ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ನಾಳೆ ಒಟ್ಟು 44,500 ಕೋವಿಡ್ ಲಸಿಕೆ ಲಭ್ಯವಿದೆ. 41,800 ಕೋವಿಶೀಲ್ಡ್ ಮತ್ತು 2,700 ಕೋವ್ಯಾಕ್ಸಿನ್ ಲಭ್ಯವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಂಕೋಲಾದಲ್ಲಿ 4 ಸಾವಿರ, ಭಟ್ಕಳ 4 ಸಾವಿರ, ಹೊನ್ನಾವರ 5 ಸಾವಿರ, ಕಾರವಾರ 2 ಸಾವಿರ, ಮುಂಡಗೋಡ 2 ಸಾವಿರ, ಕುಮಟಾ 5 ಸಾವಿರ, ಶಿರಸಿ 5 ಸಾವಿರ, ಸಿದ್ದಾಪುರ 4 ಸಾವಿರ, ಯಲ್ಲಾಪುರ 2 ಸಾವಿರ, ದಾಂಡೇಲಿ 1 ಸಾವಿರ, ಮತ್ತು ಜಿಲ್ಲಾಸ್ಪತ್ರೆಯಲ್ಲಿ 800 ಹಳಿಯಾಳದಲ್ಲಿ 500, ಹೊನ್ನಾವರ 300, ಕುಮಟಾ 300, ಶಿರಸಿ 1 ಸಾವಿರ, ದಾಂಡೇಲಿ 200, ಜಿಲ್ಲಾಸ್ಪತ್ರೆಯಲ್ಲಿ 400 ಕೋವಿಶೀಲ್ಡ್ ಲಸಿಕೆ ಲಭ್ಯವಿದೆ.
ಹಳಿಯಾಳ 500, ಹೊನ್ನಾವರ 300, ಕುಮಟಾ 300, ಶಿರಸಿ 1000, ಜಿಲ್ಲಾಸ್ಪತ್ರೆಯಲ್ಲಿ 400 ದಾಂಡೇಲಿ 200 ಕೋವ್ಯಾಕ್ಸೀನ್ ಲಸಿಕೆ ಲಭ್ಯವಿದೆ.
ಕುಮಟಾದಲ್ಲಿ ಎಲ್ಲಿ?
ಅಂಕೋಲಾದಲ್ಲಿ ಎಲ್ಲಿ?
ಸೋಮವಾರ ಅಂಕೋಲಾದಲ್ಲಿ ಒಟ್ಟೂ 4000 ಡೋಸ್ ಕೋವಿಡ್ ಲಸಿಕೆಗಳ ವಿತರಣೆಗೆ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದ್ದು. ಮಹಾ ಲಸಿಕಾ ಮೇಳಕ್ಕೆ ಸಿದ್ಧತೆ ನಡೆಸಿದೆ.
ಶೇಡಿಕುಳಿ (3 20), ಹಿ.ಪ್ರಾ (ಉರ್ದು)ಶಾಲೆ ಹುಲಿದೇವರ ವಾಡಾ (320), ಬೆಲೇಕೇರಿ (300), ಹಿ.ಪ್ರಾ.ಶಾಲೆ ತಾಳೇಬೈಲ್(500), ಕಿ..ಪ್ರಾ.ಶಾಲೆ ಹೊಸಗದ್ದೆ (400), ಪ್ರಾ. ಆ ಕೇಂದ್ರ ಹಿಲ್ಲೂರು (200), ಉಪಕೇಂದ್ರ ಅಗಸೂರು (360), ಕೋಡ್ಸಣಿ (360), ಗ್ರಾಪಂ ಅವರ್ಸಾ ( 500), ತಾಲೂಕಾ ಆಸ್ಪತ್ರೆ ಅಂಕೋಲಾ (300), ಡಾ. ಕಮಲಾ ಮತ್ತು ಆರ್. ಎನ್. ನಾಯಕ ಆಸ್ಪತ್ರೆ (200), ಆರ್ಯ ಮೆಡಿಕಲ್ ಸೆಂಟರ್ (300) ಡೋಸ್ ಕೋವಿಶೀಲ್ಡ ಲಸಿಕೆಗಳನ್ನು ಹಂಚಿಕೆ ಮಾಡಲಾಗುತ್ತಿದೆ..
ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಿಮ್ಮ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.