ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ; ಆರೋಪಿಯ ಬಂಧನ

ಹೊನ್ನಾವರ: ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಪ್ರಯತ್ನ ನಡೆಸಿದ್ದ ವ್ಯಕ್ತಿಯನ್ನು ಮಂಕಿ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಮಹಿಳೆಯು ಕಾರವಾರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,
ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರೆಸಿದ್ದಾರೆ.

ಹೊನ್ನಾವರ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿರುವಾಗ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ, ಅತ್ಯಾಚಾರಕ್ಕೆ ಯತ್ನಿಸಿ, ಹಲ್ಲೆ ನಡೆಸಿದ್ದಾರೆ ಎಂದು ಮಂಕಿ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದಳು. ಈ ಸಂಬಂಧ ಕಳಸಿನಮೋಟೆಯ ಗಣಪಯ್ಯ ಗೌಡ ಎಂಬುವವನ್ನು ಬಂಧಿಸಲಾಗಿದೆ.

RELATED ARTICLES  ಸಂಸದ ಸಚಿವರ ಕಾರನ್ನು ಕದಲಲೂ ಬಿಡದೆ ದಿಗ್ಬಂಧನ ಹಾಕಿದ ಕಾರ್ಯಕರ್ತರು

ಗೋವಾದಲ್ಲಿ ಮಾದಕವಸ್ತು ಮಾರಾಟ ಕುಮಟಾ ವ್ಯಕ್ತಿ ಬಂಧನ.

ಗೋವಾದಲ್ಲಿ ಮಾದಕವಸ್ತು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಟಾ ಪಟ್ಟಣದ ಹೆರವಟ್ಟಾದ ಯುವಕನನ್ನು ಗೋವಾ ಪೊಲೀಸರು ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಪಟ್ಟಣದ ಹೆರವಟ್ಟಾ ನಿವಾಸಿ ರಜತ್ ನಾಯಕ ಎಂಬಾತನನ್ನು ಗೋವಾದ ಎನ್‌ಸಿಬಿ ಪೊಲೀಸರು ಬಂಧಿಸಿ, ಗೋವಾಕ್ಕೆ ಕರೆದೊಯ್ದಿದ್ದಾರೆ. ಆರು ತಿಂಗಳ ಹಿಂದೆ ಗೋವಾದಲ್ಲಿ ದಾಖಲಾದ ಡ್ರಗ್ಸ್ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾ ಪೊಲೀಸರು ಕೆಲ ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಿದ್ದರು. ವಿಚಾರಣೆ ಸಂದರ್ಭದಲ್ಲಿ ಕುಮಟಾದ ರಜತ್‌ನ ಹೆಸರು ಕೂಡ ಬಂದಿತ್ತು.

RELATED ARTICLES  ಸಾಮಾಜಿಕ ಜಾಲತಾಣಗಳಲ್ಲಿ ಸಾಲುಮರದ ತಿಮ್ಮಕ್ಕನ ಸಾವಿನ ಸುದ್ದಿ ಹಬ್ಬಿಸಿದ್ದ ಆರೋಪಿ ಬಂಧನ

ಇದರಿಂದ ಪೊಲೀಸರು ರಜತ್ ನನ್ನು ಬಂಧಿಸಿದ್ದಾರೆ. ಎರಡು ದಿನಗಳ ಹಿಂದೆಯೇ ಕುಮಟಾಕ್ಕೆ ಆಗಮಿಸಿದ ಗೋವಾದ ಪೊಲೀಸರು ಇಲ್ಲಿನ ಕುಮಟಾ ಪೊಲೀಸರ ಸಹಾಯ ಪಡೆದು ಆರೋಪಿ ರಜತ್ ನಾಯಕನನ್ನು ಬಂಧಿಸಲು ಶೋಧ ಕಾರ್ಯ ನಡೆಸಿ ಆರೋಪಿ ರಜತ್‌ನ್ನು ಬಂಧಿಸಿ, ವಿಚಾರಣೆಗಾಗಿ ಗೋವಾಕ್ಕೆ
ಒಯ್ದಿದ್ದಾರೆ ಎಂದು ವರದಿಯಾಗಿದೆ.