ಗೋಕರ್ಣ : ಇಲ್ಲಿನ ಬಂಡಿಕೇರಿ ಭಾಗದಲ್ಲಿ ರಾತ್ರಿ ವೇಳೆ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಇಲ್ಲಿನ ಜನತೆಗೆ ಆತಂಕಕ್ಕೆ ಒಳಗಾಗಿದ್ದಾರೆ. ಬಂಗ್ಲೆಗುಡ್ಡ ಕೆಳಭಾಗದಲ್ಲಿ ನಿವಾಸಿಗಳ ಮನೆಗಳ ಸಾಕು ನಾಯಿಯನ್ನು ಹಿಡಿಯುತ್ತಿದ್ದು, ಈಗಾಗಲೇ ಅನೇಕ ನಾಯಿ ಚಿರತೆ ಪಾಲಾಗಿವೆ ಎಂದು ವರದಿಯಾಗಿದೆ.

ಈ ಬಗ್ಗೆ ಅರಣ್ಯ ಇಲಾಖೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಬಿಡಾಡಿ ದನಗಳು ಹೆಚ್ಚುತ್ತಿದ್ದು, ಇದರ ಜೊತೆ ನಾಯಿಗಳು ಈ ಭಾಗದಲ್ಲಿ ಸಾಕಷ್ಟು ಇದ್ದು, ರಾತ್ರಿ ವೇಳೆ ಇವುಗಳು ಚಿರತೆಗೆ ಸುಲಭ ಆಹಾರವಾಗುತ್ತಿದೆ ಎನ್ನಲಾಗಿದೆ. ಇದಷ್ಟೇ ಅಲ್ಲದೆ ಇನ್ನ ಮನೆಯ ಸುತ್ತಮುತ್ತವೂ ಚಿರತೆ ಕಾಣಿಕೊಳ್ಳುತ್ತಿರುವುದರಿಂದ ಜನರು ಭಯಭೀತರಾಗಿದ್ದಾರೆ.

RELATED ARTICLES  ಕರೋನಾ ಹಿನ್ನೆಲೆ ಪರಿಹಾರ ನಿಧಿಗೆ 1 ಲಕ್ಷ ರೂ ನೀಡಿದ ದೀವಗಿ ರಾಮಾನಂದ ಶ್ರೀಗಳು.

ಕಳೆದ ಕೆಲ ದಿನಗಳ ಹಿಂದಷ್ಟೇ ಅಂಕೋಲಾ ತಾಲೂಕಿನ ಕೊಂಡಳ್ಳಿ ಗ್ರಾಮದ ರಮಾನಂದ ಎನ್ನುವವರ ಮನೆಗೆ ಆಹಾರ ಅರಸಿಬಂದ ಚಿರತೆ, ಮನೆಯ ಬಳಿ ಇದ್ದ ನಾಯಿ ಹಿಡಿಯುವ ಪ್ರಯತ್ನ ಮಾಡಿದ ದೃಷ್ಯ ಸಿ.ಸಿ ಟಿ.ವಿಯಲ್ಲಿ ಸೆರೆಯಾಗಿ ಸುದ್ದಿಯಾಗಿತ್ತು.

RELATED ARTICLES  ಹೊಲನಗದ್ದೆ ಗ್ರಾಮ ಜೀವವೈವಿಧ್ಯ ಪ್ರಸ್ತುತಿಗೆ ಸಹ್ಯಾದ್ರಿ ಯುವ ಪರಿಸರ ವಿಜ್ಞಾನಿ ಪ್ರಶಸ್ತಿ

ಅರಣ್ಯ ಇಲಾಖೆ ಹಾಗೂ ಸಿಬ್ಬಂದಿಗಳು ಈ ಬಗ್ಗೆ ಕ್ರಮ ಕೈಗೊಂಡು, ಜನತೆಯ ಭಯ ನಿವಾರಿಸುವತ್ತ ತಮ್ಮ ಗಮನ ಹರಿಸಬೇಕು ಎನ್ನುವುದು ಸಾರ್ವಜನಿಕರ ಆಶಯವಾಗಿದೆ.