ಭಟ್ಕಳ: ತಾಲೂಕಿನ ಕಾಯ್ಕಿಣಿ ಮಠದ ಹಿತ್ಲುವಿನಲ್ಲಿ ಬಾವಿಯಿಂದ ನೀರು ತರಲು ಹೋದ ವ್ಯಕ್ತಿ ಯೋರ್ವರು ಆಕಸ್ಮಿಕವಾಗಿ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತ ವ್ಯಕ್ತಿಯನ್ನು ಸಾಂತಾ ಕೋಸ್ತ ಟೇಲೀಸ್ ಎಂದು ಗುರುತಿಸಲಾಗಿದೆ. ಮನೆಯಲ್ಲಿ ನೀರು ಇಲ್ಲದಿರುವುದನ್ನು ಗಮನಿಸಿದ ಈತ ರಾತ್ರಿ ಬಾವಿಯಿಂದ ನೀರು ತರಲು ಹೋದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಸ್ಥಳೀಯ ಮಾಹಿತಿಯ ಪ್ರಕಾರ ಕೆಲ ಸಮಯದ ನಂತರ ಅಕ್ಕಪಕ್ಕದವರ ಸಹಾಯದಿಂದ ಮೃತ ದೇಹವನ್ನು ಮೇಲಕ್ಕೆ ಎತ್ತಿ ಮುರುಡೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ದು ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.