ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ನಾಳೆ ಒಟ್ಟು 10,700 ಲಸಿಕೆ ಲಭ್ಯವಿದೆ. ಇವುಗಳಲ್ಲಿ 8,200 ಕೋವಿಶೀಲ್ಡ್ ಮತ್ತು 2,500 ಕೋವ್ಯಾಕ್ಸಿನ್ ಲಭ್ಯವಿದೆ ಎಂದು
ಕೋವೀಶೀಲ್ಡ್ ಎಲ್ಲಿ?
ಅಂಕೋಲಾ 1000, ಭಟ್ಕಳ 1500, ಹಳಿಯಾಳ 1000, ಹೊನ್ನಾವರ 1000, ಮುಂಡಗೋಡ್ 1000, ಶಿರಸಿ 500, ಸಿದ್ದಾಪುರ 1000 ಯಲ್ಲಾಪುರ 500, ಜಿಲ್ಲಾಸ್ಪತ್ರೆ 500, ದಾಂಡೇಲಿ ಎರಡುನೂರು ಲಸಿಕೆ ಲಭ್ಯವಿದೆ.
ಕೋವ್ಯಾಕ್ಸೀನ್ ಎಲ್ಲಿ?
ಹಳಿಯಾಳ 1000, ಹೊನ್ನಾವರ 100, ಶಿರಸಿ 1000, ಜಿಲ್ಲಾ ಆಸ್ಪತ್ರೆ 200, ದಾಂಡೇಲಿ 200 ಲಸಿಕೆ ಲಭ್ಯ.
ಹೊನ್ನಾವರದಲ್ಲಿ ಎಲ್ಲೆಲ್ಲಿ?
ಹೊನ್ನಾವರ ತಾಲೂಕಿನಲ್ಲಿ ನಾಳೆ ಒಟ್ಟು 1160 ಡೋಸ್ ವ್ಯಾಕ್ಸಿನ್ ಲಭ್ಯವಿದೆ. 1000 ಕೋವಿಶೀಲ್ಡ್ ಮತ್ತು 160 ಕೋವ್ಯಾಕ್ಸಿನ್ ಲಭ್ಯವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹೊನ್ನಾವರ ಪಟ್ಟಣದ ಹಳೆಯ ಡಿ ಎಫ್ ಓ ಕಚೇರಿ ಕಟ್ಟಡದಲ್ಲಿ ಹಾಗೂ ಸಾಲಕೋಡ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ, ಕಡತೋಕಾ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಮತ್ತು ಹಳದೀಪುರ ಪ್ರಾಥಮಿಕ ಆರೋಗ್ಯ ಕೆಂದ್ರ ವ್ಯಾಪ್ತಿಯಲ್ಲಿ ವ್ಯಾಕ್ಸಿನ್ ನೀಡಲಾಗುವುದು.
ಅಂಕೋಲಾದಲ್ಲಿ ಎಲ್ಲಿ?
ಅಂಕೋಲಾ ತಾಲೂಕಿನ ವಿವಿಧ ಭಾಗಗಳ ವಿತರಣೆಗೆ ಸಂಬಂಧಿಸಿದಂತೆ ಸಪ್ಟೆಂಬರ್ 5 ರ ರವಿವಾರ ಒಟ್ಟೂ 1000 ಡೋಸ್ ಕೋವಿಡ್ ಲಸಿಕೆಗಳ ವಿತರಣೆಗೆ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ. ಕಿ.ಪ್ರಾ ಶಾಲೆ ಪಳ್ಳಿಕೇರಿ (200), ದೇಸಿನಭಾಗ (200) ಹಿ.ಪ್ರಾ.ಶಾಲೆ ಬೊಗ್ರಿಬೈಲ್ (200), ಹಿ ಪ್ರಾಶಾಲೆ ಉಳುವರೆ (200) ಸುಂಕಸಾಳ (100), ಹಳವಳ್ಳಿ (100),ಡೋಸ್ ಲಸಿಕೆಗಳನ್ನು ಹಂಚಿಕೆ ಮಾಡಲಾಗುತ್ತಿದೆ.
ಅವುಗಳಲ್ಲಿ ಪ್ರಥಮ ಡೋಸ್ ಹಾಗೂ ,ದ್ವಿತೀಯ ಡೋಸ್ ಗಳು ಒಳಗೊಂಡಿದೆ. ವಿಕಲಚೇತನರರು , ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ವಿಶೇಷ ಪ್ರಾಧಾನ್ಯತೆಯಡಿ ಕೆಲ ಪ್ರಮಾಣದ ಲಸಿಕೆಗಳನ್ನು ಕಾಯ್ದಿರಿಸಲಾಗುತ್ತಿದೆ.