ಕಾರವಾರ : ಉತ್ತರಕನ್ನಡ ಜಿಲ್ಲಾಡಳಿತದ ಕೊರೋನಾ ಹೆಲ್ತ ಬುಲೆಟಿನ್ ನ ಪ್ರಕಾರ ಇಂದು 24 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿರುವುದಾಗಿ ವರದಿಯಾಗಿದ್ದು ಇಂದು ಕೊರೋನಾದಿಂದಾಗಿ ಸಿದ್ದಾಪುರದಲ್ಲಿ ಒಂದು ಸಾವು ಸಂಭವಿಸಿದೆ. ಕಳೆದ ಅನೇಕ ದಿನಗಳಿಂದ ಉತ್ತರಕನ್ನಡದಲ್ಲಿ ಕೊರೋನಾದಿಂದಾಗಿ ಯಾವುದೇ ಸಾವು ಸಂಭವಿಸಿರಲಿಲ್ಲ. ಇಂದು 1ಸಾವು ಸಂಭವಿಸಿದ್ದು ಸಾವಿನ ಸಂಖ್ಯೆ 763 ಏರಿಕೆಯಾಗಿದೆ.

ಹೆಲ್ತ ಬುಲೆಟಿನ್ ಪ್ರಕಾರ ಕಾರವಾರದಲ್ಲಿ 14, ಅಂಕೋಲಾದಲ್ಲಿ 1, ಕುಮಟಾದಲ್ಲಿ 4, ಹೊನ್ನಾವರ 0, ಭಟ್ಕಳದಲ್ಲಿ 1, ಶಿರಸಿಯಲ್ಲಿ 1, ಸಿದ್ದಾಪುರದಲ್ಲಿ 1, ಯಲ್ಲಾಪುರದಲ್ಲಿ 2, ಮುಂಡಗೋಡ 0, ಹಳಿಯಾಳದಲ್ಲಿ 0, ಮತ್ತು ಜೋಯಿಡಾದಲ್ಲಿ 0 ಒಟ್ಟೂ 24 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

RELATED ARTICLES  ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಪೀಠಾರೋಹಣ ಕಾರ್ಯಕ್ರಮ ನಾಳೆ.

ಜಿಲ್ಲೆಯಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ 288 ಆಗಿದ್ದು, ಅವರಲ್ಲಿ 45 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 243 ಸೋಂಕಿತರು ಹೋಮ್ ಐಸೋಲೇಷನ್‌ನಲ್ಲಿದ್ದಾರೆ.

ಕಾರವಾರ 8, ಅಂಕೋಲಾ‌ 4, ಕುಮಟಾ 4, ಹೊನ್ನಾವರ 5, ಭಟ್ಕಳ 3, ಶಿರಸಿ 5, ಸಿದ್ದಾಪುರ 0, ಯಲ್ಲಾಪುರ 0, ಮುಂಡಗೋಡ 0, ಹಳಿಯಾಳ 0, ಜೋಯ್ಡಾ 0 ಕೊರೋನಾ ಗೆದ್ದಿದ್ದಾರೆ. ಅಂದರೆ ಒಟ್ಟೂ 29 ಜನ ಇಂದು ಕೊರೋನಾ ಗೆದ್ದು ಬಂದವರಾಗಿದ್ದಾರೆ.

RELATED ARTICLES  ಕಿತ್ತಳೆ ಬಣ್ಣದ ಪಾಸ್ ಪೋರ್ಟ್: ನಿರ್ಧಾರದಿಂದ ಹಿಂದೆ ಸರಿದ ಕೇಂದ್ರ ಸರ್ಕಾರ

ಕೊರೋನಾ ಹೆಲ್ತ್ ಬುಲೆಟಿನ್ ಪ್ರಕಾರ ಇಂದು ಉತ್ತರಕನ್ನಡದ ಜಿಲ್ಲೆಯ ತಾಲೂಕುಗಳಲ್ಲಿ ಕಾರವಾರದಲ್ಲಿ ಹೆಚ್ಚು ಪಾಸಿಟಿವ್ ಪ್ರಕರಣ ವರದಿಯಾದರೆ, ಕಾರವಾರದಲ್ಲಿಯೇ ಹೆಚ್ಚು ಜನ ಕೊರೋನಾ ಗೆದ್ದು ಬಂದಿದ್ದಾರೆ.

ಇದು ನಮ್ಮ ಕಳಕಳಿ…
ಕೊರೋನಾ ಬಗ್ಗೆ ಜನತೆ ಸಾಕಷ್ಟು ಮುಂಜಾಗ್ರತಾ ಕ್ರಮ‌ಕೈಗೊಳ್ಳುವ ಅಗತ್ಯತೆ ಇದ್ದು, ಮಾಸ್ಕ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ನಾವೂ ನಿಮ್ಮಲ್ಲಿ ವಿನಂತಿಸುತ್ತೇವೆ.