ಶಿರಸಿ: ಸ್ವ ಉದ್ಯೋಗ ತರಬೇತಿಗೆಂದು ಆಗಮಿಸಿ ವಸತಿನಿಲಯದಲ್ಲಿ ಉಳಿದುಕೊಂಡಿದ್ದ ಯುವತಿಯೊಬ್ಬಳು ನಾಪತ್ತೆಯಾದ ಘಟನೆ ವರದಿಯಾಗಿದೆ. ಈಕೆ ತಾಲೂಕಿನ ಕಸ್ತೂರಿ ಬಾ ನಗರದ ನಿವಾಸಿ ಎಂದು ತಿಳಿದು ಬಂದಿದೆ.

ವಸತಿ ನಿಲಯದಲ್ಲಿ ಇದ್ದ 19 ವರ್ಷದ ಆಯುಶಾ ಭಾನು ಎಂಬ ಯುವತಿ ಹೇಳದೆ ಕೇಳದೆ ವಸತಿ ನಿಲಯದಿಂದ ನಾಪತ್ತೆಯಾಗಿದ್ದು, ಈ ಸಂಬಂಧ ಶಿರಸಿ ಹೊರ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಸಂತ್ರಸ್ತ ಮಕ್ಕಳಿಗೆ ಉಚಿತ ಶಿಕ್ಷಣ: ಶ್ರೀರಾಮಚಂದ್ರಾಪುರ ಮಠ ಕೊಡುಗೆ

ಸ್ವಯ ಉದ್ಯೋಗ ತರಬೇತಿಗೆ ಆಗಮಿಸುತ್ತಿದ್ದ ಯುವತಿ ಅಲ್ಲಿನ ವಸತಿ ನಿಲಯದಲ್ಲಿ ಇದ್ದಳು. ಆದರೆ, ಅನಾರೋಗ್ಯದಿಂದಾಗಿ ವಸತಿ ನಿಲಯದಲ್ಲೇ ಇದ್ದು, ತರಬೇತಿಗೆ ಆಗಮಿಸಿರಲಿಲ್ಲ.

ಈ ವೇಳೆ ಇದ್ದಕ್ಕಿದ್ದಂತೆ ಯಾರಿಗೂ ಹೇಳದೆ ಕೇಳದೆ, ವಸತಿ ನಿಲಯದಿಂದ ಕಾಣೆಯಾಗಿದ್ದಾಳೆ. ಹೊರಗಡೆ ಹೋಗಿಬರುತ್ತೇನೆಂದು ಹೇಳಿ ಹೋದವಳು ಮನೆಗೂ ಹೋಗಿಲ್ಲ. ವಸತಿ ನಿಲಯದಕ್ಕೂ ಆಗಮಿಸಿಲ್ಲ ಎಂದು ವಸತಿ ನಿಲಯದ ಮುಖ್ಯಸ್ಥರು ದೂರು ದಾಖಲಿಸಿದ್ದಾಳೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಆಕೆಯ ಸುಳಿವು ಕಂಡು ಹಿಡಿಯುವ ನಿಟ್ಟಿನಲ್ಲಿ ತನಿಖೆ ಮುಂದುವರಿಸಿದ್ದಾರೆ.

RELATED ARTICLES  ಈ ಮಾರುಕಟ್ಟೆಯಲ್ಲಿ ಪುರಷರು ವ್ಯಾಪಾರ ನಡೆಸೋಂಗಿಲ್ಲ!