ ಬಗ್ಗೆ ವರದಿಯಾಗಿದೆ.

ಕೋವಿಡ್ ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಅಂಕೋಲಾ ಪುರಸಭೆ ವ್ಯಾಪ್ತಿಯಲ್ಲಿ ಶನಿವಾರ ವಾರದ ಸಂತೆ ಇರುವುದಿಲ್ಲ ಎಂದು ಪುರಸಭಾ ಮುಖ್ಯಾಧಿಕಾರಿ ತಿಳಿಸಿದ್ದಾರೆ. ಜೊತೆಗೆ ಪಟ್ಟಣದಲ್ಲಿ ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ಸಾಮಾಜಿಕ ಅಂತರ ಪಾಡಿಕೊಳ್ಳಬೇಕು ಹಾಗೂ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂದು ಅಂಕೋಲಾ ಪುರಸಭೆಯ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಹೆಗಡೆ ತಣ್ಣೀರಕುಳಿಯಲ್ಲಿ ಹೈಟೆಕ್ ಅಂಗನವಾಡಿ ಉದ್ಘಾಟನೆ

ಮೂರನೇ ಅಲೆ ಬರದಂತೆ ತಡೆಯುವುದು ಸಾಮಾನ್ಯ ಸಾರ್ವಜನಿಕರ ಜವಾಬ್ದಾರಿ ಆಗಿದ್ದು, ಈ ಬಗ್ಗೆ ಅಗತ್ಯ ಎಚ್ಚರಿಕೆ ಕೈಗೊಳ್ಳಬೇಕು ಹಾಗೂ ಸಾರ್ವಜನಿಕರು ಈ ನಿಯಮ ಪಾಲಿಸಬೇಕೆಂದು ಮಾತುಗಳು ಕೆಲವೆಡೆ ಕೇಳಿಬರುತ್ತಿದ್ದರೆ. ಇನ್ನೂ ಕೆಲವೆಡೆ ವ್ಯಾಪಾರಿಗಳು ಹಾಗೂ ಜನರಿಗೆ ಸಂತೆ ಬಂದ್ ಮಾಡಿದರೆ ಸಮಸ್ಯೆ ಆಗುವುದು ಎಂಬ ಮಾತುಗಳೂ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.

RELATED ARTICLES  ಇಂದಿನ‌ ದಿನ ನಿಮಗೆ ಹೇಗಿದೆ ಗೊತ್ತೇ? 02/05/2019 ರ ದಿನ‌ ಭವಿಷ್ಯ ಇಲ್ಲಿದೆ ನೋಡಿ.