ಕುಮಟಾ: ‘ಪಟ ಶಾಲಾ’ ಡಿಜಿಟಲ್ ಕ್ಲಾಸ್ ರೂಮ್, ಸುರಗಿ, ಕಡ್ಲೆ ಇದರ ಸಂಸ್ಥಾಪಕರಾದ ಅರವಿಂದ ಶಾಸ್ತ್ರಿ ಮತ್ತು ಮೀತಾ ಶಾನಭಾಗ ದಂಪತಿಗಳು ಪಟ್ಟಣದ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಗೆ ರಾಸ್ಪ್‍ಬೆರಿ ಆಧಾರಿತ ಪ್ರೊಗ್ರಾಮಿಂಗ್ ಕಂಪ್ಯೂಟರ್ ಮತ್ತು ಡಿಜಿಟಲ್ ಕಲಿಕಾ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಿದರು. ಆಧುನಿಕ ಶಿಕ್ಷಣ ಪದ್ಧತಿಗೆ ಪೂರಕವಾಗಿ ಡಿಜಿಟಲ್ ತಂತ್ರಜ್ಞಾನದ ಮೂಲಕ ಮಕ್ಕಳಿಗೆ ಅತ್ಯುಪಯುಕ್ತ ಜ್ಞಾನವನ್ನು ನೀಡುವುದೇ ಪಟ ಶಾಲಾದ ಮುಖ್ಯ ಉದ್ದೇಶವಾಗಿದೆ ಎಂದು ಅರವಿಂದ ಶಾಸ್ತ್ರಿ ನುಡಿದರು. ತಾವು ಮತ್ತು ಸಮಾನ ಮನಸ್ಸಿನ ಗೆಳೆಯರು ಹುಟ್ಟುಹಾಕಿದ ಪಟ ಶಾಲಾ ವಿದ್ಯಾರ್ಥಿಗಳ ಕಲಿಕಾ ಪ್ರಕ್ರಿಯೆಗೆ ಚುರುಕು ಮುಟ್ಟಿಸುವಲ್ಲಿ ನೆರವಾಗುತ್ತಿರುವ ಈ ಯೋಜನೆಗೆ ಧನಸಹಾಯ ಕಲ್ಪಿಸುತ್ತಿರುವ ತಂಡದ ಸದಸ್ಯರಿಗೆ ಧನ್ಯವಾದ ಅರ್ಪಿಸಿದರು. ರಜಾ ಅವಧಿಯಲ್ಲಿ ಸೃಜನಾತ್ಮಕ ಕಲೆ ಸಿದ್ಧಿಸಲು ಇದು ಉಪಯುಕ್ತವಾಗುತ್ತದೆ ಎಂದರಲ್ಲದೇ ಮುಂದಿನ ದಿನಗಳಲ್ಲಿ ಮಕ್ಕಳ ಓದಿಗೆ ಇನ್ನೂ ಆಸಕ್ತಿದಾಯಕ ಯೋಜನೆಗಳನ್ನು ಅಳವಡಿಸುವ ಭರವಸೆ ನೀಡಿದರು.

RELATED ARTICLES  ಇಂದಿನ(ದಿ-26/03/2019) ಉತ್ತರಕನ್ನಡ ಜಿಲ್ಲೆಯ ಪ್ರಮುಖ ತಾಲೂಕುಗಳ ಅಡಿಕೆ ಧಾರಣೆ

ಕಲಿಕಾ ಸಂಚಿಗಳನ್ನು ಸ್ವೀಕರಿಸಿದ ಮುಖ್ಯಾಧ್ಯಾಪಕ ಎನ್.ಆರ್.ಗಜು ಬೌದ್ಧಿಕ ವಿಕಸನಕ್ಕೆ ಸಹಕಾರಿಯಾಗುವ ಪಠ್ಯ ಸಂಬಂಧಿ ಡಿಜಿಟಲ್ ಸಿಡಿ, ಕಂಪ್ಯೂಟರ್ ಮತ್ತು ಬೋಧನಾ ಸಲಕರಣೆಗಳು ಶಿಕ್ಷಕ ಮತ್ತು ವಿದ್ಯಾರ್ಥಿಗಳಿಗೆ ತುಂಬಾ ಸಹಕಾರಿಯಾಗಬಲ್ಲವು ಎಂದು ಅಭಿಪ್ರಾಯಪಟ್ಟರು. ಶಿಕ್ಷಕರಾದ ಕಿರಣ ಪ್ರಭು ಹಾಗೂ ಸ್ವಾತಿ ನಾಯ್ಕ ಅನುಷ್ಠಾನದ ಮುಮ್ಮೊದಲ ಮಾಹಿತಿ ಪಡೆದರು. ವಿ.ಎನ್.ಭಟ್ಟ, ಬಿ.ಪವಿತ್ರಾ ಮೊದಲಾದವರು ಉಪಸ್ಥಿತರಿದ್ದರು.

RELATED ARTICLES  3 ವರ್ಷದ ಮಗುವಿನೊಂದಿಗೆ ಮಹಿಳೆ ನಾಪತ್ತೆ…!