ಕುಮಟಾ :  ಕೊಂಕಣ ಎಜ್ಯಕೇಶನ ಟ್ರಸ್ಟನ ಸಭಾಂಗಣದಲ್ಲಿ ಇಂದು ಬಿ ಕೆ ಭಂಡಾರಕರ ಸರಸ್ವತಿ ಪದವಿಪೂರ್ವ ಕಾಲೇಜಿನ ವಿಧಾತ್ರಿ ಅಕಾಡೆಮಿಯ ವತಿಯಿಂದ ಶಿಕ್ಷಕ ದಿನಾಚರಣೆ ಹಾಗೂ ಪಾಲಕ ವಿದ್ಯಾರ್ಥಿ ಹಾಗೂ ಉಪನ್ಯಾಸಕರ ಪರಸ್ಪರ ಪರಿಚಯ ಕಾರ್ಯಕ್ರಮ ನೆರವೇರಿತು. ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ದೀಪಬೆಳಗಿ ಪುಷ್ಪಾರ್ಚನೆಯನ್ನು ಗೈದು

ಕಾರ್ಯಕ್ರಮದ ಉದ್ಘಾಟನೆಯನ್ನು ಡಯಟ್ ನ ಉಪನಿರ್ದೇಶಕರಾದ ಶ್ರೀ ಈಶ್ವರ ನಾಯ್ಕರವರು ನೆರವೇರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಉತ್ತರಕನ್ನಡ ಜಿಲ್ಲೆಯ ಪ್ರತಿಭೆಗಳಿಗೆ ಮನೆಯಂಗಳದಲ್ಲೇ ಉತ್ತಮ ಶಿಕ್ಷಣ ನೀಡುವಲ್ಲಿ ಕೊಂಕಣ ಎಜ್ಯುಕೇಷನ ಟ್ರಸ್ಟ್ ಹಾಗೂ ವಿಧಾತ್ರಿಅಕಾಡೆಮಿಯ ಕೊಡುಗೆ ಶ್ಲಾಘನಿಯ ಅಂದರು ದೇಶದ ಭವಿಷ್ಯ ತರಗತಿಯೊಳಗೆ ನಿರ್ಧರಿತ ವಾದರೆ ವಿಶ್ವದ ಭವಿಷ್ಯ ಇಂದು ಭಾರತದೊಳಗೆ ನಿರ್ಮಾಣ ಆಗುತ್ತಿದೆ.ವಿಶ್ವದಾದ್ಯಂತ ಭಾರತ ಪ್ರತಿಭೆಗಳು ಬೆಳಗುತ್ತಿದೆ ಎಂದು ಅಭಿಮಾನ ವ್ಯಕ್ತಪಡಿಸಿದರು.

RELATED ARTICLES  ಇಂದಿನ ದಿನ ನಿಮ್ಮ ಪಾಲಿಗೆ ಹೇಗಿದೆ ಗೊತ್ತಾ? ದಿನಾಂಕ 14-01-2019 ರ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ.

ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕರಾದ ವಿನೋದ ಕುಮಾರ್ ಅವರು ಮಾತನಾಡಿ ಯಶಸ್ವಿನ ಗುಟ್ಟೆಂದರೆ ಸತತ ಪರಿಶ್ರಮ ಶಿಸ್ತು ಸಮಯಪಾಲನೆ ಹಾಗೂ ಬದ್ಧತೆಯಾಗಿದೆ.ಯಾವರೀತಿ ವ್ಯವಸ್ಥಿತ ಹಳಿಗಳ ಜೋಡಣೆಯು ರೈಲಿನ ಸಗಮಸಂಚಾರಕ್ಕೆ ಕಾರಣ ಆಗುತ್ತದೆಯೋ ರಸ್ತೆಯ ನಿಯಮಾವಳಿಗಳನ್ನು ಪಾಲಿಸದೇ ಬೇಕಾಬಿಟ್ಟಿ ವಾಹನ ಚಲಾಯಿಸಿದರೆ ಸಂಚಾರದಲ್ಲಿ ಅಡಚಣೆ ಆಗುತ್ತದೆಯೋ ನಿರ್ದಿಷ್ಟ ಯೋಜನೆ ಇದ್ದರೆ ವಿದ್ಯಾರ್ಥಿಗಳು ಸಾಧನೆ ಮಾಡಬಹುದು ಇಲ್ಲದಿದ್ದರೆ ಯಶಸ್ಸು ಕೈಗೆಟುಕದು ಎಂದರು.ಕಲಿಕೆ ಎಂದರೆ ಕೇವಲ ಪುಸ್ತಕದ ಜ್ಞಾನ ಅಷ್ಟೇ ಅಲ್ಲ ಪಠ್ಯೇತರ ವಿಷಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಕಲಿಕೆಯೇ ಅದಿಲ್ಲದಿದ್ದರೆ ಪರಿಪೂರ್ಣತೆ ದೊರೆಯದು ಅನುಭವ ಎನ್ನುವ ಜ್ಞಾನ ಬಹಳ ದೊಡ್ಡದು ಆ ಬಗ್ಗೆಯೂ ಗಮನ ಇರಬೇಕು ವಿಧಾತ್ರಿ ಅಕಾಡೆಮಿಯ ಪಠ್ಯವಿಷಯದ ಜೊತೆ ಪಠ್ಯೇತರ ಚಟುವಟಿಕೆ ಹಾಗೂ ಜೀವನ ಮೌಲ್ಯಗಳನ್ನು ಬೋಧಿಸುವಲ್ಲಿ ಸಮನ್ವಯ ಕಾಯ್ದುಕೊಳ್ಳಲಿದೆ ಎಂದರು.ಪ್ರಾಚಾರ್ಯ ಮಹೇಶ ಉಪ್ಪೀನ ಅವರು ವಾರ್ಷಿಕ ಯೋಜನೆಯೊಂದಿನ ಕಲಿಕೆಯ ಪಕ್ಷಿನೋಟವನ್ನು ಸವಿವರವಾಗಿ ಪಾಲಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು.

RELATED ARTICLES  ರಾಜ್ಯದಲ್ಲಿ ಒಂದೇ ಸಂಘದಡಿಯಲ್ಲಿ ಒಂದಾದ ಸರ್ಕಾರಿ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರು.

ವಿಧಾತ್ರಿಅಕಾಡೆಮಿಯ ಗುರುರಾಜ ಶೆಟ್ಟಿಯವರು ಶಿಕ್ಷಕದಿನಾಚರಣೆಯ ಅಂಗವಾಗಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಪಾಲಕ ವರ್ಗದವರನ್ನು ಸನ್ಮಾನಿಸಿ ಕಾಲೇಜಿನ ಎಲ್ಲ ಬೋಧಕವೃಂದವನ್ನು ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರನ್ನು ಸಭೆಗೆ ಪರಿಚಯಿಸಿದರು.ಉಪನ್ಯಾಸಕರಾದ ಪದ್ಮನಾಭ ಅವರು ಸ್ವಾಗತಿಸಿದರೆ ಪ್ರಸನ್ನ ಶೆಟ್ಟಿ ವಂದನಾರ್ಪಣೆ ಗೈದರು ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಉಪನ್ಯಾಸಕ ಪ್ರಸನ್ನ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. zn