ಶಿರಸಿ: ನಗರದ ಶ್ರೀರಾಮ ಕಾಲೋನಿಯ ರಸ್ತೆಯಲ್ಲಿ ಸೊರಬದಿಂದ ಶಿರಸಿಗೆ ಅಕ್ರಮವಾಗಿ ಗಾಂಜಾವನ್ನು ಸಾಗಿಸುತ್ತಿದ್ದವರ ಬಂಧನ ಮಾಡಲಾಗಿದೆ.

ಸೊರಬ ಮೂಲದ ಮಂಜುನಾಥ ನಾಯ್ಕ (31) ವೀರಭದ್ರಪ್ಪ (42) ಆರೋಪಿಗಳಾಗಿದ್ದು ಬಂಧಿತರಿಂದ ಒಟ್ಟು 1 ಕೆಜಿ 910 ಗ್ರಾಮ್ ತೂಕದ ಅಂದಾಜು ₹25000 ಮೌಲ್ಯದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.ಆರೋಪಿತರ ವಿರುದ್ಧ ಸಿರ್ಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

RELATED ARTICLES  ಮೇ 10 ರಿಂದ ಕರ್ನಾಟಕದಲ್ಲಿ ಲಾಕ್ ಡೌನ್ : ಸಿ.ಎಂ‌ ಘೋಷಣೆ

1 ನೆ ಆರೋಪಿಯಾದ ಮಂಜುನಾಥನ ವಿರುದ್ಧ ಈ ಹಿಂದೆ ಸುಲಿಗೆ ಪ್ರಕರಣವು ಬನವಾಸಿ ಠಾಣೆಯಲ್ಲಿ ದಾಖಲಾಗಿತ್ತು.
ಈ ಕಾರ್ಯಾಚರಣೆಯಲ್ಲಿ ಮಾನ್ಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಬದರಿನಾಥ್ ಎಸ್, ಶ್ರೀ ರವಿ ಡಿ ನಾಯ್ಕ್, ಡಿ.ಎಸ್.ಪಿ ಶಿರಸಿ ಉಪವಿಭಾಗ ರವರ ಮಾರ್ಗದರ್ಶನದಲ್ಲಿ, ಸಿಪಿಐ ರಾಮಚಂದ್ರ ನಾಯಕ, ಪಿಎಸ್ಐ ರಾಜಕುಮಾರ ಎಸ್ ಉಕ್ಕಲಿ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎಎಸ್ಐ ವಿ. ಜಿ. ರಾಜೇಶ್, ಗಣಪತಿ ಪಟಗಾರ, ಶಿವು ಉಮ್ಮಚಗಿ, ಪ್ರವೀಣ್ ಯೆನ್, ಕೋಟೇಶ್ ನಾಗರವಳ್ಳಿ, ಅರುಣ ಲಮಾಣಿ, ರಾಜು ಸಾಲಗಾವಿ, ಪಕೀರ ವನ್ನೂರ್, ಮೆಹಬುಬ್ ಕಿಲ್ಲದಾರ ರವರು ಪಾಲ್ಗೊಂಡಿರುತ್ತಾರೆ.

RELATED ARTICLES  ಉತ್ತರ ಕನ್ನಡದ ಜನರ ಕನಸು ನನಸು..?