ಹೊನ್ನಾವರ: ತಾಲೂಕಿನ ಹುಕ್ಕೊಳ್ಳಿ ಉಪ್ಪೋಣಿಯ ಗರ್ಭಿಣಿ ಮಹಿಳೆಯೋರ್ವಳು ಪ್ರಸವ ವೇದನೆಯಿಂದ ಆಸ್ಪತ್ರೆಗೆ ತೆರಳಲಾಗದೆ ಮನೆಯಲ್ಲಿಯೇ ಹೆರಿಗೆಯಾಗಲು 108 ಆ್ಯಂಬುಲೆನ್ಸ್ ಸಿಬ್ಬಂದಿ ಸಂಗೀತಾ ಗೌಡ ನೆರವಾಗಿದ್ದಾರೆ.

ಗ್ರಾಮೀಣ ಭಾಗ ಹುಕ್ಕೊಳ್ಳಿಯ ನಿವಾಸಿ ಪ್ರೇಮಾ ( 22 ) ಎನ್ನುವವರು ಸೋಮವಾರ ಅವಧಿ ಪೂರ್ವ ಪ್ರಸವ ವೇದನೆಯಿಂದ ಬಳಲುತ್ತಿದ್ದು, ಕುಟುಂಬಸ್ಥರು ಹೊನ್ನಾವರದ 108 ಅಂಬ್ಯುಲೆನ್ಸ್ ಗೆ ಕರೆ ಮಾಡಿದ್ದಾರೆ. ತಕ್ಷಣ 108 ಸಿಬ್ಬಂದಿಯ ಚಾಲಕ ಅನಂತ ಮತ್ತು ಸ್ಟಾಪ್ ನರ್ಸ್ ಸಂಗೀತ ಗೌಡ ಅವರು ಪ್ರೇಮಾ ಅವರ ಮನೆಗೆ ತೆರಳಿದ್ದಾರೆ. ಅದಾಗಲೇ ಹೆರಿಗೆ ನೋವಿನ ಕೊನೆಯ ಹಂತ ತಲುಪಿದ ಪ್ರೇಮಾರವರನ್ನು ಮನೆಯಲ್ಲೇ ಹೆರಿಗೆ ಮಾಡಿಸುವಲ್ಲಿ ನೆರವಾಗಿದ್ದಾರೆ.

RELATED ARTICLES  ಶಿರಸಿಯಲ್ಲಿ ಮಟಕಾ ಅಡ್ಡೆ ಮೇಲೆ ದಾಳಿ: ವಶವಾಯ್ತು ಸಾವಿರಾರು ರೂಪಾಯಿ

ತಾಯಿ ಮಗು ಆರೋಗ್ಯವಾಗಿದ್ದು ಹೆಚ್ಚಿನ ಆರೈಕೆಯಾಗಿ ತಾಲೂಕು ಆಸ್ಪತ್ರೆ ಹೊನ್ನಾವರಕ್ಕೆ ಕಳುಹಿಸಲಾಗಿದೆ. ಕೋವಿಡ್ ಪರಿಸ್ಥಿತಿಯಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಹಗಲು ರಾತ್ರಿ ಯೆನ್ನದೆ ದಿನದ 24 ಗಂಟೆಯು ಸೇವೆ ನೀಡುತ್ತಿರುವ 108 ಸಿಬ್ಬಂದಿಗಳ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

RELATED ARTICLES  "ಗೋಕರ್ಣ ಗೌರವ" 380 ನೇ ದಿನದ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಶಿವಕುಮಾರಿ ಗಂಗಮ್ಮ ಮಾತಾಜಿ