ಕಾರವಾರ: ಯುವಕನೊಬ್ಬ ವಾಹನ ಚಲಾಯಿಸುತ್ತಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟ ಘಟನೆ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಸಂಭವಿಸಿದೆ.

ಧಾರವಾಡ ಮೂಲದ ಮೈಲಾರಿ ಸಹದೇವಪ್ಪ ಜರಗ ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಈತ ಹುಬ್ಬಳ್ಳಿಯಿಂದ ಕಾರವಾರ ನಗರಕ್ಕೆ ಇಲೆಕ್ಟಿಕಲ್ ಸಾಮಗ್ರಿಗಳನ್ನು ಪೂರೈಸಲು ಆಗಮಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.

RELATED ARTICLES  ಗಣಪತಿ ಪ್ರಕರಣ ಸಿಬಿಐಗೆ! ಶುರುವಾಗಿದೆಯಾ ಜಾರ್ಜ ಗೆ ಭಯ?

ಹೃದಯದಲ್ಲಿ ಕಾಣಿಸಿಕೊಂಡ ನೋವಿನಿಂದಾಗಿ ವಾಹನವನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಿದ ವ್ಯಕ್ತಿ ಜೀವನ್ಮರಣ ಸ್ಥಿತಿಯನ್ನು ಅನುಭವಿಸಿದ್ದಾನೆ. ನಂತರ ವಾಹನದಲ್ಲಿಯೇ ಕೊನೆಯುಸಿರೆಳೆದಿದ್ದಾನೆ ಎನ್ನಲಾಗಿದೆ. ಪೊಲೀಸರು ಬಂದು ವಾಹನ ಪರಿಶೀಲನೆ ನಡೆಸಿದಾಗ, ಈತ ಮೃತಪಟ್ಟಿರುವುದು ದೃಢಪಟ್ಟಿದೆ. ಸದ್ಯ ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳಕ್ಕೆ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪಂಚನಾಮೆ ನಡೆಸಿದ್ದಾರೆ.

RELATED ARTICLES  ಪ್ರವಾಸಕ್ಕೆ ಹೋದ ಶಿಕ್ಷಕರೇ ಮಕ್ಕಳಿಗೆ ಮದ್ಯ ಕುಡಿಸಿದರೇ?