ಭಟ್ಕಳ: 2015ರ ಜೂನ್ 18ರಂದು ಮಧ್ಯಾಹ್ನದ ಸಮಯ್ಲ್ಲಿ ಬಂದರ್ ರಸ್ತೆಯಿಂದ ಶಂಶುದ್ದೀನ್ ಸರ್ಕಲ್ ಕಡೆಗೆ ಬರುತ್ತಿದ್ದ ಶಾಲಾ ಟೆಂಪೋ ಚಾಲಕ ಸೈಫುಲ್ಲಾ ಮೊಹಿನುದ್ದೀನ್ ಕೊಜಾಪು ಶಾಬಂದ್ರಿ ಈತನು ಬೈಕ್ ನಿಲ್ಲಿಸಿಕೊಂಡು ಕಾಯುತ್ತಿದ್ದ ವ್ಯಕ್ತಿಯೋರ್ವರಿಗೆ ಡಿಕ್ಕಿ ಹೊಡೆದಿದ್ದ.

ಪರಿಣಾಮವಾಗಿ ಅವರು ಸ್ಥಳದಲ್ಲಿಯೇ ಮೃತ ಪಟ್ಟಿದ್ದರು. ಘಟನೆಯಲ್ಲಿ ಒಂದು ಬೈಕು, ಒಂದು ಆಟೋ ರಿಕ್ಷಾ, ಎರಡು ಮಾರುತಿ ವ್ಯಾನ್, ಒಂದು ಕಾರಿಗೆ ಜಖಂ ಗೊಳಿಸಿದ್ದಲ್ಲದೇ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಹಾನಿಗೊಳಿಸಿ, ದೇವಸ್ಥಾನವೊಂದರ ಕಂಪೌಂಡ್ ಕೂಡಾ ಹಾನಿಯಾಗಿತ್ತು. ಈ ಪ್ರಕರಣವನ್ನು ತನಿಖೆ ನಡೆಸಿದ ಇಲ್ಲಿನ ಪ್ರಧಾನ ಸಿವಿಲ್ ನ್ಯಾಯಾಧೀಶ ಫವಾಜ್ ಪಿ.ಎ. ಅವರು ಆರೋಪಿತನಿಗೆ 8 ತಿಂಗಳು ಸಜೆ ಹಾಗೂ 3500 ರೂಪಾಯಿಗಳ ದಂಢ ವಿಧಿಸಿ ತೀರ್ಪು ನೀಡಿದ್ದಾರೆ.

RELATED ARTICLES  ರೋಟರಿ ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಸತ್ಯ ಜಾವಗಲ್, ದೀಪಕ ಗಾವಂಕರ್ ಮತ್ತು ರಾಜು ಮಾಳಗಿಮನಿ ಆಯ್ಕೆ.

ನಗರ ಠಾಣೆಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ತನಿಖೆಯನ್ನು ನಡೆಸಿದ ನ್ಯಾಯಾಲಯ ಆರೋಪಿತನಿಗೆ ವಿವಿಧ ಸೆಕ್ಷನ್‍ಗಳಡಿಯಲ್ಲಿ ಒಟ್ಟೂ 8 ತಿಂಗಳು ಸಜೆ ಹಾಗೂ ರೂ.3,500-00 ದಂಡ ವಿಧಿಸಿ ತೀರ್ಪು ನೀಡಿದೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ವಿವೇಕ ಆರ್. ನಾಯ್ಕ ಅವರು ವಾದಿಸಿದ್ದರು.

RELATED ARTICLES  ಸಿದ್ದಾಪುರದ ಯೋಧ ಸಂದೀಪ ನಾಯ್ಕ ಸಾವು.