ಶಿರಸಿ : ಎಂ.ಎಸ್ಸಿ ರಸಾಯನ ವಿಜ್ಞಾನ ವಿಷಯದಲ್ಲಿ ಸಾಧನೆ ಮಾಡಿರುವ ತಾಲೂಕಿನ ಶೀಗೆಹಳ್ಳಿಯ ಚೈತ್ರಾ ನಾರಾಯಣ ಹೆಗಡೆ , 20 ಚಿನ್ನದ ಪದಕ ಹಾಗೂ 4 ದತ್ತಿ ಬಹುಮಾನ ಪಡೆದು ಜಿಲ್ಲೆಗೆ ಮತ್ತು ತಾಲೂಕಿಗೆ ಕೀರ್ತಿ ತಂದಿದ್ದಾಳೆ.

ಜಿಲ್ಲೆ ಮೈಸೂರು ವಿಶ್ವವಿದ್ಯಾಲಯದಲ್ಲಿ MSC ಓದುತ್ತಿರುವ ಚೈತ್ರಾ 101ನೇ ಘಟಿಕೋತ್ಸವದಲ್ಲಿ 20 ಚಿನ್ನದ ಪದಕ ಹಾಗೂ 4 ದತ್ತಿ ಬಹುಮಾನ ಪಡೆಯಲಿದ್ದಾಳೆ. ರಾಜ್ಯಪಾಲ ಥಾವರಚಂದ್ ಗೆಲ್ಲೋಟ್ ಈ ಪದಕ ಪ್ರದಾನ ಮಾಡಲಿದ್ದಾರೆ.

ಸದ್ಯ ಯುವರಾಜ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿರುವ ಚೈತ್ರಾ ಮೆಡಿಸಿನ್ ಕೆಮಿಸ್ಟ್ರಿಯಲ್ಲಿ ಸಂಶೋಧನೆ ಮಾಡುವ ಆಸಕ್ತಿ ಎಂದು ಚೈತ್ರಾ ಹೇಳಿದ್ದಾರೆ.

RELATED ARTICLES  ವಾಟ್ಸ್‌ಆಪ್ ಸ್ಟೇಟಸ್ ತೆರೆದರೆ ಇನ್ಮುಂದೆ ಕಾಣಿಸಲಿದೆಯೇ ಜಾಹಿರಾತು??? ಯೂ ಟರ್ನ ಹೊಡೆಯುತ್ತಿದೆ ವಾಟ್ಸ್‌ಆಪ್ !

ಅತಿ ಹೆಚ್ಚು ಚಿನ್ನದ ಪದಕ ಪಡೆಯುವ ಶ್ರೇಯ
ನನ್ನದಾಗಿದ್ದು, ಇದಕ್ಕೆ ಅಪ್ಪನಾರಾಯಣ ಹೆಗಡೆ ಹಾಗೂ ಅಮ್ಮ ಸುಮಂಗಳಾ ಹೆಗಡೆ ಕಾರಣವಾಗಿದ್ದು, ಈ ಎಲ್ಲ ಪದಕಗಳು ಅವರಿಗೆ ಸಮರ್ಪಿತ್ತೇನೆ ಎಂದಿದ್ದಾಳೆ.

‘ಪಿಜಿಯಲ್ಲಿ ಇದ್ದುಕೊಂಡೇ ಓದಿದೆ. ಹೆಚ್ಚು ಪದಕಗಳನ್ನು ಪಡೆಯಬೇಕೆಂಬ ಮಹದಾಸೆಯೂ ಇತ್ತು. ಆದರೆ, ಇಪ್ಪತ್ತು ಪದಕಗಳನ್ನು ಗಳಿಸುವೆ ಎಂದುಕೊಂಡಿರಲಿಲ್ಲ. ಈಗ ಅನಿರೀಕ್ಷಿತ ಫಲಿತಾಂಶದಿಂದ ಏಕಕಾಲಕ್ಕೆ ಅಚ್ಚರಿಯೂ ಸಂತೋಷವೂ ಆಗಿದೆ’ ಎಂದರು.

‘ಅಪ್ಪ ನಾರಾಯಣ ಹೆಗಡೆ ಹಾಗೂ ಅಮ್ಮ ಸುಮಂಗಳಾ ಹೆಗಡೆ ಅವರಿಗೆ ಈ ಎಲ್ಲ ಪದಕಗಳು ಸಮರ್ಪಿತ. ಅವರು ಯಾವತ್ತೂ ನನ್ನ ಮೇಲೆ ಒತ್ತಡ ಹಾಕಲಿಲ್ಲ. ಬದಲಾಗಿ ನಾನು ಇಷ್ಟಪಟ್ಟ ವಿಷಯ ಆಯ್ಕೆ ಮಾಡಿಕೊಂಡು ಓದಲು ಅವಕಾಶ ಮಾಡಿಕೊಟ್ಟರು. ಬೋಧಕರಿಗೂ ಧನ್ಯವಾದ ಅರ್ಪಿಸುವೆ’ ಎಂದ ಅವರು ಪಿಯು ಓದುತ್ತಿದ್ದಾಗ ನಮ್ಮೂರಿಗೆ ಬೆಳಿಗ್ಗೆ, ಸಂಜೆ ಮಾತ್ರ ಬಸ್ ಬರುತಿತ್ತು. ಅದು ತಪ್ಪಿದರೆ ಪೋಷಕರೇ ಕರೆದುಕೊಂಡು ಹೋಗಬೇಕಿತ್ತು. ಈಗಲೂ ಈ ಪರಿಸ್ಥಿತಿ ಸುಧಾರಿಸಿಲ್ಲ. ವರ್ಕ್ ಫ್ರಂ ಹೋಂ ಗೆ ಸರಿಯಾಗಿ ನೆಟ್‌ವರ್ಕ್ ಸಿಗುವುದಿಲ್ಲ’ ಎಂದು
ನುಡಿದರು.

RELATED ARTICLES  ನಡು ರಸ್ತೆಯಲ್ಲಿ ಬಸ್ ತಡೆದ ಶಾಸಕ ದಿನಕರ ಶೆಟ್ಟಿ. : ಟೆಂಪೋ ಚಾಲಕರಿಗೆ,ಮಾಲಕರಿಗೆ ಅನ್ಯಾಯವಾಗಲು ಬಿಡಲ್ಲ ಎಂದ ಶಾಸಕ : ಮತ್ತೆ ಅಧಿವೇಶನದಲ್ಲಿ ಪ್ರಶ್ನಿಸುವೆ ಅಂದ್ರು.