ಕಾರವಾರ : ತನ್ನ ಲಾಭಕ್ಕಾಗಿ ಮಟ್ಕಾ ಆಡಿಸುತ್ತಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ ಘಟನೆ ಕಾರವಾರ ತಾಲೂಕಿನ ಹಲವೆಡೆ ವರದಿಯಾಗಿದೆ.

ಕದ್ರಾದ ರಾಜೀವನಗರದಲ್ಲಿ ನಡೆದಿದೆ. ಕಾರವಾರ ತಾಲೂಕಿನ ಕದ್ರಾ ರಾಜೀವನಗರದ 63 ವರ್ಷದ ತಂಗರಾಜ ಗೌಡರ ಎಂಬಾತನೇ ಆರೋಪಿಯಾಗಿದ್ದಾನೆ. ಈತನು ಕದ್ರಾ ರಾಜೀವನಗರದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ನಿಂತು 01- ರೂ.ಗೆ 80 ರೂ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣವನ್ನು ಪಡೆದು ಆ ಹಣವನ್ನು ಅಂಕೆ-ಸಂಖ್ಯೆಗಳ ಮೇಲೆ ಪಂಥ ಕಟ್ಟಿ ಚೀಟಿಯನ್ನು ಬರೆದು ಕೊಡುತ್ತಿದ್ದಾಗ ಖಚಿತ ಮಾಹಿತಿ ಪಡೆದ ಕದ್ರಾ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ.

RELATED ARTICLES  ಜಿಲ್ಲೆಯ 11 ಕಡೆಗಳಲ್ಲಿ ಇಂದಿರಾ ಕ್ಯಾಂಟಿನ್! ನಡೆದಿದೆ ಯೋಜನೆ.

ಈ ವೇಳೆ ಆರೋಪಿಯೊಂದಿಗೆ ನಗದು ಹಣ 670 ರೂ. ಹಾಗೂ ಅಂಕೆ-ಸಂಖ್ಯೆ ಬರೆದ ಚೀಟಿ ಮತ್ತು ಬಾಲ್ ಪೆನ್ ಅನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕದ್ರಾ ಠಾಣೆ ಪಿಎಸ್‌ಐ ಮಹಾದೇವ ಭೋಸಲೆ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇನ್ನೊಂದು ಪ್ರಕರಣ

ಕಾರವಾರ ನಗರ ವ್ಯಾಪ್ತಿಯ ಪಾದ್ರಿಭಾಗದಲ್ಲಿ ಮಟ್ಕಾ ಜುಗರಾಟ ಆಡಿಸುತ್ತಿದ್ದ ಆರೋಪಿಯನ್ನು ನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಕಾರವಾರ ನಗರದ ದೇವಳಿವಾಡಾ ಪದ್ಮನಾಭನಗರದ ಅಂಗಡಿ ವ್ಯಾಪಾರಿ ರಿತೇಶ ಎಂಬಾತನೇ ಆರೋಪಿಯಾಗಿದ್ದಾನೆ.

ಈತನು ತನ್ನ ಲಾಭದ ಸಲುವಾಗಿ ಪಾದ್ರಿಬಾಗ ಹೋಗುವ ಸಾರ್ವಜನಿಕ ರಸ್ತೆಯ ತಿರುವಿನಲ್ಲಿ ಸಾರ್ವಜನಿಕರಿಗೆ 01ರೂ ಗೆ 80 ರೂ. ಕೊಡುವ ಷರತ್ತಿನ ಮೇಲೆ ಓ.ಸಿ ಮಟಕಾ ಜೂಗಾರಾಟದ ಅದೃಷ್ಟದ ಅಂಕೆ-ಸಂಖ್ಯೆಗಳ ಮೇಲೆ ಹಣದ ಪಂಥ ಕಟ್ಟಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಓ.ಸಿ ಚೀಟಿ ಬರೆದುಕೊಟ್ಟು ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿರುವಾಗ ದಾಳಿ ನಡೆಸಿದ ಪಿಐ ಸಿದ್ದಪ್ಪಎಸ್. ಬೀಳಗಿ ಅವರ ನೇತೃತ್ವದ ತಂಡವು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

RELATED ARTICLES  ಖ್ಯಾತಿಯನ್ನು ಗಳಿಸಿದ ಪ್ರತಿಭಾವಂತರು ಹವ್ಯಕ ಸಮಾಜದಲ್ಲಿದ್ದಾರೆ : ದಿನಕರ ಶೆಟ್ಟಿ.

ಈ ವೇಳೆ ಆರೋಪಿತನಿಂದ ನಗದು ಹಣ 3,435 ರೂ. ಹಾಗೂ ಓ.ಸಿ ಮಟಕಾ ಜೂಗಾರಾಟದ ಸಲಕರಣೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.