ಕುಮಟಾ : ತಾಲೂಕಿನ ಗುಡೇ ಅಂಗಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕರಾದ ವಸಂತ ಶಾನಭಾಗರಿಗೆ ಪ್ರಸಕ್ತ ಸಾಲಿನ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.ವಸಂತ ಶಾನಭಾಗ ಇವರು ಜನಾನುರಾಗಿ ಶಿಕ್ಷಕರಾಗಿದ್ದು ತಮ್ಮ ಸರಳ ಸಜ್ಜನಿಕೆಯ ಸ್ವಭಾವದಿಂದ ಜನಮನ ಗೆದ್ದ ಶಿಕ್ಷಕರಾಗಿದ್ದಾರೆ.ಕ್ರಿಯಾಶೀಲ ವ್ಯಕ್ತಿತ್ವದ ಇವರು ತಾಲೂಕಿನಲ್ಲಿ ಜರುಗುವ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಹಗಲಿರುಳು ಶ್ರಮಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತಾಲೂಕಿನಾದ್ಯಂತ ಅಜಾತ ಶತ್ರು ವ್ಯಕ್ತಿತ್ವದ ವಸಂತ ಶಾನಭಾಗರಿಗೆ ಈ ಪುರಸ್ಕಾರ ದೊರಕಿರುವ ಬಗ್ಗೆ ಸಂತೋಷ ವ್ಯಕ್ತವಾಗಿದ್ದು, ಅವರ ಸಹುದ್ಯೋಗಿಗಳು ಪಾಲಕ ವೃಂದದವರು ಹಾಗೂ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

RELATED ARTICLES  ಕಾಲ್ನಡಿಗೆಯಲ್ಲಿಯೇ ಅಜ್ಮೀರ್ ಗೆ ತೆರಳಿ ವಾಪಸ್ಸಾದ ಸಂಶೀರ್