ಕಾರವಾರ : ಕರ್ನಾಟಕ ಕರಾವಳಿಯಲ್ಲಿ ಅಪರೂಪವಾಗಿ ಕಾಣಸಿಗುವ “ಗ್ರೀನ್ ಸೀ” ಆಮೆಯ ಕಳೇಬರ ಕಾರವಾರದ ರವೀಂದ್ರನಾಥ ಠಾಗೂರ್ ಕಡಲತೀರದಲ್ಲಿ ಪತ್ತೆಯಾಗಿದೆ. ಕೆಲವೇ ದಿನಗಳ ಹಿಂದೆ ಇದೇ ಜಾತಿಯ ಆಮೆಯ ಕಳೇಬರಹವೊಂದು ಕಾರವಾರದ ಕಡಲತೀರದಲ್ಲಿ ಪತ್ತೆಯಾಗಿತ್ತು. ಇದರ ನಂತರ ಪುನಹಾ ಇಂದು ಪತ್ತೆಯಾಗಿದೆ.

ಪತ್ತೆಯಾದ ಆಮೆಯು ಮೀನುಗಾರರ ಬಲೆಗೆ ಸಿಲುಕಿ ಉಸಿರುಗಟ್ಟಿ ಸತ್ತಿರುವ ಸಾಧ್ಯತೆಯನ್ನು ತಜ್ಞರು ಅಭಿಪ್ರಾಯ ಪಟ್ಟಿದ್ದು ಸ್ಥಳಕ್ಕೆ ಕಾರವಾರದ ಅರಣ್ಯಾಧಿಕಾರಿ ವಸಂತ್ ರೆಡ್ಡಿ ,ಕೋಸ್ಟಲ್ & ಮರೈನ್ ಏಕೋ ಸಿಸ್ಟಮ್ ನ ವಲಯದ ಆರ್.ಎಫ್.ಓ ಪ್ರಮೋದ್. DRFO – ಚಂದ್ರಶೇಖರ, ನವೀನ್, ಮಹೇಶ್ ಮತ್ತು ಸಿಬ್ಬಂದಿಗಳು ಹಾಜುರಾಗಿ ಪರಿಶೀಲನೆ ನಡೆಸಿದ್ದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

RELATED ARTICLES  ಪ್ರಯತ್ನ ಹಾಗೂ ಇಚ್ಛಾಶಕ್ತಿ ಬದುಕಿಗೆ ಅಗತ್ಯ : ಸುಬ್ರಾಯ ವಾಳ್ಕೆ

“ಗ್ರೀನ್ ಸೀ” (chelonia mydus) ಎಂದು ಕರೆಯಲ್ಪಡುವ ಈ ಆಮೆಯು ಸಸ್ಯಹಾರಿ ಆಮೆಯಾಗಿದ್ದು ಪೆಸಿಫಿಕ್ ಸಾಗರದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದರ ದೇಹದ ವಿಶೇಷ ರಚನೆಯಿಂದ ಇವುಗಳನ್ನು ಪ್ರತ್ತೇಕವಾಗಿ ಗುರುತಿಸಬಹುದಾಗಿದೆ. ಇದರ ಮುಖವು ಮೊಂಡವಾಗಿದ್ದು ಸಮುದ್ರದಲ್ಲಿ ಬೆಳೆಯುವ ಪಾಚಿ,ಹುಲ್ಲುಗಲನ್ನು ತಿನ್ನಲು ಬೇಕಾದ ವ್ಯವಸ್ಥೆಗೆ ರಚನೆಯಾಗಿದೆ.

RELATED ARTICLES  ‘ಸಮಾಜ ಭೂಷಣ’ ಪ್ರಶಸ್ತಿ ಪುರಸ್ಕ್ರತ ವಸುದೇವ ಪ್ರಭು

ವಯಸ್ಕ ಆಮೆಯು 110 ರಿಂದ 190 ಕೆಜಿ ವರೆಗೂ ತೂಕವಿರುತ್ತದೆ.8 ರಿಂದ 10 ಇಂಚು ಉದ್ದವಾಗಿ ಬೆಳೆಯುತ್ತದೆ.ದೇಹದ ಮೇಲ್ಭಾಗದ ಅಂಗ ರಚನೆಯೂ ವಿಶೇಷವಾಗಿದ್ದು ಸ್ಲೂಪಿನಂತೆ ಇರುತ್ತದೆ. ಎರಡು ವರ್ಷಗಳಿಗೊಮ್ಮೆ ಮಾತ್ರ ಗೂಡುಕಟ್ಟಿ ಮೊಟ್ಟೆಯಿಡುತ್ತವೆ. ಇವುಗಳ ಸಂತತಿ ಇದೀಗ ಅಳವಿನಂಚಿನಲ್ಲಿದೆ.