ಕುಮಟಾ : ಕೋವಿಡ್ ಕಾರಣಕ್ಕಾಗಿ ಶಾಲಾ ಭೌತಿಕ ತರಗತಿಯಿಂದ ಹೊರಗಿದ್ದ ೬ ಮತ್ತು ೭ ನೇ ತರಗತಿಯ ವಿದ್ಯಾರ್ಥಿನಿಯರನ್ನು ಶಾಲಾ ಪ್ರಾರಂಭದ ದಿನದಂದು ಬಹಳ ಸಡಗರ ಸಂಭ್ರಮದಿAದ ಸ್ವಾಗತಿಸಿದು,್ದ ವಿದ್ಯಾರ್ಥಿನಿಯರ ಹಾಗೂ ಶಿಕ್ಷಣದ ಬಗ್ಗೆ ಶಿಕ್ಷಕರು ಹೊಂದಿರುವ ಕಾಳಜಿಯನ್ನು ತೋರಿಸುತ್ತದೆ ಎಂದು ಕುಮಟಾ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಆರ್. ಎಲ್.ಭಟ್ ಹೇಳಿದರು.
ಅವರು ಹೆಗಡೆಯ ಹೆಣ್ಣುಮಕ್ಕಳ ಶಾಲೆಯ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ ಹೆಣ್ಣುಮಕ್ಕಳ ಶಾಲೆಯ ಶಿಕ್ಷಕರು ಯಾವುದೇ ಕಾರ್ಯಕ್ರಮವಿದ್ದರೂ ಅದನ್ನು ವೈವಿದ್ಯಮಯವಾಗಿ ಸಂಘಟಿಸುವುದರ ಮೂಲಕ ತಾಲೂಕು ಅಷ್ಟೇ ಅಲ್ಲದೇ ಜಿಲ್ಲೆಯಲ್ಲೇ ಗುರುತಿಸಿಕೊಂಡಿದ್ದಾರೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಪ್ರತಿಭಾಕಾರಂಜಿ, ಕ್ರೀಡೆ, ರಸಪ್ರಶ್ನೆಯಲ್ಲಿ ರಾಜ್ಯಮಟ್ಟಕ್ಕೆ ಕೊಂಡುಯ್ಯುವ ತಂಡವನ್ನು ಸಿದ್ದಪಡಿಸುತ್ತಾರೆ. ಇನ್‌ಸ್ಪಾಯರ್ ಅವಾರ್ಡನ ರಾಷ್ಟçÀಮಟ್ಟದ ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿನಿ ಪ್ರತಿನಿಧಿಸುವುದರ ಮೂಲಕ ಇಲಾಖೆಗೆ ಗಮನ ಸೆಳೆದಿದ್ದಾಳೆ. ಮಕ್ಕಳನ್ನು ಬರಮಾಡಿಕೊಳ್ಳುವಾಗ ಪ್ರತಿವಿದ್ಯಾರ್ಥಿಗಳಿಗೆ ನೀಡಿದ ಪೆನ್ನು, ವಿದ್ಯಾಧಿದೇವತೆ ಸರಸ್ವತಿಯ ಪ್ರತೀಕ, ಗುಡ್ ಡೇ ಬಿಸ್ಕತ್ ಪ್ಯಾಕೇಟ್ ಇಷ್ಟುದಿನ ಕೋವಿಡ್ ನಿಂದ ಭಯದ ವಾತಾವರಣದಲ್ಲಿದ್ದ ಮಕ್ಕಳಿಗೆ ಇನ್ನುಮುಂದೆ ಪ್ರತಿದಿನ ಒಳ್ಳೆಯ
ದಿನಗಳಾಗಿರುತ್ತವೆ ಎಂಬುದರ ದ್ಯೋತಕ, ಚಾಕಲೇಟ್ ಶಾಲೆಯ ವಾತಾವರಣ ಕೋವಿಡ್ ಮುಕ್ತವಾಗಿ ಆಹ್ಲಾದಕರವಾಗಿರುತ್ತವೆ ಎಂಬುದರ ಸಂಕೇತವಾಗಿದೆ ಎಂದು ಅಭಿಪ್ರಾಯ ಪಡುತ್ತಾ ಕಾರ್ಯಕ್ರಮ ಸಂಘಟಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ.ಸಿ ಅಧ್ಯಕ್ಷ ವೆಂಕಟೇಶ ಮಾರಿ ನಾಯ್ಕ ನಮ್ಮ ಶಾಲೆಯ ಶಿಕ್ಷಕರ ನಿಸ್ವಾರ್ಥತತೆಯಿಂದ ಕಲಿಕಾ ಚಟುವಟಿಕೆ ಹಾಗೂ ಇಲಾಖೆಯ ಇನ್ನಿತರ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವಿಕೆಯ ಸಂಪೂರ್ಣತೆ ಶಾಲೆಯ ಯಶಸ್ಸಿಗೆ ಸಂದ ಗೌರವ. ಇಂತಹ ಶಿಕ್ಷಕರನ್ನು ಹೊಂದಿರುವ ಶಾಲೆ ಎನ್ನುವುದಕ್ಕೆ ಅತೀವ ಹೆಮ್ಮೆ ಎನಿಸುತ್ತದೆ ಎಂದು ಅಭಿಪ್ರಾಯ ಪಟ್ಟರು.
