ಯಲ್ಲಾಪುರ: ಚಲಿಸುತಿದ್ದ ಗ್ಯಾಸ್ ಟ್ಯಾಂಕರ್’ನ ಟ್ಯಾಂಕ್ ಕಳಚಿ ಹೆದ್ದಾರಿಗೆ ಬಿದ್ದ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63 ರ ಅರಬೈಲ್ ಘಟ್ಟದಲ್ಲಿ ಇಂದು ನಡೆದಿದೆ.ಘಟನೆಯಿಂದಾಗಿ ಸಂದರ್ಭದಲ್ಲಿ ಕೆಲವು ಸಮಯ ಹುಬ್ಬಳ್ಳಿ-ಅಂಕೋಲಾ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಸಂಚಾರ ವ್ಯತ್ಯಯವಾಗಿತ್ತು.
ಮಹಾರಾಷ್ಟ್ರ ಮೂಲದ ಮಂಗಳೂರಿನಿಂದ ಹುಬ್ಬಳ್ಳಿ ಕಡೆ ಭಾರತ್ ಗ್ಯಾಸ್ ಕಂಪನಿಯ ಗ್ಯಾಸ್ ತುಂಬಿದ ಟ್ಯಾಂಕ್ ಹೊತ್ತೊಯ್ಯುತಿದ್ದ ಟ್ಯಾಂಕರ್ ಚಲುಸುತಿದ್ದಾಗ ಟ್ಯಾಂಕರ್ ನ ಕೊಂಡಿ ಕಳಚಿದ್ದರಿಂದ ಚಲಿಸುತ್ತಿರುವಾಗಲೇ ಹೆದ್ದಾರಿಗೆ ಬಿದ್ದಿದೆ.
ತಕ್ಷಣದಲ್ಲಿ ಹೆದ್ದಾರಿ ನಿರ್ವಹಣೆ ಅಧಿಕಾರಿ ಮುರುಗೇಶ್ ರವರು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದರಿಂದ ತಕ್ಷಣದಲ್ಲಿ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೋಲೀಸರು ಯಾವುದೇ ದುರಂತವಾಗದಂತೆ ತಡೆದಿದ್ದಾರೆ ಎಂದು ವರದಿಯಾಗಿದೆ.