ಹೊನ್ನಾವರ: ತಮಗೆ ಸಿಕ್ಕಿರುವ ಒಂದು ಕೆ.ಜಿ ಬೆಳ್ಳಿ ಕಿರೀಟವನ್ನು ಮಾಲೀಕರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿರುವ ವ್ಯಕ್ತಿಯೊಬ್ಬ ಸಮಾಜಕ್ಕೆ ಮಾದರಿ ಸಂದೇಶ ನೀಡಿದ್ದಾರೆ.

ಮನೆ ಕಳ್ಳತನ, ದೇವಾಲಯಕ್ಕೆ ಕನ್ನ ಹಾಕುವವರೇ ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ರಸ್ತೆಯಲ್ಲಿ ಸಿಕ್ಕಿರುವ 1 ಕೆಜಿ.ಬೆಳ್ಳಿ ಕಿರೀಟವನ್ನು ಮಾಲೀಕರಿಗೆ ಒಪ್ಪಿಸಿ ಮಾನವಿಯತೆ ಮೆರೆದ ಲೋಕೇಶ್ ನಾಯ್ಕ ಸಮಾಜಕ್ಕೆ ಮಾದರಿ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.

RELATED ARTICLES  ಚಿತ್ರಿಗಿ: ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಧ್ವಜಾರೋಹಣ

ಹೊನ್ನಾವರ ತಾಲೂಕಿನ ಹಡಿನಬಾಳ ಗ್ರಾಮದ ದಾಸ ಮಹಾಲೆಯವರು ಕಳೆದ 20 ವರ್ಷಗಳಿಂದ ತಮ್ಮ ಮನೆಯಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿ ಕಿರೀಟ ತೊಡಿಸಿ ಪುಜಿಸುತ್ತಾ ಬಂದಿದ್ದಾರೆ. ಬೆಳಗಿನ ಜಾವ ಗಣಪತಿ ಮೂರ್ತಿ ತರಲು ತೆರಳುವ ಸಂದರ್ಭದಲ್ಲಿ ರಸ್ತೆಯಲ್ಲಿ ಬೆಳ್ಳಿ ಕಿರೀಟವನ್ನು ಕಳೆದುಕೊಂಡಿದ್ದರು.

ರಸ್ತೆಯಲ್ಲಿ ತೆರಳುತ್ತಿರುವ ವೇಳೆ, ಹುಡಗೋಡ ನಿವಾಸಿ ಲೋಕೇಶ ಗಣಪತಿ ನಾಯ್ಕ ಎನ್ನುವವರಿಗೆ ದಾರಿಯಲ್ಲಿ ಈ ಬೆಳ್ಳಿ ಕಿರೀಟ ಸಿಕ್ಕಿತ್ತು. ಅದನ್ನು ಇಂದು ಸಾರ್ವಜನಿಕವಾಗಿ ನಾಗರತ್ನ ಮತ್ತು ಲೋಕೇಶ ನಾಯ್ಕ ದಂಪತಿಗಳು ದಾಸ ಮಹಾಲೆಯರಿಗೆ ಒಪ್ಪಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕಿರೀಟ ಕಳೆದುಕೊಂಡವರೂ ಹಬ್ಬದ ಸಂಭ್ರಮದಲ್ಲಿ ಈ ಘಟನೆಯಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

RELATED ARTICLES  200ನೇ ದಿನದ ಗೋಕರ್ಣ ಗೌರವ