ಪ್ರಭಾರೆ ಮುಖ್ಯಶಿಕ್ಷಕಿ ಮಂಗಲಾ ಹೆಬ್ಬಾರ ಪ್ರಾಸ್ತಾವಿಕ ನುಡಿಯಲ್ಲಿ ಕೋವಿಡ್ ನಿಂದ ಮಕ್ಕಳಿಗೆ ಶಾಲೆ ಪ್ರಾರಂಭವಾಗದೇ ಇದ್ದಾಗ ಶೈಕ್ಷಣಿಕ ವರ್ಷದ ಆರಂಭದ ದಿನದಿಂದಲೇ ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆ ಯಾಗಬಾರದೆಂದು ಆನ್ ಲೈನ್ ತರಗತಿಗಳನ್ನು ಪ್ರಾರಂಭಿಸಿ ಬೋಧನೆಯಲ್ಲಿ ತೊಡಗಿಕೊಂಡಿದ್ದೇವೆ. ಇದರ ಬಗ್ಗೆ ಸಂತೃಪ್ತಿ ಇದೆಯದರೂ ಭೌತಿಕವಾಗಿ ಮಕ್ಕಳು ಹಾಜರು ಇಲ್ಲದೇ ಇರುವುದರಿಂದ ಶಾಲೆ ಅದೊಂದು ಕಟ್ಟಡವಾಗಷ್ಟೇ ಕಾಣುತಿತ್ತು. ಇಂದು ಮಕ್ಕಳ ಕಲರವ ಕೇಳಿ ನಮಗೆ, ನಾವು ಮತ್ತೆ ನಿಜವಾದ ಶಿಕ್ಷಕ ವೃತ್ತಿಗೆ ತೊಡಗಿಕೊಳ್ಳುತ್ತಿದ್ದೇವೆ ಎನ್ನುವ ಸಂಭ್ರಮ ಕಾಣುತ್ತಿದೆ. ಆದಷ್ಟು ಬೇಗ ೧ ರಿಂದ ೫ ನೇ ತರಗತಿ ಮಕ್ಕಳೂ ಸಹ ಶಾಲೆಗೆ ಬರುವಂತಾಗಲಿ ಎಂದು ಆಶಿಸಿದರು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಇಲಾಖೆಯಿಂದ ಸರಬರಾಜಾದ ಹೊಸ ಪುಸ್ತಕಗಳನ್ನು ವಿತರಿಸಿದರು.
ಇದಕ್ಕೂ ಮೊದಲು ಶಾಲೆಯ ಹೊರಾಂಗಣಕ್ಕೆ ತಳಿರು ತೋರಣ, ಬಲೂನಿನ ಕಮಾನು, ಸ್ವಾಗತದ ಫಲಕಗಳೊಂದಿಗೆ ಸಿಂಗರಿಸಿದ್ದರು. ಆಗಮಿಸಿದ ಪ್ರತಿವಿದ್ಯಾರ್ಥಿಗಳಿಗೆ ಪೆನ್ನು, ಬಿಸ್ಕತ್ ಪ್ಯಾಕೆಟ, ಚಾಕಲೇಟ್ ನೀಡಿ ಶಾಲೆಗೆ ಸ್ವಾಗತಿಸಿದರು. ಕೋವಿಡ್ ಶಿಷ್ಟಾಚಾರದಂತೆ ಸ್ಯಾನಿಟೈಸರ್, ಥರ್ಮಲ್ ಸ್ಕಿçÃನಿಂಗ್‌ಮಾಡಲಾಯಿತು.
ಶಾಲೆಯಲ್ಲಿ ಪ್ರಾಜೆಕ್ಟರ ಮೂಲಕ ಕಾರ್ಯಕ್ರಮವನ್ನು ಬಿತ್ತರಿಸಿದರು. ವೇದಿಕೆಯಲ್ಲಿ ಶಿಕ್ಷಣ ಸಂಯೋಜಕರಾದ ಪಿ.ಎಂ.ಮುಕ್ರಿ, ಸಿ.ಆರ್.ಪಿ. ನರಹರಿ ಭಟ್ ಉಪಸ್ಥಿತರಿದ್ದರು. ಶಿಕ್ಷಕ ಶ್ರೀಧರ ಗೌಡ ಕಾರ್ಯಕ್ರಮ ನಿರೂಪಿಸಿದರು. ನಾಗರಾಜ ಶೆಟ್ಟಿ ವಂದನಾರ್ಪಣೆ ಸಲ್ಲಿಸಿದರು. ಶಿಕ್ಷಕಿಯರಾದ ಶ್ಯಾಮಲಾ ಪಟಗಾರ, ರೇಣುಕಾ ನಾಯ್ಕ, ನಯನಾ ಪಟಗಾರ ಸಹಕರಿಸಿದರು. ಅಡುಗೆ ಸಿಬ್ಬಂದಿಗಳಾದ ಜಯಂತಿ, ಸೀತಾ, ಕಲಾವತಿ ನೆರವು ನೀಡಿದರು.