ಶಿರಸಿ : ಚಳಿಯ ಕಾರಣದಿಂದಾಗಿ ಒಲೆಯ ಮುಂದೆ ಕುಳಿತು ಬೆಂಕಿ ಕಾಯಿಸುತ್ತಿದ್ದ ವ್ಯಕ್ತಿಯೋರ್ವನ ಮೈಗೆ ಬೆಂಕಿ ಹೊತ್ತಿಕೊಂಡು ಅವಘಡ ಸಂಭವಿಸಿದ ಘಟನೆ ವರದಿಯಾಗಿದೆ.

ಮಳೆಯ ಹಿನ್ನೆಲೆಯಲ್ಲಿ ಚಳಿ ಹೆಚ್ಚಿದ್ದು, ಚಳಿಯಿಂದ ತಪ್ಪಿಸಿಕೊಳ್ಳಲು ಶಾಖದ ಮೊರೆ ಹೋದ ವ್ಯಕ್ತಿ ಒಲೆಯಲ್ಲಿ ಬೆಂಕಿ ಕಾವು ಪಡೆಯುವ ಸಂದರ್ಭದಲ್ಲಿ ಒಲೆಯಲ್ಲಿ ಆಕಸ್ಮಿಕವಾಗಿ ಬಿದ್ದು ಗಾಯಗೊಂಡ ಘಟನೆ ಇಂದು ತಾಲೂಕಿನ ಹಿರೇಕಳವೆಯಲ್ಲಿ ನಡೆದಿದೆ.

RELATED ARTICLES  ಬೈಕ್ ,ಬುಲೆರೊ ಡಿಕ್ಕಿ ಬೈಕ್ ಸವಾರ ಸಾವು

ಬೆಂಕಿಯಲ್ಲಿ ಬಿದ್ದು ಗಾಯಗೊಂಡವನನ್ನು ಗಣಪತಿ ಗೌಡ ಎಂದು ಗುರುತಿಸಲಾಗಿದೆ. ಈತ ಅಧಿಕ ರಕ್ತದೊತ್ತಡ, ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದು, ಆಗಾಗ ತಲೆ ತಿರುಗಿ ಬೀಳುತ್ತಿದ್ದನೆಂದು ಹೇಳಲಾಗಿದೆ.

ಮಧ್ಯಾಹ್ನದ ಸುಮಾರಿಗೆ ಈತನಿಗೆ ಚಳಿ ಬಂದಿದ್ದರಿಂದ ಅಡುಗೆ ಒಲೆ ಮುಂದೆ ಕುಳಿತು ಚಳಿ ಕಾಯಿಸುತ್ತಿದ್ದ ಸಂದರ್ಭದಲ್ಲಿ ತಲೆ ತಿರುಗಿ ಬಿದ್ದನೆಂದು ಸ್ಥಳೀಯವಾದ ಮಾಹಿತಿ ತಿಳಿದು ಬಂದಿದೆ.

RELATED ARTICLES  ಅರಣ್ಯ ಸಿಬ್ಬಂದಿಗಳ ಮೇಲೆ ಹಲ್ಲೆಗೆ ಯತ್ನ:ಇಬ್ಬರ ಬಂಧನ

ತಕ್ಷಣ ಮನೆಯವರು ಈತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ.