ಕಾರವಾರ : ನಗರದ ಸಂಕ್ರಿವಾಡಾದಲ್ಲಿ ಮನೆಯ ಮಾಲೀಕರು ಪರ ಊರಿಗೆ ತೆರಳಿದ ಸಂದರ್ಭವನ್ನು ಬಳಸಿಕೊಂಡು ಕಳ್ಳರು ತಮ್ಮ ಕೈಚಳಕ ತೋರಿ ಎರಡು ಲಕ್ಷಕ್ಕೂ ಅಧಿಕ ಮೌಲ್ಯದ ಪುರಾತನ ಚಿನ್ನ ಕಳುವು ಮಾಡಿದ ದೋಚಿದ ಘಟನೆ ನಡೆದಿದೆ.

ಇಂದು ಬೆಳಿಗ್ಗೆ ಭಟ್ಕಳದಲ್ಲಿ ಸರಣಿ ಕಳ್ಳತನದ ಪ್ರಕರಣ ವರದಿಯಾಗಿತ್ತು, ಇದರ ಬೆನ್ನಲ್ಲೇ ಉತ್ತರಕನ್ನಡದ ಕಾರವಾರದಲ್ಲಿ ಈ ಕಳ್ಳತನ ವರದಿಯಾಗಿದೆ. ಘಟನೆಯ ಸ್ಥಳಕ್ಕೆ ಪೋಲಿಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ,ಸ್ಥಳಕ್ಕೆ ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ತೆರಳಿ ಮಾಹಿತಿ ಸಂಗ್ರಹಿಸಿದ್ದಾರೆ ಎನ್ನಲಾಗಿದೆ.

RELATED ARTICLES  ನಾಳೆ ಉತ್ತರಕನ್ನಡದಲ್ಲಿ ಅತೀ ಹೆಚ್ಚು ಲಸಿಕೆ ಲಭ್ಯ..!

ಕಳೆದ ಆರು ದಿನಗಳಿಂದ ಮನೆಯ ಮಾಲೀಕರು ಗೋವಾಕ್ಕೆ ತೆರಳಿದ್ದರು. ಇದೇ ಸಂದರ್ಭವನ್ನು ಬಳಸಿಕೊಂಡು ಹೊಂಚುಹಾಕಿದ ಖಧೀಮರು ಮನೆಗೆ ಕಳ್ಳರು ಕನ್ನ ಹಾಕಿದ್ದಾರೆ. 2 ಲಕ್ಷ ರೂಪಾಯಿ ಮೌಲ್ಯದ ಒಟ್ಟು 20 ಗ್ರಾಂ ಗಳ ಹಳೆ ಕಾಲದ ಬಂಗಾರವನ್ನು ಕದ್ದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.

RELATED ARTICLES  ಕೋಲ್ಕತಾದ ವೈದ್ಯಕೀಯ ಕಾಲೇಜಿನಲ್ಲಿ ಭೀಕರ ಅಗ್ನಿ ದುರಂತ: 250 ಮಂದಿ ರಕ್ಷಣೆ.